ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರೊಪೆಟಲ್ ಟೆಕ್ನಾಲಜೀಸ್:21ರಿಂದ ಐಪಿಒ

Last Updated 18 ಫೆಬ್ರುವರಿ 2011, 17:05 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ, ವಿದ್ಯುತ್ ಮತ್ತು ಪರಿಸರ ಸೇವೆ ಒದಗಿಸುವ ಬೆಂಗಳೂರು ಮೂಲದ ಅಕ್ರೊಪೆಟಲ್ ಟೆಕ್ನಾಲಜಿಸ್ ಲಿಮಿಟೆಡ್ ತನ್ನ ವಹಿವಾಟು ವಿಸ್ತರಣೆ ಉದ್ದೇಶಕ್ಕೆ ಪ್ರಾಥಮಿಕ ಬಂಡವಾಳ ಮಾರುಕಟ್ಟೆ ಪ್ರವೇಶಿಸಲು ನಿರ್ಧರಿಸಿದ್ದು,  ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ್ಙ 170 ಕೋಟಿ ಸಂಗ್ರಹಿಸಲು ಮುಂದಾಗಿದೆ.

  ತಲಾ  ್ಙ 10 ಮುಖಬೆಲೆಯ ಷೇರುಗಳನ್ನು ಇದೇ  21ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ಈ ಸಾರ್ವಜನಿಕ ನೀಡಿಕೆಯು ಫೆಬ್ರುವರಿ 24ರಂದು ಅಂತ್ಯಗೊಳ್ಳಲಿದೆ.  ಪ್ರತಿ ಷೇರಿಗೆ ್ಙ 88ರಿಂದ ್ಙ 90 ಬೆಲೆ ಪಟ್ಟಿ ನಿಗದಿ ಮಾಡಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಿ. ರವಿ ಕುಮಾರ್ ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಐಪಿಒ’ ಮೂಲಕ ಸಂಗ್ರಹವಾಗುವ ಬಂಡವಾಳವನ್ನು ಹೊಸೂರು ರಸ್ತೆಯಲ್ಲಿ ಸಾಫ್ಟ್‌ವೇರ್ ಅಭಿವೃದ್ಧಿ ಕೇಂದ್ರ, ಕಾರ್ಪೊರೇಟ್ ಕಚೇರಿ ಸ್ಥಾಪನೆ, ವಿದೇಶಗಳಲ್ಲಿ ಕಚೇರಿ ಮತ್ತು ವಹಿವಾಟು ವಿಸ್ತರಣೆ, ಸಣ್ಣ ಉದ್ದಿಮೆಗಳ ಸ್ವಾಧೀನ ಮತ್ತಿತರ ಉದ್ದೇಶಕ್ಕೆ ಬಳಸಲಾಗುವುದು ಎಂದರು.

2001ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಂಸ್ಥೆಯು ಎಂಜಿನಿಯರಿಂಗ್ ವಿನ್ಯಾಸ, ಆರೋಗ್ಯ ಸೇವೆ, ಮೂಲ ಸೌಕರ್ಯ ನಿರ್ವಹಣೆ - ಭದ್ರತೆ ಮತ್ತಿತರ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭಗಳಲ್ಲಿಯೂ ಸಂಸ್ಥೆಯ ವಹಿವಾಟು ಮತ್ತು ವರಮಾನ ಸ್ಥಿರವಾಗಿ ಬೆಳವಣಿಗೆ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT