ಮಂಗಳವಾರ, ಮೇ 17, 2022
23 °C

85 ದಶಲಕ್ಷ ಜನರ ಗೆಲುವು: ಬರದಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈರೊ (ಐಎಎನ್‌ಎಸ್): ‘ಇಂದು ಈಜಿಪ್ಟ್ ಮುಕ್ತ ಮತ್ತು ಹೆಮ್ಮೆಯ ರಾಷ್ಟ್ರವಾಗಿದೆ. ದೇಶವನ್ನು ದೇವರು ಹರಸಲಿ’- ಇದು ಮುಬಾರಕ್ ಅವರ ಅಧಿಕಾರ ತ್ಯಾಗಕ್ಕೆ ವಿಶ್ವಸಂಸ್ಥೆ ಪರಮಾಣು ಸಂಸ್ಥೆಯ ಮಾಜಿ ಮುಖ್ಯಸ್ಥ ಹಾಗೂ ಪ್ರಮುಖ ವಿರೋಧಿ ನಾಯಕ ಎಲ್ ಬರದಾಯಿ ಅವರ ತತ್‌ಕ್ಷಣದ ಪ್ರತಿಕ್ರಿಯೆ.‘ನನ್ನ ಪ್ರತಿಕ್ರಿಯೆಯನ್ನು ವಿವರಿಸಲು ನನಗೆ ಪದಗಳೇ ಸಿಗುತ್ತಿಲ್ಲ. ಇದು ದೇಶದ 85 ದಶಲಕ್ಷ ಜನರಿಗೆ ಸಿಕ್ಕ ಗೆಲುವು, ಸಂತಸ ಮತ್ತು ವಿಮೋಚನೆ. ಮೊದಲ ಬಾರಿಗೆ ಈಜಿಪ್ಟ್ ವಿಮೋಚನೆಗೊಂಡಿದೆ. ಸಾಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರವಾಗುವ ದಿಕ್ಕಿನತ್ತ ಸರಿಯಾದ ಹೆಜ್ಜೆ ಇರಿಸಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.