ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದೀಪ ಅಭಿವ್ಯಕ್ತಿ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕಲಾವಿದ ಅನುದೀಪ್ ಸಹಾ ಅವರ ವಿಭಿನ್ನ ಚಿತ್ರಣ ಅವರನ್ನು ಇತರ ಕಲಾವಿದರಿಂದ ಬೇರೆಯಾಗಿ ನಿಲ್ಲಿಸುತ್ತದೆ. ಇವರ ಕಲಾಕೃತಿಗಳು ನಿರೂಪಣಾ ಶೈಲಿ ಹೊಂದಿರುವುದೇ ಇದಕ್ಕೆ ಕಾರಣ. ಮನಸ್ಸಿನಲ್ಲಿ ಮೂಡುವ ಯಾವುದೇ ಒಂದು ಪರಿಕಲ್ಪನೆಯನ್ನು ತಮ್ಮ ಮನೋ ಅಭಿವ್ಯಕ್ತಿಗೆ ಅನುಗುಣವಾಗಿ ಕುಂಚದಲ್ಲಿ ನಿರೂಪಿಸುವುದು ಇವರ ವಿಶೇಷತೆ.

ಇವರ ಕಲಾಕೃತಿಗಳಲ್ಲಿ ಮೈದಳೆದಿರುವ ಸಮಾಜದ ಅನೇಕ ಒಳಿತು-ಕೆಡುಕಿನ ಮುಖಗಳು ಯುವಜನತೆಯನ್ನು ಚಿಂತನೆಗೆ ಹಚ್ಚುವಂತಿವೆ. ಕಲಾವಿದರಾದ ಇವರು ತಮ್ಮ ಕುಂಚವನ್ನು ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಳಸುತ್ತಿರುವುದು ಸ್ತುತ್ಯಾರ್ಹ.

ಯುವಜನತೆಯ ಮನಸ್ಸನ್ನು ಬೌದ್ಧಿಕ ಸಂರ್ಘಷಕ್ಕೆ ಅಣಿಗೊಳಿಸುವ ರೀತಿಯಲ್ಲಿ ಬಿಂಬಿತವಾಗಿರುವ ಇವರ ಅಪರೂಪದ ಕಲಾಕೃತಿಗಳು ಅ.31ರ ವರೆಗೆ ಪ್ರದರ್ಶನಗೊಳ್ಳಲಿವೆ.
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT