ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಸಿಲಿಂಡರ್‌ ರೂ3.46 ತುಟ್ಟಿ

Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗೃಹ ಬಳಕೆ ಅನಿಲ ಸಿಲಿಂಡರ್‌ (ಎಲ್‌ಪಿಜಿ) ಬೆಲೆ ರೂ 3.46 ಏರಿಕೆಯಾಗಿದೆ. ವಿತರಕರಿಗೆ ನೀಡುವ ಕಮಿಷನ್‌ ಶೇ 9ರಷ್ಟು ಏರಿಸಿ­ರುವ ಹಿನ್ನೆಲೆಯಲ್ಲಿ ಸರ್ಕಾರ ಸಿಲಿಂಡರ್‌ ಬೆಲೆ ಏರಿಕೆ ಮಾಡಿದೆ.

ಈ ದರ ಮಂಗಳವಾರದಿಂದಲೇ  ಅನ್ವಯವಾಗಲಿದೆ. ವಿತರಕರಿಗೆ 14.2 ಕಿಲೋ ಸಿಲಿಂಡರ್‌ಗೆ ನೀಡಲಾಗುತ್ತಿರುವ ಕಮಿಷ­ನನ್ನು ರೂ 3.46 ಹೆಚ್ಚಿಸಲಾಗಿದೆ. ಗೃಹ ಬಳಕೆ ಅನಿಲ ಸಿಲಿಂಡರ್‌ ಬೆಲೆಯನ್ನು ಅದೇ ಪ್ರಮಾಣದಲ್ಲಿ ಏರಿಕೆ ಮಾಡ­ಲಾಗಿದೆ ಎಂದು ತೈಲ ಸಚಿವಾಲಯ ತಿಳಿಸಿದೆ.

ಹೆಚ್ಚಿಸಲಾದ ಕಮಿಷನ್‌ ಹೊರೆ­ಯನ್ನು ಗ್ರಾಹಕರಿಗೆ ವರ್ಗಾಯಿಸ­ಲಾಗಿದೆ. ಇದು ಮಂಗಳವಾರದಿಂದಲೇ ಜಾರಿಗೆ ಬರಲಿದೆ.
ಇದರಿಂದ ಪ್ರತಿ ಸಿಲಿಂಡರ್‌ಗೆ ವಿತರಕ­ರಿಗೆ ನೀಡುವ ಕಮಿಷನ್‌ ಹಣ 40.71 ರೂಪಾಯಿ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT