ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪವಿತ್ರ ಮೈತ್ರಿಯಿಂದ ಸಮಸ್ಯೆ ಕಗ್ಗಂಟು?

Last Updated 20 ಅಕ್ಟೋಬರ್ 2012, 19:50 IST
ಅಕ್ಷರ ಗಾತ್ರ

ಬೆಂಗಳೂರು:  ರಾಜಕಾರಣಿಗಳು, ಗುತ್ತಿಗೆದಾರರು ಹಾಗೂ ಕೆಳಹಂತದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೌಕರರ ನಡುವಿನ ಅಪವಿತ್ರ ಮೈತ್ರಿ ಪರಿಣಾಮದಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ ಎನ್ನುವ ಅನುಮಾನವನ್ನು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಅಧಿಕಾರಿಯೊಬ್ಬರು ವ್ಯಕ್ತಪಡಿಸಿದ್ದಾರೆ.

`ಮೂಲದಲ್ಲೇ ಕಸ ಬೇರ್ಪಡೆ ಹಾಗೂ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಸಮಂಜಸವಾಗಿ ನಡೆಯದಿರಲು ಈ ಬಾಂಧವ್ಯವೇ ಕಾರಣ. ಮೂಲದಲ್ಲೇ ಕಸ ಪ್ರತ್ಯೇಕ ಮಾಡುವ ಪ್ರಕ್ರಿಯೆಗೆ ಉತ್ತೇಜನ ನೀಡಲು ಸಚಿವರು, ಶಾಸಕರು ಏಕೆ ಮುಂದಾಗುತ್ತಿಲ್ಲ~ ಎಂದು ಪ್ರಶ್ನಿಸಿರುವ ಅವರು, `ವಾರ್ಡ್‌ಮಟ್ಟದ ಎಂಜಿನಿಯರ್‌ಗಳಿಗೂ ಈ ವಿಷಯವಾಗಿ ಆಸಕ್ತಿ ಇಲ್ಲ. ಕೆಲವು ನಾಗರಿಕ ಸಂಘಟನೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಮಾತ್ರ ಕಸ ಬೇರ್ಪಡೆ ಕುರಿತಂತೆ ಜಾಗೃತಿ ಮೂಡಿಸಲು ಯತ್ನಿಸುತ್ತಿವೆ~ ಎಂದು ಹೇಳಿದ್ದಾರೆ.

`ಕಸ ಒಯ್ದು ಸುರಿಯುವಲ್ಲಿ ದೊಡ್ಡ ಪ್ರಮಾಣದ ಹಣ ಹೂಡಿಕೆ ಆಗುತ್ತಿರುವುದೇ ಇಂತಹ ಕಾನೂನುಬಾಹಿರ ಬಾಂಧವ್ಯಕ್ಕೆ ಕಾರಣವಾಗಿದೆ~ ಎಂದು ಅವರು ದೂರಿದ್ದಾರೆ. `ಬಿಬಿಎಂಪಿ ಪ್ರತಿವರ್ಷ ತ್ಯಾಜ್ಯ ವಿಲೇವಾರಿಗಾಗಿ ರೂ 450 ಕೋಟಿ ಖರ್ಚು ಮಾಡುತ್ತಿದ್ದು, ಅದರಲ್ಲಿ 300 ಕೋಟಿ ಮೊತ್ತವನ್ನು ಕೇವಲ ಸಾಗಾಟಕ್ಕಾಗಿ ವ್ಯಯಿಸಲಾಗುತ್ತದೆ. ಪಾಲಿಕೆ ದಾಖಲೆಗಳ ತನಿಖೆ ಮಾಡಿದರೆ ಕನಿಷ್ಠ ಪಕ್ಷ ಅರ್ಧದಷ್ಟು ನಕಲಿ ಬಿಲ್‌ಗಳು ಸಿಗುತ್ತವೆ~ ಎಂದು ಅವರು ಹೇಳಿದ್ದಾರೆ.

ಚುನಾವಣಾ ವರ್ಷ ಸಮೀಪಿಸಿದ್ದರಿಂದ ಹಣ ಮಾಡಲು ಹಲವು ರಾಜಕಾರಣಿಗಳಿಗೆ ತ್ಯಾಜ್ಯ ವಿಲೇವಾರಿ ಒಂದು ಸಾಧನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT