ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್: ಕಾಶೀನಾಥ್, ಜೋಸೆಫ್‌ಗೆ ಚಿನ್ನ

Last Updated 14 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಕಾಶೀನಾಥ್ ನಾಯ್ಕ ಹಾಗೂ ಎಂ.ಜಿ.ಜೋಸೆಫ್ ಅವರು ಮಂಗಳವಾರ ಇಲ್ಲಿ ಕೊನೆಗೊಂಡ 51ನೇ ರಾಷ್ಟ್ರೀಯ ಸೀನಿಯರ್ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದರು. ಆದರೆ ನಾಲ್ಕು ದಿನ ಪಾರಮ್ಯ ಮೆರೆದ ಕೇರಳ ಮತ್ತೆ ಸಮಗ್ರ ಚಾಂಪಿಯನ್ ಪಟ್ಟ ಪಡೆಯಿತು.

ಕಾಮನ್‌ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತ ಕಾಶೀನಾಥ್ ಮಂಗಳವಾರ ಕಂಠೀರವ ಕ್ರೀಡಾಂಗಣದೊಳಗೆ ಇಳಿಯುತ್ತಿದ್ದಂತೆ ಚಪ್ಪಾಳೆಯ ಸುರಿಮಳೆ ಲಭಿಸಿತು.

ಅಭಿಮಾನಿಗಳ ನಿರೀಕ್ಷೆಗೆ ಶಿರಸಿಯ ಕಾಶಿ ಸ್ಪಂದಿಸಿದರು. ಮಳೆಯ ನಡುವೆಯೂ ಜಾವೆಲಿನ್ ಥ್ರೋನಲ್ಲಿ ಕಾಶೀನಾಥ್ (73.77 ಮೀ.) ಮೊದಲ ಸ್ಥಾನ ಪಡೆದು ಮತ್ತೊಮ್ಮೆ ಜೋರು ಚಪ್ಪಾಳೆ ಗಿಟ್ಟಿಸಿಕೊಂಡರು.

ಪ್ರತಿಸ್ಪರ್ಧಿಗಳಿಂದ ಅವರಿಗೆ ಅಷ್ಟೇನು ಸವಾಲು ಎದುರಾಗಲಿಲ್ಲ. ಆದರೆ ಅಚ್ಚರಿ ಫಲಿತಾಂಶ ಬಂದಿದ್ದು 200 ಮೀ.ನಲ್ಲಿ. ಮೊದಲ ಬಾರಿ ರಾಷ್ಟ್ರೀಯ ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸಿದ ಎಂಇಜಿಯ ಜೋಸೆಫ್ ಮೊದಲ ಸ್ಥಾನ ಪಡೆದರು. ಫೇವರಿಟ್ ಎನಿಸಿದ್ದ ತಮಿಳುನಾಡಿನ ಮಣಿಕಂದ ಅರ್ಮುಗಮ್ ಅವರನ್ನು ಹಿಂದಿಕ್ಕಿದ್ದು ವಿಶೇಷ. 

3000ಮೀ.ಸ್ಟೀಪಲ್ ಚೇಸ್‌ನಲ್ಲಿ ಉತ್ತರಪ್ರದೇಶದ ಸುಧಾ ಸಿಂಗ್ (10:01.24) ನೂತನ ಕೂಟ ದಾಖಲೆ ನಿರ್ಮಿಸಿದರು. ಕಳೆದ ವರ್ಷ ಕೇರಳದ ಒ.ಪಿ.ಜೈಶಾ (10:03.05) ಸ್ಥಾಪಿಸಿದ್ದ ದಾಖಲೆ ಅಳಿಸಿ ಹೋಯಿತು. ಸುಧಾ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದರು.

800 ಮೀ.ನಲ್ಲಿ ರಾಜಸ್ತಾನದ ಘಮಾಂಡ ರಾಮ್ ಗೆರೆ ದಾಟುವ ಮೊದಲೇ ಸಂಭ್ರಮಿಸಲು ಶುರು ಮಾಡಿದರು. ಆದರೆ ಒಮ್ಮೆಲೇ ಮುನ್ನುಗ್ಗಿದ ಕೇರಳದ ಸಂಜೀಶ್ ಜೋಸೆಫ್ ಮೊದಲ ಸ್ಥಾನ ಪಡೆದರು.

ಫಲಿತಾಂಶ ಇಂತಿವೆ: ಪುರುಷರ ವಿಭಾಗ: 200 ಮೀ.: ಎಂ.ಜಿ.ಜೋಸೆಫ್ (ಕರ್ನಾಟಕ; 21.81 ಸೆ.)-1, ಮಣಿಕಂದ ಅರ್ಮುಗಮ್ (ತಮಿಳುನಾಡು; 21.88 ಸೆ.)-2, ಮಯೂರ್ ಮಲ್ಬಿಯ (ಗುಜರಾತ್; 21.90 ಸೆ.)-3. 800 ಮೀ.: ಸಂಜೀಶ್ ಜೋಸೆಫ್ (ಕೇರಳ; 1:47.34)-1, ಘಮಾಂಡ ರಾಮ್ (ರಾಜಸ್ತಾನ; 1:47.37)-2, ಸತ್ನಮ್ ಸಿಂಗ್ (ಪಂಜಾಬ್; 1:48.31)-3. 110 ಮೀ.ಹರ್ಡಲ್ಸ್: ಸುರೇಂದ್ರ (ತಮಿಳುನಾಡು; 14.62 ಸೆ.)-1, ಎಂ.ಕೃಷ್ಣ ಬೀಥೊವನ್ (ಮಣಿಪುರ;14.66 ಸೆ.)-2, ಎಂ.ಕೆ.ಸುಮಂತ್ (ಕರ್ನಾಟಕ; 15.14ಸೆ.)-3. ಜಾವೆಲಿನ್ ಥ್ರೋ: ಕಾಶೀನಾಥ್ ನಾಯ್ಕ (ಕರ್ನಾಟಕ; 73.77 ಮೀ.)-1, ಅಮಿತ್ ಮಜುಮ್‌ದಾರ್ (ಬಿಹಾರ; 71.18 ಮೀ.)-2, ರಾಜೇಂದ್ರ ಸಿಂಗ್ (ಹರಿಯಾಣ; 70.68 ಮೀ.)-3. 4್ಡ100 ಮೀ.ರಿಲೇ: ತಮಿಳುನಾಡು (41.33 ಸೆ.)-1, ಕೇರಳ (41.58 ಸೆ.)-2, ಕರ್ನಾಟಕ (41.83 ಸೆ.)-3. ಲಾಂಗ್‌ಜಂಪ್: ಅಮೃತ್‌ಪಾಲ್ ಸಿಂಗ್ (ಪಂಜಾಬ್; 7.81 ಮೀ.)-1, ಅಂಕಿತ್ ಶರ್ಮ (ಮಧ್ಯಪ್ರದೇಶ; 7.74 ಮೀ.)-2, ಸುಧೀರ್ (ಹರಿಯಾಣ; 7.70ಮೀ.)-3. 4್ಡ400 ಮೀ.ರಿಲೇ: ಕೇರಳ (3:14.08)-1, ಕರ್ನಾಟಕ (3:14.59)-2, ಪಂಜಾಬ್ (3:15.51)-3.
ಮಹಿಳೆಯರ ವಿಭಾಗ: 4್ಡ400 ಮೀ.ರಿಲೇ: ಕೇರಳ (3:44.81)-1, ಆಂಧ್ರಪ್ರದೇಶ (4:00.51)-2, ತಮಿಳುನಾಡು (4:03.71)-3. ಷಾಟ್‌ಪಟ್: ಪಿ.ಉದಯ ಲಕ್ಷ್ಮಿ (ಆಂಧ್ರಪ್ರದೇಶ; 14.14 ಮೀ.)-1, ವಸುಮತಿ (ತಮಿಳುನಾಡು; 13.24 ಮೀ.)-2, ಸೋನಿಯಾ (ಹರಿಯಾಣ; 13.13 ಮೀ.)-3. 4್ಡ100 ಮೀ.ರಿಲೇ: ಕೇರಳ (46.99 ಸೆ.)-1, ತಮಿಳುನಾಡು (47.65 ಸೆ.)-2, ಪಶ್ಚಿಮ ಬಂಗಾಳ (47.87 ಸೆ.)-3. 200 ಮೀ.: ಕೆ.ಮೃದುಳಾ (ಆಂಧ್ರಪ್ರದೇಶ; 24.93 ಸೆ.)-1, ಅರ್ಚನಾ (ತಮಿಳುನಾಡು; 25.27 ಸೆ.)-2, ರೆಬೆಕ್ಕಾ ಜೋಸ್ (ಕರ್ನಾಟಕ; 25.38 ಸೆ.)-3. 100 ಮೀ.ಹರ್ಡಲ್ಸ್: ಎಂ.ಎಂ.ಅಂಚು (ಕೇರಳ; 13.90ಸೆ.)-1, ಕಲಾವಾಣಿ (ತಮಿಳುನಾಡು; 14.60 ಸೆ.)-2. ವಿ.ಹಾಣಿ (ಚತ್ತೀಸ್‌ಗಡ; 15.22ಸೆ.)-3. 800 ಮೀ.: ಟಿಂಟು ಲೂಕಾ (ಕೇರಳ; 2:05.32)-1, ಎಸ್.ಆರ್.ಬಿಂದು (ಕೇರಳ; 2:10.32)-2, ಪವಿತ್ರಾ (ತಮಿಳುನಾಡು; 2:12.60)-3. 3000ಮೀ.ಸ್ಟೀಪಲ್ ಚೇಸ್: ಸುಧಾ ಸಿಂಗ್ (ಉತ್ತರಪ್ರದೇಶ; 10:01.24)-1, ಪ್ರಿಯಾಂಕ ಸಿಂಗ್ ಪಟೇಲ್ (ಉತ್ತರಪ್ರದೇಶ; 10.21.37)-2, ಒ.ಪಿ.ಜೈಶಾ (ಪಂಜಾಬ್; 10:25.10)-3.

ಅತ್ಯುತ್ತಮ ಅಥ್ಲೀಟ್: ಪುರುಷರ ವಿಭಾಗ: ಸಂಜೀವ್ ಜೋಸೆಫ್ (ಕೇರಳ; 800 ಮೀ.). ಮಹಿಳೆಯರ ವಿಭಾಗ: ಮಯೂಖಾ ಜಾನಿ (ಕೇರಳ; ಲಾಂಗ್‌ಜಂಪ್).

ತಂಡ ಚಾಂಪಿಯನ್: ಪುರುಷರು: ಕೇರಳ (4 ಚಿನ್ನ, 3 ಬೆಳ್ಳಿ, 2 ಕಂಚು). ಮಹಿಳೆಯರು: ಕೇರಳ (9 ಚಿನ್ನ, 4 ಬೆಳ್ಳಿ, 5 ಕಂಚು). ಸಮಗ್ರ ಚಾಂಪಿಯನ್: ಕೇರಳ (ಒಟ್ಟು 13 ಚಿನ್ನ, 7 ಬೆಳ್ಳಿ, 7 ಕಂಚು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT