ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಕಚೇರಿಗಳ ಕಣ್ಮರೆ

Last Updated 26 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನಗರದ ಮಧ್ಯಭಾಗ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಹಿಂದೆ ಎಲ್ಲಾ ರಸ್ತೆಗಳಲ್ಲಿಯೂ ಅಂಚೆ ಕಚೇರಿ ಸೌಲಭ್ಯವಿತ್ತು. ಜಾಗತೀಕರಣದ ಭರಾಟೆಗೆ ಸಿಕ್ಕಿ ಇವುಗಳೆಲ್ಲಾ ಬೆಳಗಾಗುವಷ್ಟರಲ್ಲಿ ಕಣ್ಮರೆಯಾಗಿವೆ. ಈಗ ಎಂ. ಓ. ರವಾನಿಸಲು, ರಿಜಿಸ್ಟ್ರೇಷನ್ ಪತ್ರ, ಲಕೋಟೆಗಳನ್ನು ಪಡೆಯಲು ಅಂಚೆ ಕಚೇರಿಯನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

 ಕೆಲ ವರ್ಷಗಳ ಹಿಂದೆ ಬ್ರಿಗೇಡ್ ರಸ್ತೆಯಲ್ಲಿದ್ದ ಅಂಚೇ ಕಚೇರಿಯನ್ನು ಆ ರಸ್ತೆಯ ಅಡ್ಡರಸ್ತೆಯಲ್ಲಿರುವ ವ್ಯಾಪಾರಿ ಸಂಕೀರ್ಣಕ್ಕೆ ಸ್ಥಳಾಂತರಿಸಲಾಯಿತು. ಕಚೇರಿ ಹುಡುಕಲು ಗ್ರಾಹಕರು ಸ್ವಲ್ಪ ಕಷ್ಟಪಡಬೇಕಷ್ಟೇ. ಆದರೆ, ಸೌಲಭ್ಯವಂತೂ ಇದೆ. ಅದೇ ರೀತಿ ನಗರದ ಪ್ರಮುಖ ಸ್ಥಳಗಳಲ್ಲಿ ಕೊರಿಯರ್ ಕೇಂದ್ರಗಳಂತೆ ಚಿಕ್ಕ, ಚಿಕ್ಕ ಅಂಚೆ ಕಚೇರಿ ಸ್ಥಾಪಿಸುವುದು ಒಳಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT