ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ನೀತಿ ಅನುಷ್ಠಾನಕ್ಕೆ ಸಂಸ್ಥೆ

Last Updated 6 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅರಣ್ಯ ನೀತಿ ಅನು­­ಷ್ಠಾನದ ಮೇಲ್ವಿಚಾರಣೆಗೆ ರಾಷ್ಟ್ರೀಯ ನಿಯಂತ್ರಣ ಸಂಸ್ಥೆ ಸ್ಥಾಪಿಸು­ವಂತೆ ಕೇಂದ್ರ ಸರ್ಕಾರಕ್ಕೆ ‘ಸುಪ್ರೀಂ’­ನಿರ್ದೇಶನ ನೀಡಿದೆ. ಇಂತಹ ಸಂಸ್ಥೆಯ ಅಗತ್ಯ ಇಲ್ಲ ಎಂಬ ಕೇಂದ್ರ ಸರ್ಕಾ­ರದ ವಾದವನ್ನು ಕೋರ್ಟ್‌ ತಿರಸ್ಕರಿಸಿದೆ.

ಈ ನಿರ್ದೇಶನವನ್ನು ಪಾಲಿಸಿರುವ ಬಗ್ಗೆ 2014ರ ಮಾರ್ಚ್‌ 31ರೊಳಗೆ ಪ್ರಮಾಣ ಪತ್ರ ಸಲ್ಲಿಸುವಂತೆಯೂ ನ್ಯಾಯ­­ಮೂರ್ತಿ ಎ.ಕೆ.ಪಟ್ನಾಯಕ್‌ ನೇತೃ­ತ್ವದ ಮೂವರು ನ್ಯಾಯಮೂರ್ತಿ­ಗಳನ್ನು ಒಳಗೊಂಡ ಅರಣ್ಯ ಪೀಠ ಆದೇಶ ನೀಡಿದೆ. ಎಷ್ಟು ರಾಜ್ಯಗಳಲ್ಲಿ ಸಾಧ್ಯವೋ ಅಷ್ಟು ರಾಜ್ಯ­ಗಳಲ್ಲಿ ನಿಯಂತ್ರಕರನ್ನು ನೇಮಿಸ­ಬೇಕು ಎಂದೂ  ಪೀಠ ಸೂಚಿಸಿದೆ.

ಅರಣ್ಯ ಕಾಯ್ದೆ ಅನ್ವಯ ನೀಡ­ಬೇಕಿ­ರುವ ಅನುಮತಿಗಳನ್ನು ಪರಿಸರ ಮತ್ತು ಅರಣ್ಯ ಸಚಿವಾಲಯವೇ ನೀಡಬೇಕು. ಆದರೆ 1998ರ ಅರಣ್ಯ ನೀತಿಯ ಅನು­ಷ್ಠಾನದ ಮೇಲ್ವಿಚಾರಣೆಯನ್ನು ನಿಯಂತ್ರಣ ಸಂಸ್ಥೆಯು ನೋಡಿಕೊಳ್ಳ­ಬೇಕು ಎಂದು ಪೀಠವು ಸ್ಪಷ್ಟಪಡಿಸಿದೆ.

ಈ ತೀರ್ಪು ದೂರಗಾಮಿ ಪರಿಣಾಮ­ವನ್ನು ಹೊಂದಿದೆ. ಇನ್ನು ಮುಂದೆ ಯೋಜನೆ­ಗಳಿಗೆ ಕಠಿಣ ಷರತ್ತುಗಳನ್ನು ಹೊಂದಿ­ರುವ ಇಐಎ ಪರಿಶೀಲನೆ ಮತ್ತು ಅನು­ಮತಿ ಪಡೆಯುವುದು ಸುಲಭವಲ್ಲ ಎಂದು ವಿಷಯದ ಅಧ್ಯಯನ ಮಾಡಿ­ರುವ ಹಿರಿಯ ವಕೀಲರೊಬ್ಬರು  ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT