ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಃಪುರ ಸಂಗೀತ, ನೃತ್ಯ

Last Updated 3 ಜೂನ್ 2012, 19:30 IST
ಅಕ್ಷರ ಗಾತ್ರ

ಪ್ರತಿ ವರ್ಷದಂತೆ ಪೊನ್ನಯ್ಯ ಲಲಿತಕಲಾ ಅಕಾಡೆಮಿ ಈ ಸಲವೂ ಸಂಗೀತ ಸಂಜೆ ಆಯೋಜಿಸಿತ್ತು. ವಿಚಾರ ಸಂಕಿರಣ, ಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳು ಕಲಾರಸಿಕರಿಗೆ ರಸದೌತಣ ನೀಡಿದವು.

ಮೊದಲ ದಿನ ಶತಾವಧಾನಿ ಡಾ. ಆರ್ ಗಣೇಶ್ ಅವರು `ನೃತ್ಯಕ್ಕಾಗಿ ಡಿವಿಜಿ~ ಎಂಬ ವಿಷಯದ ಬಗ್ಗೆ ಮಾತನಾಡಿದರು. ಜಯಾ ಅವರ ನಿರ್ದೇಶನದಲ್ಲಿ ಜೈನ್ ವಿಶ್ವವಿದ್ಯಾಲಯದ ಪ್ರದರ್ಶಕ ವಿಭಾಗದ ವಿದ್ಯಾರ್ಥಿಗಳು ನೀಡಿದ ನೃತ್ಯ ಪ್ರದರ್ಶನ ನೃತ್ಯಾಸಕ್ತರಿಗೆ ರಸದೌತಣ ನೀಡಿತು. ಶ್ಯಾಮಲಾ ಜಿ. ಭಾವೆ ಅವರು ನಡೆಸಿಕೊಟ್ಟ ಶಾಸ್ತ್ರೀಯ ಸಂಗೀತವೂ ಅರ್ಥಪೂರ್ಣವಾಗಿ ಮೂಡಿಬಂದಿತು.ವಿಚಾರ ಸಂಕಿರಣದಲ್ಲಿ ಜಯರಾಮರಾಜೇ ಅರಸ್, ಪ್ರೊ. ಕೆ. ಇ. ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಎರಡನೆಯ ದಿನದ ಕಾರ್ಯಕ್ರಮದಲ್ಲಿ ಪ್ರೊ. ಕಬ್ಬಿನಾಲೆ ವಸಂತ ಭಾರದ್ವಾಜ್ ಡಿ. ವಿ. ಜಿ ಸಾಹಿತ್ಯದ ಕುರಿತು ವಿಚಾರ ಮಂಡಿಸಿದರು. ವಸುಧಾ ಬಾಲಕೃಷ್ಣ ತಂಡದಿಂದ ಅಂತಃಪುರ ಸಂಗೀತ ಕಾರ್ಯಕ್ರಮ ನಡೆಯಿತು. ಅಕಾಡೆಮಿಯ ಕಲಾವಿದರಿಂದ ಅಂತಃಪುರ ನೃತ್ಯ ವೈಭವ ಕೂಡ ಮನೋಜ್ಞವಾಗಿ ಮೂಡಿ ಬಂದಿತು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT