ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯಾಧಿಕಾರಿಗಳಿಂದ ಯಂತ್ರ ವಶ: ಆರೋಪ

Last Updated 6 ಸೆಪ್ಟೆಂಬರ್ 2013, 20:09 IST
ಅಕ್ಷರ ಗಾತ್ರ

ಬೆಂಗಳೂರು: `ಬಡಿಗೆ ಮಾಡಲು ಉಪಯೋಗಿಸುವ ಸಣ್ಣ ಕಟ್ಟಿಗೆ ಕೊರೆಯುವ ಯಂತ್ರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಬಂಧ ಹೇರಿ ವಶಪಡಿಸಿಕೊಂಡಿದ್ದಾರೆ' ಎಂದು ಬಾಗಲಕೋಟೆ ಜಿಲ್ಲಾ ಗುಡಿ ಕೈಗಾರಿಕೆಗಳ ಮಾಲೀಕರ ಹಾಗೂ ಸಣ್ಣ ಕಟ್ಟಿಗೆ ಕೊರೆಯುವ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಎಸ್.ಮೂರಮಟ್ಟಿ ಅವರು ಆರೋಪಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಬಡಿಗೆ ವೃತ್ತಿಯನ್ನೇ ನೆಚ್ಚಿಕೊಂಡ ಅನೇಕ ಕುಟುಂಬಗಳಿವೆ. ನಿರ್ಬಂಧ ಹೇರಿ ವಶಪಡಿಸಿಕೊಂಡಿರುವ ಯಂತ್ರಗಳನ್ನು ಈ ಕೂಡಲೇ ನೀಡಿ, ಬಡಿಗೆ ವೃತ್ತಿಯನ್ನು ಮುಂದುವರೆಸಲು ಅನುವು ಮಾಡಿಕೊಡಬೇಕು' ಎಂದು ಆಗ್ರಹಿಸಿದರು.

`ರಾಜ್ಯ ಸರ್ಕಾರ ಹೊರಡಿಸಿರುವ ರಾಜ್ಯ ಪತ್ರದಲ್ಲಿ ಶ್ರೀಮಂತ ಜನರಿಗೆ ದೊಡ್ಡ ಸಾಮಿಲ್‌ಗಳು, ಫ್ಲೈವುಡ್ ಕಾರ್ಖಾನೆಯನ್ನು ಆರಂಭಿಸಲು ಅನುಕೂಲ ಮಾಡಿಕೊಡುವ ಆದೇಶವನ್ನು ಹೊರಡಿಸಿದ್ದಾರೆ. ಆದರೆ, ಬಡ ಬಡಿಗೆಯವರಿಗೆ ಅನುಕೂಲವಾಗುವಂತೆ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ' ಎಂದು ದೂರಿದರು.

`ಬಡಿಗೆ ಕೆಲಸವನ್ನು ನಗರಸಭೆ ಪ್ರದೇಶಗಳಲ್ಲಿ ಹಾಗೂ ಕೈಗಾರಿಕಾ ಒಳವಸಾಹತುವಿನಲ್ಲಿ ನಡೆಸಬೇಕೆಂದು ಪ್ರಕಟಿಸಿದೆ. ಹಳ್ಳಿ, ಗ್ರಾಮಗಳಲ್ಲಿ ಬಡಿಗೆ ವೃತ್ತಿ ಮಾಡಬಾರದೆಂದು ಹೇಳುತ್ತಿದ್ದಾರೆ. ಆದರೆ, ಅದನ್ನೇ ನಂಬಿಕೊಂಡು ಜೀವನ ನಡೆಸುವವರ ಬದುಕು ಮೂರಾಬಟ್ಟೆಯಾಗುತ್ತದೆ' ಎಂದು ಹೇಳಿದರು.

`ಗುಡಿ ಕೈಗಾರಿಕೆಗಳವರ ಹೋರಾಟಕ್ಕೆ ಜೆಡಿಯು ಬೆಂಬಲ ಸೂಚಿಸುತ್ತದೆ. ಸರ್ಕಾರ ಗುಡಿ ಕೈಗಾರಿಕೆಗಳ ಸಮಸ್ಯೆಗಳನ್ನು ಸೆ.15 ರೊಳಗೆ ಆಲಿಸಿ ಸ್ಪಂದಿಸಬೇಕು. ಸರ್ಕಾರ ಸ್ಪಂದಿಸದಿದ್ದರೆ, ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು' ಎಂದು ಜೆಡಿಯು ರಾಜ್ಯಾಧ್ಯಕ್ಷ ಎಂ.ಪಿ.ನಾಡಗೌಡ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT