ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ದಾಸೋಹದ ಪ್ರಥಮ ಮಠ: ಶ್ಲಾಘನೆ

Last Updated 23 ಜನವರಿ 2011, 9:20 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಯದೇವ ಮುರುಘರಾಜೇಂದ್ರ ಶ್ರೀಗಳ 54ನೇ ಸ್ಮರಣೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
20ನೇ ಶತಮಾನದ ಆರಂಭದಲ್ಲಿ ಜಯದೇವಶ್ರೀಗಳು ಸ್ಥಾಪಿಸಿದ ಹಾಸ್ಟೆಲ್‌ಗಳು ಲಕ್ಷಾಂತರ ಬಡ ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕು ಮೂಡಿಸಿ,  ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿವೆ ಎಂದರು.

ಸಮಾಜದಲ್ಲಿ ತುಂಬಿರುವ ಅಂಧಶ್ರದ್ಧೆ, ಕಂದಾಚಾರಗಳನ್ನು ದೂರ ಮಾಡುವ ದೃಷ್ಟಿಯಿಂದ ಶಿವಮೂರ್ತಿ ಶರಣರು ಶ್ರಮಿಸುತ್ತಿದ್ದಾರೆ. ಅದಕ್ಕಾಗಿ ಅವರು ಪ್ರವಾಹದ ವಿರುದ್ಧ ಸಾಕಷ್ಟು ಈಜಿದ್ದಾರೆ. ಜಾತಿಗೊಂದು ಮಠ ಸ್ಥಾಪಿಸುವ ಮೂಲಕ, ಅಂತರಜಾತಿ ವಿವಾಹ ನೆರವೇರಿಸುವ ಮೂಲಕ ಬಸವಣ್ಣನವರ ಆದರ್ಶ ಪಾಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ವಿಧಾನಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ದುರ್ಜನರ ಸಕ್ರಿಯತೆಗಿಂತ ಸಜ್ಜನರ ನಿಷ್ಕ್ರೀಯತೆ ಬಹು ಅಪಾಯಕಾರಿ. ಪ್ರಸಕ್ತ ರಾಜಕಾರಣ ಕುಲಗೆಟ್ಟು ಹೋಗಿರುವುದೂ ಇದೇ ಕಾರಣದಿಂದ. ಕೆಟ್ಟ ಪ್ರತಿನಿಧಿಗಳು ಆಯ್ಕೆಯಾಗಲು ಮತದಾರ ನಿಷ್ಕ್ರೀಯತೆ ಕಾರಣ. ಇದನ್ನು ಹೋಗಲಾಡಿಸಲು ರಾಜಕಾರಣಿಗಳಿಗೆ ಹಾಗೂ ಮತದಾರರಿಗೆ ಸಂಸ್ಕಾರದ ಶಿಕ್ಷಣ ಅಗತ್ಯವಿದೆ ಎಂದು ವಿಶ್ಲೇಷಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಸ್. ಶಿವಶಂಕರ್ ಮಾತನಾಡಿ, ಪವಿತ್ರವಾದ ಮತವನ್ನು ದುಡ್ಡುಕೊಟ್ಟು ಖರೀದಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಕಾರಣದ ಶುದ್ಧಿ ಆಗಬೇಕಿದೆ. ಅದಕ್ಕೆ ಮಠಾಧೀಶರ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಮೇಯರ್ ಎಂ.ಜಿ. ಬಕ್ಕೇಶ್, ಉದ್ಯಮಿ ಅಥಣಿ ವೀರಣ್ಣ, ಬಸವಪ್ರಭು ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ  ಪ್ರತಿಭಾವಂತ ವಿದ್ಯಾರ್ಥಿಗಳಾದ ಮಾನಸ ಹಾಗೂ ಮಹಮದ್ ಪಾಶ ಅವರನ್ನು ಸನ್ಮಾನಿಸಲಾಯಿತು.

ಜಯದೇವ ಸ್ಮರಣೋತ್ಸವದಲ್ಲಿ ಇಂದು
ಜಯದೇವ ಜಗದ್ಗುರುಗಳ ಸ್ಮರಣೋತ್ಸವ ಸಮಿತಿ: ಶಿವಯೋಗಾಶ್ರಮ. ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರ 54ನೇ ಸ್ಮರಣೋತ್ಸವ. ಸಹಜ ಶಿವಯೋಗ: ನೇತೃತ್ವ: ಶಿವಮೂರ್ತಿ ಮುರುಘಾ ಶರಣರು. ಸಮ್ಮುಖ: ಪ್ರಸನ್ನಾನಂದ ವಾಲ್ಮೀಕಿ ಸ್ವಾಮೀಜಿ, ಜಯದೇವ ಸ್ವಾಮೀಜಿ. ಮುಖ್ಯ ಅತಿಥಿಗಳು: ಅಥಣಿ ಎಸ್. ವೀರಣ್ಣ, ಬಿ. ಲೋಕೇಶ್, ಹಾಲಮ್ಮ. ಬೆಳಿಗ್ಗೆ 7.30ಕ್ಕೆ. ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ. ಉದ್ಘಾಟನೆ: ಶಿವಮೂರ್ತಿ ಮುರುಘಾ ಶರಣರು. ಮುಖ್ಯ ಅತಿಥಿಗಳು: ಡಾ.ಎಸ್.ಎಂ. ಎಲಿ, ಡಾ.ಜಿ.ಸಿ. ಬಸವರಾಜ್. ಬೆಳಿಗ್ಗೆ 10ಕ್ಕೆ. ‘ಜಯದೇವಶ್ರೀ’ ಶೂನ್ಯಪೀಠ ಪ್ರಶಸ್ತಿ ಪ್ರದಾನ ಮತ್ತು ಸಾರ್ಥಕ ಸಮಾವೇಶ. ನೇತೃತ್ವ: ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ. ‘ಜಯದೇವ ಶ್ರೀ’ ಪ್ರಶಸ್ತಿ ಪ್ರದಾನ: ಪಾಟೀಲ ಪುಟ್ಟಪ್ಪ ಅವರಿಗೆ. ‘ಶೂನ್ಯಪೀಠ’ ಪ್ರಶಸ್ತಿ ಪ್ರದಾನ: ಕೆ.ಎಸ್. ನಿಸಾರ್ ಅಹಮದ್, ಎಂ. ಜಯಣ್ಣ, ಮತ್ತು ಜಡೆಯ ಸಿದ್ದೇಶ್ವರ ಬಿಲ್ವಾಶ್ರಮಕ್ಕೆ. ಮುಖ್ಯಅತಿಥಿಗಳು: ಜಯಂತ್ ಕಾಯ್ಕಿಣಿ,  ಸಿದ್ದರಾಮಯ್ಯ, ಇಬ್ರಾಹಿಂ ಸಕಾಫಿ. ಸಂಜೆ 6ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT