ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣು ಸುರಕ್ಷತೆಗೆ ಇನ್ನಷ್ಟು ಒತ್ತು

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪರಮಾಣು ಸ್ಥಾವರ ಮತ್ತು ವಿಕಿರಣಗಳ ಸುರಕ್ಷತೆಗೆ  ಮತ್ತಷ್ಟು ಒತ್ತು ನೀಡುವ, ಇವುಗಳ ನಿಯಂತ್ರಣವನ್ನು ಕಾನೂನು ಚೌಕಟ್ಟಿಗೆ ತರಲು ಪ್ರಾಧಿಕಾರವೊಂದನ್ನು ರಚಿಸುವ ಉದ್ದೇಶ ಹೊಂದಿರುವ `ಅಣು ಸುರಕ್ಷತೆ ನಿಯಂತ್ರಣ ಪ್ರಾಧಿಕಾರ ಮಸೂದೆ- 2011~ಯನ್ನು ಸರ್ಕಾರ ಲೋಕಸಭೆಯಲ್ಲಿ ಬುಧವಾರ ಮಂಡಿಸಿದೆ.
ಪ್ರಧಾನಮಂತ್ರಿ ಕಾರ್ಯಾಲಯದ ರಾಜ್ಯ ಖಾತೆ ಸಚಿವ ವಿ. ನಾರಾಯಣಸ್ವಾಮಿ ಈ ಮಸೂದೆಯನ್ನು ಮಂಡಿಸಿದ್ದಾರೆ.

ಸುರಕ್ಷತೆಗೆ ವೈಜ್ಞಾನಿಕ ದೃಷ್ಟಿಕೋನವಿರುವ ಗರಿಷ್ಠ ಗುಣಮಟ್ಟ ಕಾಯ್ದುಕೊಳ್ಳಲು ನಿಯಂತ್ರಣ ಪ್ರಾಧಿಕಾರ ರಚಿಸುವ ಪ್ರಸ್ತಾವದ ಜೊತೆಗೆ ವಿಕಿರಣ ಸುರಕ್ಷತೆ ಕುರಿತ ನೀತಿ ಪರಾಮರ್ಶಿಸುವ ಮತ್ತು ಆ ಬಗ್ಗೆ ಸಲಹೆ- ಸೂಚನೆ ನೀಡಲು ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಮಂಡಳಿ ರಚಿಸುವ ಪ್ರಸ್ತಾವವು ಈ              ಮಸೂದೆಯಲ್ಲಿದೆ.

ಈ ಮಂಡಳಿಯು ಮೇಲ್ಮನವಿ ಸ್ವೀಕರಿಸುವ ಸಕ್ಷಮ ಪ್ರಾಧಿಕಾರ ಕೂಡ ಆಗಿದ್ದು, ತೊಂದರೆಗೊಳಪಟ್ಟವರು ಈ ಮಂಡಳಿಗೆ ಮನವಿ ಸಲ್ಲಿಸುವ ಅವಕಾಶವನ್ನು ಮಸೂದೆಯಲ್ಲಿ ಕಲ್ಪಿಸಲಾಗಿದೆ.ವಿಕಿರಣ ಮತ್ತು ಅಣುಶಕ್ತಿ ನಿರ್ವಹಣೆ ಮಾಡುವವರು ಸೇರಿದಂತೆ ಜನಸಾಮಾನ್ಯರು ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಉದ್ದೇಶಿತ ಅಣು ಸುರಕ್ಷತೆ ನಿಯಂತ್ರಣ ಪ್ರಾಧಿಕಾರವು ಅಗತ್ಯ ಕ್ರಮ ಕೈಗೊಳ್ಳಲಿದೆ.

ರಾಷ್ಟ್ರ ರಕ್ಷಣೆ ಮತ್ತು ಭದ್ರತಾ ಕ್ಷೇತ್ರದಲ್ಲಿ ಅಣು ಶಕ್ತಿ ಬಳಕೆಯ ಬಗ್ಗೆಯೂ ನಿಯಂತ್ರಣ ಮಂಡಳಿ ರಚಿಸಲಾಗುವುದು ಎಂಬ ಅಂಶಗಳು ಮಸೂದೆಯಲ್ಲಿವೆ.ಪ್ರಕೃತಿ ವಿಕೋಪದಿಂದ ಜಪಾನ್ ಅಣು ಸ್ಥಾವರಗಳ ಮೇಲಾದ ಹಾನಿಯ ಹಿನ್ನೆಲೆಯಲ್ಲಿ ಭಾರತದ ಅಣು ಸ್ಥಾವರಗಳ ಸುರಕ್ಷತೆಯನ್ನು ಮತ್ತಷ್ಟು ಬಲ ಪಡಿಸಲಾಗುವುದು ಎಂದು ಪ್ರಧಾನಿ ಮನಮೋಹನ್ ಸಿಂಗ್ ಕಳೆದ ಬಜೆಟ್ ಅಧಿವೇಶನದಲ್ಲಿ ಭರವಸೆ ನೀಡಿದ್ದರು.

ಅದರಂತೆ ಈಗ ಈ ಮಸೂದೆ ಮಂಡನೆ ಆಗಿದೆ. ಜಪಾನ್ ಅಣು ಸ್ಥಾವರಗಳ ಮೇಲಾದ ತೀವ್ರ ಹಾನಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸಂಸದರು, ಭಾರತದಲ್ಲಿನ ಅಣು ಸ್ಥಾವರಗಳ ಸುರಕ್ಷತೆ ಬಗ್ಗೆ ಧ್ವನಿ ಎತ್ತಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT