ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್ಸ್ ಕೂಟ: ವೆಂಕಟರಾವ್, ಸೌಮೇಂದ್ರ ಚಾಂಪಿಯನ್ಸ್

Last Updated 19 ಡಿಸೆಂಬರ್ 2010, 11:15 IST
ಅಕ್ಷರ ಗಾತ್ರ

ಮೈಸೂರು: ಕೆ.ವೆಂಕಟರಾವ್ ಮತ್ತು ಸೌಮೇಂದ್ರ ಭಕ್ತ ಇಲ್ಲಿ ನಡೆದ ಪವರ್ ಗ್ರಿಡ್ ಅಂತರ ವಲಯ ಅಥ್ಲೆಟಿಕ್ಸ್ ಕೂಟದಲ್ಲಿ ಕ್ರಮವಾಗಿ 400 ಮೀ. ಓಟ ಮತ್ತು ಎತ್ತರ ಜಿಗಿತ ಸ್ಪರ್ಧೆಯಲ್ಲಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು.

ಭಾರತದ ಪವರ್ ಗ್ರಿಡ್ ಕಾರ್ಪೊರೇಷನ್‌ನ ದಕ್ಷಿಣ ವಲಯ ಟ್ರಾನ್ಸ್‌ಮಿಷನ್ ಸಿಸ್ಟಮ್ ವತಿಯಿಂದ ಶನಿವಾರ ನಗರದ ಓವಲ್ ಮೈದಾನದಲ್ಲಿ ನಡೆದ ‘ಪವರ್ ಗ್ರಿಡ್ ಅಂತರ ವಲಯ ಅಥ್ಲೆಟಿಕ್ಸ್ ಕೂಟ’ದ 400 ಮೀ. ಓಟವನ್ನು ಕೆ.ವೆಂಕಟರಾವ್ (ಎಸ್‌ಆರ್‌ಟಿಎಸ್-1) 1:07.10 ಸೆಕೆಂಡುಗಳಲ್ಲಿ ಗುರಿಯನ್ನು ಮುಟ್ಟುವ ಮೂಲಕ ಪ್ರಶಸ್ತಿಗೆ ಮುತ್ತಿಕ್ಕಿದರು.

ಎತ್ತರ ಜಿಗಿತ ಸ್ಪರ್ಧೆಯಲ್ಲಿ ಭರವಸೆಯ ಆಟಗಾರ ಸೌಮೇಂದ್ರ ಭಕ್ತ 1.40ಮೀ. ಎತ್ತರ ಜಿಗಿಯುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಗೌರವ್ ವರ್ಮ ಕೂಡ 1.40ಮೀ. ಎತ್ತರ ಜಿಗಿದು ದ್ವಿತೀಯ ಸ್ಥಾನ ಪಡೆದರು. ಲಚ್ಮಾ ನಾಯಕ್ ಮತ್ತು ಆರ್.ಸಿ. ಪೌಲ್ ಇಬ್ಬರೂ ಆಟಗಾರರು 1.30 ಮೀ. ಎತ್ತರ ಜಿಗಿದು 3ನೇ ಸ್ಥಾನವನ್ನು ಹಂಚಿಕೊಂಡದ್ದು ವಿಶೇಷವಾಗಿತ್ತು.

ಫಲಿತಾಂಶ: 400ಮೀ.ಓಟ: 1)ಕೆ.ವೆಂಕಟರಾವ್, ಎಸ್‌ಆರ್‌ಟಿಎಸ್-1 (1:07.10ಸೆ), 2) ಸುನಿಲ್ ಕುಮಾರ್, ಎನ್‌ಆರ್‌ಟಿಎಸ್-1 (1:07.28ಸೆ) 3) ಗೋಪಾಲ್ ಭಜಂತ್ರಿ, ಎಸ್‌ಆರ್‌ಟಿಎಸ್-2 (1:07.94ಸೆ)

800ಮೀ.ಓಟ: 1) ಎ.ಗಿರೀಶ್‌ಕುಮಾರ್ (ಎಸ್‌ಆರ್‌ಟಿಎಸ್-2), 2) ಪಿ.ಸಿ.ಸಾಹು (ಎಸ್‌ಆರ್‌ಟಿಎಸ್-1), 3) ಎಂ.ಲಕ್ರ (ಇಆರ್‌ಟಿಎಸ್-1),

ಉದ್ದ ಜಿಗಿತ: 1)ಜಿ.ಹನ್‌ಸ್ದಾ (ಇಆರ್‌ಟಿಎಸ್-2), 2) ಮಹಾವೀರ್ ಓರನ್ (ಇಆರ್‌ಟಿಎಸ್-1), 3) ಜೇಮ್ಸ್ ಬಾಸ್ಟಿನ್ (ಎಸ್‌ಆರ್‌ಟಿಎಸ್-2)

ಡಿಸ್ಕಸ್ ಥ್ರೊ: 1)ಟಿ.ಮರುದುವನನ್ (ಎಸ್‌ಆರ್‌ಟಿಎಸ್-2), 2) ಜಸ್ವಂತ್ ಸಿಂಗ್ (ಎನ್‌ಆರ್‌ಟಿಎಸ್-2) 3) ಜಿಎಸ್ ಚೌಹಾಣ್ (ಕಾರ್ಪೊರೇಟ್ ಸೆಂಟರ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT