ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಹಣವಿಲ್ಲ: ಶಾಸಕ ಟೀಕೆ

Last Updated 18 ಸೆಪ್ಟೆಂಬರ್ 2013, 5:58 IST
ಅಕ್ಷರ ಗಾತ್ರ

ತುರುವೇಕೆರೆ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 5 ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಯೋಜನೆ ಹಮ್ಮಿ­­ಕೊಂಡಿಲ್ಲ. ಶಾಸಕರ ನಿಧಿ­ಯನ್ನೇ ಬಿಡುಗಡೆ ಮಾಡದ ಕಾರಣ ಕ್ಷೇತ್ರಗಳಲ್ಲಿ ನಯಾಪೈಸೆ ಅಭಿವೃದ್ಧಿ ಕೆಲಸ ಮಾಡಲಾಗುತ್ತಿಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಸುದ್ದಿಗೋಷ್ಠಿಯಲ್ಲಿ ದೂರಿದರು.

ಕಳೆದೊಂದು ವಾರದಿಂದ ಮಳೆ­ಯಾಗಿ ರಸ್ತೆಗಳು ಕೆಸರು ಗದ್ದೆಗಳಾಗಿವೆ. ಸಿಎಂಜಿಎಸ್ವೈ ಹಾಗೂ ಸುವರ್ಣ ಗ್ರಾಮ ಯೋಜನೆಯಡಿ ಸರ್ಕಾರ ಹಣ ಬಿಡು­ಗಡೆ ಮಾಡಿಲ್ಲ. ಹೀಗಾಗಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ ಎಂದರು.

ಕಾಂಗ್ರೆಸ್ ಮುಖಂ­ಡರು ವರ್ಗಾವಣೆ ದಲ್ಲಾಳಿಗಳಂತೆ ವರ್ತಿಸುತ್ತಿ­ದ್ದಾರೆ. ಸೆಪ್ಟೆಂಬರ್ ಮುಗಿಯುತ್ತಾ ಬಂದರೂ ಅಧಿಕಾರಿಗಳ ವರ್ಗಾವಣೆ ನಿಂತಿಲ್ಲ. ಅಧಿಕಾರಿಗಳನ್ನು ಅಮಾ­ನವೀಯ­ವಾಗಿ ನಡೆಸಿ­ಕೊಳ್ಳಲಾ­ಗುತ್ತಿದೆ ಎಂದು ಆರೋಪಿಸಿದರು. 

ಸ್ಥಳಿಯ ರೈತರು ಬೆಳೆದ ಅಕ್ಕಿ ಕೆಜಿಗೆ `18ರಂತೆ ಲಭ್ಯವಿದೆ. ಆದರೆ ಸರ್ಕಾರ ದೂರದ ಒಡಿಶಾದಿಂದ ಕೆಜಿಗೆ ` 25ರ ದರದಲ್ಲಿ ಅಕ್ಕಿ ಕೊಳ್ಳುತ್ತಿದೆ. ಇದರಿಂದ ಸುಮಾರು ರೂ.500 ಕೋಟಿಯಷ್ಟು ಆದಾಯ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಎಂದು ವಿಶ್ಲೇಷಿಸಿದರು.
ಮುಖಂಡರಾದ ಎನ್.ಆರ್.­ಸುರೇಶ್, ಜಫ್ರುಲ್ಲಾ, ಹಿರಣ್ಣಯ್ಯ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT