ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬಬ್ಬಾ, ವಿಶ್ವಕಪ್ ಮೆನು!

Last Updated 22 ಫೆಬ್ರುವರಿ 2011, 18:50 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡ ತಂಡಗಳು ಭಾರತೀಯ ಹೊಟೆಲ್‌ಗಳ ‘ಮೆನು’ವಿನ ಭಾಗವಾದರೆ ಯಾವ ತಂಡ ಯಾವ ತಿನಿಸಿನ ರೂಪದಲ್ಲಿ ಕಾಣಬಹುದು? ಇಲ್ಲಿದೆ ಒಂದು ಝಲಕ್. ಇಂಟರ್‌ನೆಟ್‌ನಲ್ಲಿ ಹಾರಾಡುತ್ತಿರುವ ಈ ಮೆನುವನ್ನು  ಇಲ್ಲಿ ಕೊಡಲಾಗಿದೆ  (ಕಡ್ಡಾಯವಾಗಿ ಓದಿ ಖುಷಿಪಡಲು ಮಾತ್ರ ಈ ಮೆನು!).

ಆಸ್ಟ್ರೇಲಿಯಾ: ಆಲೂ ಸಾಗು - ಹದವಾದ ಸಂಯೋಜನೆ; ಕಡೆಗಣಿಸಲು ಆಗದು
ಬಾಂಗ್ಲಾದೇಶ: ವೆಜ್ ಬಿರ್ಯಾನಿ - ದೊಡ್ಡ ಹುಡುಗರ ಜೊತೆ ಗುದ್ದಾಡಲು ಬಾಡಿನ ಅಭಾವ
ಕೆನಡಾ: ಲಿಂಬೆಹಣ್ಣಿನ ಉಪ್ಪಿನಕಾಯಿ - ತಿಂದಿದ್ದು ನೆನಪಿನಲ್ಲಿ ಉಳಿಯುವುದೇ ಇಲ್ಲ
ಇಂಗ್ಲೆಂಡ್: ಲ್ಯಾಂಬ್ (ಕುರಿಮರಿ) ಕೂರ್ಮಾ - ಅಸಂತೋಷದಲ್ಲಿ ಕೊನೆಗಾಣಿಸುವ ಸಪ್ಪೆ ಪಲ್ಯ
ಭಾರತ: ಚೆಪ್ಸ್ ಸ್ಪೇಶಲ್ - ಜೂಜುಕೋರರಿಗೆ ಹೇಳಿಮಾಡಿಸಿದ ಭೂರಿ ಭೋಜನ
ಐರ್ಲೆಂಡ್: ಫೈವ್ ಪಿಂಟ್ಸ್ ಆಫ್ ಕಿಂಗ್‌ಫಿಶರ್ - ತಮಾಷೆಗಾಗಿ ಮೀಸಲಾದ ಪೇಯ
ಕೀನ್ಯಾ: ಪಪ್ಪಾ ದಮ್ಸ್ - ಆರಂಭದಲ್ಲಿ ಜೀರ್ಣಿಸಿಕೊಳ್ಳಲು ತುಂಬಾ ಸುಲಭ
ಹಾಲೆಂಡ್: ಫಲಾವ್ - ಅಪಾಯಕಾರಿಯಲ್ಲದ ಉಪ ತಿನಿಸು
ನ್ಯೂಜಿಲೆಂಡ್: ತರ್ಕಾ ದಾಲ್ - ರುಚಿ ನೀಡದ ಖಾದ್ಯ; ಹಾಗೇ ಬಿಟ್ಟರೆ ಅಪಾಯ
ಪಾಕಿಸ್ತಾನ: ವಿಂಡ್‌ಆಲೂ (ಮಸಾಲೆ ಕರಿ) - ರುಚಿ ಹೇಗಿದೆ ತಿಳಿಯುವುದು ಕಷ್ಟ; ಸ್ಫೋಟಗೊಂಡರೆ ನಮಗೆ ಗೊತ್ತಿಲ್ಲ
ದಕ್ಷಿಣ ಆಫ್ರಿಕಾ: ಪ್ರಾನ್ ಜಲ್‌ಫ್ರೇಜಿ - ನೋಡಿದ ಕೂಡಲೇ ತಿನ್ನಬೇಕೆನಿಸುತ್ತದೆ; ಆಮೇಲೆ ವಿಷಾದ ಆವರಿಸುತ್ತದೆ
ಶ್ರೀಲಂಕಾ: ಮಾವಿನಕಾಯಿ ಚಟ್ನಿ - ಎಲ್ಲರಿಗೂ ಸಮಾನವಾಗಿ ರುಚಿ ನೀಡುವುದು ಗ್ಯಾರಂಟಿ
ವೆಸ್ಟ್ ಇಂಡೀಸ್: ಚಿಕನ್ ಟಿಕ್ಕಾ ಮಸಾಲಾ - 70ರ ದಶಕದಲ್ಲಿ ಪ್ರಸಿದ್ಧವಾಗಿತ್ತು; ಈಗ ಮೊದಲಿನ ನಾವೀನ್ಯ ಇಲ್ಲ
ಜಿಂಬಾಬ್ವೆ: ಉಳ್ಳಾಗಡ್ಡಿ ಭಜಿ - ನಿಮ್ಮನ್ನು ಅಳಿಸಲು ಬೇರೇನೂ ಬೇಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT