ಇದೇ ಸಂದರ್ಭದಲ್ಲಿ ಖಾತೆದಾರರ ಗೋಪ್ಯತೆಯನ್ನೂ ಕಾಪಾಡುವಂತೆ ಸೂಚಿಸಿದೆ. ಭಾರತವೂ ಸೇರಿದಂತೆ ಇತರೆ ದೇಶಗಳ ಗ್ರಾಹಕರು ಹಣ ಠೇವಣೆ ಇಡುವಾಗ ತೆರಿಗೆ ಪಾವತಿ ಮಾಡಲಾಗಿದೆಯೇ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕು ಎಂದು ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಆದರೆ ಖಾತೆದಾರರ ವಿವರಗಳನ್ನು ವಿನಿಮಯ ಮಾಡಿಕೊಳ್ಳಲು ಸ್ವಿಟ್ಜರ್ಲೆಂಡ್ ಒಪ್ಪಿಲ್ಲ.