ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಸೇನಾ ವೆಚ್ಚ ಹೆಚ್ಚಳಕ್ಕೆ ಕಾಂಗ್ರೆಸ್‌ ಒಪ್ಪಿಗೆ

Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಎಎಫ್‌ಪಿ): ಸೇನಾ ವೆಚ್ಚ ಹೆಚ್ಚಳ ಮತ್ತು ಕ್ಯೂಬಾದ ಗ್ಯಾಂಟಾ ನಾಮೊ ಜೈಲಿನಲ್ಲಿ ಇರುವ ಶಂಕಿತ ಭಯೋತ್ಪಾದಕರನ್ನು ಸ್ಥಳಾಂತರಿಸಲು ಅವಕಾಶ ನೀಡುವ 2014ರ ಅಮೆರಿಕ ರಕ್ಷಣಾ ಮಸೂದೆಗೆ ಕಾಂಗ್ರೆಸ್‌ ಒಪ್ಪಿಗೆ ನೀಡಿದೆ.

ಇದಲ್ಲದೆ ಸೇನೆಯಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ ತಡೆಯಲು ಕಠಿಣ ಕ್ರಮ ಜರುಗಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸೇನಾ ನೆಲೆಗಳ ಸ್ಥಾಪನೆ, ಶಸ್ತ್ರಾಸ್ತ್ರ ಖರೀದಿ, ತರಬೇತಿ ಮತ್ತು ಶೇ 1ರಷ್ಟು ವೇತನ ಹೆಚ್ಚಳಕ್ಕಾಗಿ 55,210 ಕೋಟಿ ಡಾಲರ್‌ ವ್ಯಯ ಮಾಡಲು ಮತ್ತು ವಿದೇಶಗಳಲ್ಲಿ ನಿಯೋಜನೆಗೊಂಡಿರುವ ಸೇನಾ ತುಕಡಿಗಳ ಅಗತ್ಯಕ್ಕೆ 8,070 ಕೋಟಿ ಡಾಲರ್‌ ವ್ಯಯಿಸಲು ಹೊಸ ಮಸೂದೆ ಅವಕಾಶ ಕಲ್ಪಿಸುತ್ತದೆ.

ಒಬಾಮ ಅವರ ಮಹಾತ್ವಾ ಕಾಂಕ್ಷೆ ಯೋಜನೆಯಾಗಿದ್ದ ಆರೋಗ್ಯ ವಿಮೆ ಯೋಜನೆಯನ್ನು ವಿರೋಧಿಸಿ ಸೆನೆಟ್‌ ಮತ್ತು ಜನಪ್ರತಿನಿಧಿಗಳ ಸಭೆಯು ಬಜೆಟ್‌ ಮಸೂದೆ ತಡೆ ಹಿಡಿದ ರೀತಿ ಯಲ್ಲೇ ಇದಕ್ಕೂ ಅಡ್ಡಿ ಉಂಟಾಗ ಬಹುದು ಎಂಬ ಆತಂಕ ಎದುರಾಗಿತ್ತು.

ಆದರೆ ಡೆಮಾಕ್ರೆಟಿಕ್‌ ಮತ್ತು ರಿಪಬ್ಲಿಕನ್‌ ಪಕ್ಷಗಳ ಸಂಧಾನಕಾರರ ಪ್ರಯತ್ನದಿಂದಾಗಿ ಮಸೂದೆಯು ಅಂಗೀಕಾರವಾಗಿದೆ.

ಕ್ಯೂಬಾದಲ್ಲಿ ಇರುವ ವಿವಾದಾತ್ಮಕ ಶಂಕಿತ ಭಯೋತ್ಪಾದಕರ ಜೈಲನ್ನು ಸ್ಥಳಾಂತರಿಸುವ ಒಬಾಮ ಅವರ ಭರವಸೆ ಈಡೇರಿಕೆಗೆ ಈ ಮಸೂದೆ ಅವಕಾಶ ಮಾಡಿಕೊಟ್ಟಿದೆ. ಆದರೆ ಬಂಧಿತ ಕೈದಿಗಳನ್ನು ಯಾವುದೇ ಕಾರಣಕ್ಕೂ ಅಮೆರಿಕಕ್ಕೆ ಸ್ಥಳಾಂತರಿಸಬಾರದು ಎಂಬ ರಿಪಬ್ಲಿಕನ್‌ ಪಕ್ಷದ ಒತ್ತಾಯಕ್ಕೆ ಮಸೂದೆಯಲ್ಲಿ ಮನ್ನಣೆ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT