ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಯಮಿತ ವಿದ್ಯುತ್‌ ಕಡಿತ: ರೈತರ ಆಕ್ರೋಶ

Last Updated 1 ಜನವರಿ 2014, 20:00 IST
ಅಕ್ಷರ ಗಾತ್ರ

ಹೊಸಕೋಟೆ: ಪಟ್ಟಣದ ಸುತ್ತಮುತ್ತ­ಲಿನ ಹಳ್ಳಿಗಳಲ್ಲಿ ರಾತ್ರಿ ವೇಳೆ ವಿದ್ಯುತ್ ನಿಲುಗಡೆ ಮಾಡುವುದನ್ನು ಕೂಡಲೇ ನಿಲ್ಲಿಸ­ಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

ಮಂಗಳವಾರ ಇಲ್ಲಿನ ಬೆಸ್ಕಾಂ ಕಚೇರಿ­ಯಲ್ಲಿ ನಡೆದ ಸಭೆ­ಯಲ್ಲಿ ಈ ಒತ್ತಾಯ ಕೇಳಿ ಬಂತು. ‘ಹಗಲು ಹೊತ್ತಿನಲ್ಲಿ 4 ಗಂಟೆ ಮಾತ್ರ ಮೂರು ಫೇಸ್‌ ವಿದ್ಯುತ್‌ ನೀಡಲಾಗುತ್ತಿದೆ. ಇದರಿಂದ ಬೆಳೆಗಳಿಗೆ ನೀರು ಹಾಯಿ­ಸಲು ಸಾಧ್ಯವಾಗುತ್ತಿಲ್ಲ’ ಎಂದು ಅಳಲು ತೋಡಿ­ಕೊಂಡರು.

ಮಾಲೂರು ವಿದ್ಯುತ್ ವಿತರಣಾ ಕೇಂದ್ರದ ಬದಲು ಏಕರಾಜಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊಸ­­ಕೋಟೆ ಸೇರಿದಂತೆ ಸುತ್ತ­ಮುತ್ತಲ ಹಳ್ಳಿ­ಗಳಿಗೆ ವಿದ್ಯುತ್‌ ಸರಬ­ರಾಜು ಮಾಡ­ಬೇಕು. ದೊಡ್ಡಗಟ್ಟಿಗ­ನಬ್ಬೆ ಸುತ್ತ­ಮುತ್ತಲ ಹಳ್ಳಿಗಳಿಗೆ ಮಂಜೂರಾಗಿ­ರುವ ನಿರಂತರ ಜ್ಯೋತಿ ಯೋಜನೆ ಕಾಮ­ಗಾರಿ­ ತಕ್ಷಣ ಕೈಗೊಳ್ಳ­ಬೇಕು. ನಗರ ಪ್ರದೇಶ­ದ-­ವರಿಗೆ ಕೊಡು­ವಷ್ಟೇ ವಿದ್ಯುತ್ ಅನ್ನು ಗ್ರಾಮಾಂತರ ಪ್ರದೇಶಕ್ಕೂ ನೀಡ­ಬೇಕು ಎಂದರು.

ಬೆಸ್ಕಾಂ ಮುಖ್ಯ ಎಂಜಿನಿಯರ್ ಉದಯಕುಮಾರ್, ‘ಸಮಸ್ಯೆ  ಬಗೆಹ­ರಿಸಲು ಪ್ರಾಮಾಣಿಕ ಪ್ರಯತ್ನ ಮಾಡ­ಲಾಗು­ವುದು’ ಎಂದರು.
ರೈತ ಮುಖಂಡರಾದ ದೊಡ್ಡ­ಹುಲ್ಲೂರು ರಾಜ­ಗೋಪಾಲ್, ಮುನಿ­ರಾಜು, ಭಗವಂತಪ್ಪ, ಕೊಳತೂರು ಹನು­ಮಂತೇಗೌಡ, ಮರಿಯಪ್ಪ ಉಪಸ್ಥಿತರಿದ್ದರು.

11ರಿಂದ ಕ್ರಿಕೆಟ್‌ ಪಂದ್ಯಾಟ
ಪಟ್ಟಣದ ಅಣ್ಣಮ್ಮದೇವಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿ ಆಶ್ರಯ­ದಲ್ಲಿ ರಾಜ್ಯ ಮಟ್ಟದ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್  ಪಂದ್ಯಾಟ ಇಲ್ಲಿನ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಇದೇ 11 ರಿಂದ 14 ರ ವರೆಗೆ ನಡೆಯಲಿದೆ.

ವಿಜೇತ ತಂಡಕ್ಕೆ ₨50,000 ಹಾಗೂ ದ್ವಿತೀಯ ಸ್ಥಾನಿ ತಂಡಕ್ಕೆ ₨25,000 ನೀಡಲಾಗುವುದು. ಹೆಸರು ನೋಂದಣಿಗೆ ಜ.4 ಕಡೆಯ ದಿನ. ಹೆಚ್ಚಿನ ವಿವರಗಳಿಗೆ ಎಚ್.ಟಿ.­ವೆಂಕಟೇಶ್ ಮೊಬೈಲ್‌ ಸಂಖ್ಯೆ. 9916679367 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT