ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್ಸ್: ಪ್ರೇಮ್‌ಕುಮಾರ್‌ಗೆ ಕಂಚು

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ  ಕುಮಾರವೇಲು ಪ್ರೇಮ್‌ಕುಮಾರ್ ಚೀನಾದಲ್ಲಿ ಆರಂಭವಾದ  ಐದನೇ ಒಳಾಂಗಣ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು.

ಶನಿವಾರ ಆರಂಭವಾದ ಈ ಚಾಂಪಿಯನ್‌ಷಿಪ್‌ನಲ್ಲಿ 19 ವರ್ಷದ ಈ ಅಥ್ಲೀಟ್ 7.62ಮೀಟರ್ ದೂರ ಜಿಗಿಯುವ ಮೂಲಕ ಕಂಚು ತಮ್ಮದಾಗಿಸಿಕೊಂಡರು.

ಈ ಮೂಲಕ ಭಾರತದ ಅಥ್ಲೀಟ್ ನಿರ್ಮಿಸಿದ್ದ ದಾಖಲೆಯನ್ನು ಉತ್ತಮ ಪಡಿಸಿದರು. ಏಳು ವರ್ಷಗಳ ಹಿಂದೆ ಪಟ್ಟಾಯಾದಲ್ಲಿ ನಡೆದ ಕೂಟದಲ್ಲಿ ಭಾರತದ ಮಹಾ ಸಿಂಗ್ 7.49 ಮೀ. ದೂರ ಜಿಗಿದಿದ್ದರು.

1500 ಮೀ. ಓಟದ ಸ್ಪರ್ಧೆಯಲ್ಲಿ ಕಾರಿಯಪ್ಪ ರಂಜನ್ ನಾಲ್ಕನೇ ಸ್ಥಾನ ( 4:00.03ಸೆಕೆಂಡ್) ಪಡೆದರು. ಕೇವಲ 0.2ಸೆಕೆಂಡ್‌ಗಳ ಅಂತರದಲ್ಲಿ ಕಂಚಿನ ಪದಕ ಜಯಿಸುವ ಅವಕಾಶ ತಪ್ಪಿಸಿಕೊಂಡರು.

ಹೈಜಂಪ್‌ನಲ್ಲಿ ಸಹನಾ ಕುಮಾರಿ ನಾಲ್ಕನೇ ಸ್ಥಾನ ಪಡೆದರು. ಈ ಸ್ಫರ್ಧಿ 1.80ಮೀ ಎತ್ತರ ಜಿಗಿದರು. ಚೀನಾದ ಜೇಂಗ್ ಕ್ಸಿಂಗ್ (1.92ಮೀ) ಚಿನ್ನ ಜಯಿಸಿದರು. ಪಿ.ಜೆ. ವಿನೋದ್ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT