ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕ ರಕ್ತದೊತ್ತಡದಿಂದ ಜ್ಞಾಪಕ ಶಕ್ತಿ ಕುಸಿತ

Last Updated 22 ಫೆಬ್ರುವರಿ 2011, 15:30 IST
ಅಕ್ಷರ ಗಾತ್ರ

ಹ್ಯೂಸ್ಟನ್ (ಪಿಟಿಐ): ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟರಾಲ್ ಮುಂತಾದ ಸಮಸ್ಯೆಗಳನ್ನು ಹೊಂದಿರುವ ಮಧ್ಯವಯಸ್ಕರು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವುದು ಮಾತ್ರವಲ್ಲದೆ ಗ್ರಹಣ ಶಕ್ತಿ ಮಾತ್ತು ನೆನಪಿನ ಶಕ್ತಿಯ ಸಮಸ್ಯೆಯನ್ನೂ ಎದುರಿಸುವ ಸಾಧ್ಯತೆಗಳು ಹೆಚ್ಚು ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ.

ಹೃದಯ ಮತ್ತು ರಕ್ತ ಸಂಬಂಧಿ ಸಮಸ್ಯೆಗಳನ್ನು ಹೊಂದಿರುವವರ ಗ್ರಹಿಕೆಯ ಸಾಮರ್ಥ್ಯ ವೇಗವಾಗಿ ಕ್ಷೀಣಿಸುತ್ತದೆ.

ಹೃದ್ರೋಗ ಸಮಸ್ಯೆಯ ಅಪಾಯಕ್ಕೆ ಹೋಲಿಸಿದರೆ ಇದು ತೀವ್ರವಾಗಿರುತ್ತದೆ. ರಕ್ತದೊತ್ತಡ ಮತ್ತು ಕೊಲೆಸ್ಟರಾಲ್ ಸಮಸ್ಯೆ ಕಡಿಮೆಯಿರುವ ಜನರಿಗೆ ಹೋಲಿಸಿದರೆ, ಅಧಿಕ ಸಮಸ್ಯೆಯಿರುವವರಲ್ಲಿ ಒಟ್ಟಾರೆ ಗ್ರಹಣಶಕ್ತಿ 10 ವರ್ಷದಷ್ಟು ವೇಗವಾಗಿ ಕ್ಷೀಣಿಸುತ್ತದೆ ಎಂದು ಫ್ರೆಂಚ್ ರಾಷ್ಟ್ರೀಯ ಆರೋಗ್ಯ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಯ ಸಾರಾ ಕಫಾಷಿಯಾನ್ ನೇತೃತ್ವದಲ್ಲಿ ನಡೆದ ಅಧ್ಯಯನ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT