ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧ ಕೃತ್ಯಗಳಿಂದ ವಿದ್ಯಾರ್ಥಿಗಳು ದೂರವಿರಬೇಕು

Last Updated 9 ಜುಲೈ 2012, 6:10 IST
ಅಕ್ಷರ ಗಾತ್ರ

ಬ್ಯಾಡಗಿ : ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಇಂದಿನ ಕಾಲೇಜು ವಿದ್ಯಾರ್ಥಿಗಳು ರ‌್ಯಾಗಿಂಗ್‌ನಂತಹ ಕೃತ್ಯದಲ್ಲಿ ತೊಡಗುವುದು ಅಪರಾಧವಾಗಿದ್ದು, ಆದಷ್ಟು ಇಂತಹ ಅಪರಾಧಗಳಿಂದ ವಿದ್ಯಾರ್ಥಿಗಳು ದೂರವಿರುವಂತೆ ದಿವಾಣಿ ನ್ಯಾಯಾಧೀಶ ಬಿ.ಜಿ.ಪ್ರಮೋದ ಸಲಹೆ ನೀಡಿದರು. 

  ಪಟ್ಟಣದ ಬಿಇಎಸ್‌ಎಂ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆಗಳು  ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತತ್ವ, ಆದರ್ಶ, ದೇಶಾಭಿಮಾನ  ಹಾಗೂ ಮಾನವೀಯ ಮೌಲ್ಯ ಗಳಂತಹ ಗುಣಗಳನ್ನು ಬೆಳೆಸಿಕೊಳ್ಳ ಬೇಕೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯ ವಿ.ಎಸ್.ಬೆಂಚಳ್ಳಿ, ಹಿರಿಯ ವಕೀಲರಾದ ಎಫ್.ಎಂ.ಮುಳಗುಂದ, ವಿ.ಎಸ್.ಕಡಗಿ,  ಸಂಘದ ಉಪಾಧ್ಯಕ್ಷ ಎಂ.ಕೆ.ವೀರನಗೌಡ್ರ ಉಪಸ್ಥಿತರಿದ್ದರು. ಸಿಪಿಐ ಎಂ.ಎಚ್.ಚಿಕ್ಕರೆಡ್ಡಿ ರ‌್ಯಾಗಿಂಗ್ ವಿರೋಧಿಸುವ ಕಾನೂನು ಕುರಿತು ಉಪನ್ಯಾಸ ನೀಡಿದರು. ಹಿರಿಯ ವಕೀಲ ಪಿ.ಆರ್.ಮಠದ ಮೋಟಾರು ವಾಹನ ಕಾಯ್ದೆ ಹಾಗೂ ಭಾರತಿ ಕುಲ್ಕರ್ಣಿ ಜನನ ಮರಣ ನೋಂದಣಿ ಕಾಯ್ದೆ ಕುರಿತು ಮಾಹಿತಿ ಒದಗಿಸಿದರು. ವಕೀಲರ ಸಂಘದ ಅಧ್ಯಕ್ಷ ಬಿ.ಎಸ್.ಚೂರಿ ಕಾರ್ಯಕ್ರ ಮದ ಅಧ್ಯಕ್ಷತೆ ವಹಿಸಿದ್ದರು.  ಸುಷ್ಮಾ ಗೊಡಚಿ ಪ್ರಾರ್ಥಿಸಿದರು. ಡಾ.ಪಿ.ಟಿ. ಲಕ್ಕಣ್ಣ ನವರ ಸ್ವಾಗತಿಸಿದರು. ಪ್ರೊ.ಪಿ.ಎಂ. ರಾಮಗಿರಿ ನಿರೂಪಿಸಿ ದರು. ಪ್ರೊ.ಎಸ್.ಡಿ.ಬಾಲಾಜಿ ರಾವ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT