ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧ ಮಗುವಿನ ಚಿಕಿತ್ಸೆಗೆ ನೆರವು ನೀಡಿ

Last Updated 13 ಸೆಪ್ಟೆಂಬರ್ 2011, 10:10 IST
ಅಕ್ಷರ ಗಾತ್ರ

ನಾನೊಬ್ಬ ಸ್ವಂತ ಜಮೀನು, ಸೂರು ಇಲ್ಲದ ಕಡುಬಡವ. ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವೆ. ಆದರೆ ನನ್ನ ಮಗ ರಂಗನಾಥ (9) ಅಂಧನಾಗಿದ್ದು, ಕೋಟ್ಸ್ ಪ್ಲಸ್ ಸಿಂಡ್ರೋಮ್ ಹಾಗೂ ನ್ಯೂರೋಜೆನಿಕ್ ಬ್ಲಾಡರ್ ಎಂಬ ಕಾಯಿಲೆಗಳಿಂದ ಬಳಲುತ್ತಿದ್ದಾನೆ.

ಆತನಿಗೆ ಕಳೆದ 8 ತಿಂಗಳಿನಿಂದ ಚಿಕಿತ್ಸೆ ಕೊಡಿಸುತ್ತಿದ್ದೇನೆ. ಈವರೆಗೆ ಚಿಕಿತ್ಸೆಗಾಗಿ ಮೂರುವರೆ ಲಕ್ಷ ರೂಪಾಯಿಗಳಿಗೂ ಅಧಿಕ ಹಣ ಖರ್ಚು ಮಾಡಿದ್ದೇನೆ. ಈ ಹಣ ಹೊಂದಿಸಲು ಸಾಲ ಸಹ ಮಾಡಿದ್ದೇನೆ.

ಅಷ್ಟೇ ಅಲ್ಲದೇ ಆತನ ಔಷಧೋಪಚಾರಕ್ಕಾಗಿ ಪ್ರತಿ ತಿಂಗಳಿಗೆ 20,000 ರೂಪಾಯಿಗಳಿಗೂ ಅಧಿಕ ಹಣ ಖರ್ಚಾಗುತ್ತಿದೆ. ಅದನ್ನು ಭರಿಸಲು ನಾನು ಅಸಹಾಯಕನಾಗಿದ್ದೇನೆ. ಆದ್ದರಿಂದ ದಾನಿಗಳು ಉದಾರವಾಗಿ ನೆರವು ನೀಡಬೇಕಾಗಿ ಕೋರುವೆ.

ನನ್ನ ಹೆಸರಿನಲ್ಲಿರುವ ಎಸ್‌ಬಿಎಂ ಗಂಡಸಿ ಶಾಖೆ ಅಕೌಂಟ್ ನಂ. 54014919846, ಇಲ್ಲಿಗೆ ಚೆಕ್ ಅಥವಾ ನಗದನ್ನು ಜಮೆ ಮಾಡಬಹುದು. 
- ನರಸಿಂಹ, (ಮೊ: 9141352376),

ಅಂಚೆ ವಿಳಾಸ: ನರಸಿಂಹ,
s/o ರಂಗಪ್ಪ, ಸೆಲೂನ್ ಶಾಪ್,  ಗಂಡಸಿ (ಹಳೆ ಬಸ್ ನಿಲ್ದಾಣ) ಅರಸೀಕೆರೆ ತಾಲೂಕು, ಹಾಸನ ಜಿಲ್ಲೆ, ಕರ್ನಾಟಕ ರಾಜ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT