ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನಾದ ಖುಷಿಯಲ್ಲಿ...

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ನಡುಮನೆಯಲ್ಲಿ ದಿವಿನಾದ ಸೋಫಾ ಮೇಲೆ ಕುಳಿತ ಅಭಿಷೇಕ್ ಬಚ್ಚನ್ ಒಳಕೋಣೆಯಲ್ಲಿ ಕಂದಮ್ಮ ಅಳುವುದನ್ನು ಕೇಳಿಬಂದರೆ ದಿಢೀರನೆ ಎದ್ದು ಅತ್ತ ಸಾಗುತ್ತಾರೆ. ಅವರೀಗ ಅಪ್ಪನಾದ ಖುಷಿಯನ್ನು ಮನಃಪೂರ್ವಕವಾಗಿ ಅನುಭವಿಸುತ್ತಿದ್ದಾರೆ. ತಮ್ಮ ಬದುಕಿನ ಮಹತ್ವದ ಗಳಿಗೆ ಇದು ಎನ್ನುವ ಅವರು ಚಿತ್ರೀಕರಣವಿಲ್ಲದ ಎಲ್ಲಾ ಸಂದರ್ಭದಲ್ಲೂ ಈಗ ಮನೆಯಲ್ಲೇ ಉಳಿದುಬಿಡುತ್ತಾರೆ.

ಪಾರ್ಟಿಯ ಸಹವಾಸ ಇಲ್ಲ. ಮುದ್ದಿನ ಮಡದಿ ಐಶ್ವರ್ಯಾ, ಇಷ್ಟದ `ಬಿಟಿಯಾ~ (ಮಗಳು) ಜೊತೆ ಇದ್ದಾಗ ಹೊತ್ತು ಹೋಗುವುದೇ ಗೊತ್ತಾಗಲ್ಲ ಎನ್ನುವ ಅಭಿಷೇಕ್‌ಗೆ ಒಂದು ವಿಷಯಕ್ಕೆ ಮಾತ್ರ ಸಿಟ್ಟು. ವನಿತೆಯರನ್ನು `ಸೆಕ್ಸಿ~ ಎಂದೆಲ್ಲಾ ಕರೆಯುವುದು ಅವರಿಗೆ ಇಷ್ಟವಿಲ್ಲವಂತೆ. ಯಾರಾದರೂ ಹಾಗೆಂದರೆ ನಖಶಿಖಾಂತ ಉರಿದು ಹೋಗುತ್ತದೆ ಎನ್ನುವ ಅವರು ಅದಾಗಲೇ ಎರಡು ತಿಂಗಳ ಮಗಳಿಗೆ ಒಂದಿಷ್ಟು ಬೊಂಬೆಗಳನ್ನೂ ಕೊಂಡು ತಂದಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT