ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆತಲೆನೋವಿಗೆ ಸ್ಥೂಲಕಾಯವೂ ಕಾರಣ

ಹೊಸ ಅಧ್ಯಯನದಿಂದ ಬಹಿರಂಗ
Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್‌(ಪಿಟಿಐ): ನಿಮಗೆ ನಿರಂತರವಾಗಿ ಅರೆತಲೆ­ನೋವೇ, ಹಾಗಿದ್ದರೆ ಅದಕ್ಕೆ ನಿಮ್ಮ ಸ್ಥೂಲಕಾಯವೂ ಒಂದು ಕಾರಣ ಇರಬಹುದು ಎಂದು ಹೊಸ ಅಧ್ಯಯನ ಒಂದು ಎಚ್ಚರಿಸಿದೆ.

ಸಂಶೋಧನೆಗೆ ಒಳಪಡಿಸಿದ ಜನರಲ್ಲಿ ಶೇ 81ರಷ್ಟು ಜನರಿಗೆ ಅರೆತಲೆ ನೋವು ಇರುವುದು ತಿಳಿದುಬಂದಿದ್ದು, ಅವರಲ್ಲಿ ಬಹುಪಾಲು ಸ್ಥೂಲಕಾಯ­ಹೊಂದಿದವರಾಗಿದ್ದಾರೆ.

ಆರೋಗ್ಯವಂತರಿಗೆ ಅರೆ ತಲೆನೋವು ಸಾಮಾನ್ಯವಾಗಿ ತಿಂಗಳಿಗೆ ಒಮ್ಮೆ ಬರುತ್ತದೆ. ಆದರೆ ಸ್ಥೂಲಕಾಯದವರಿಗೆ ಹದಿನೈದು ದಿನಕ್ಕೊಮ್ಮೆ ಎಂಬಂತೆ ತಿಂಗಳಲ್ಲಿ ಎರಡುಬಾರಿ ಬರುತ್ತದೆ ಎಂಬುದನ್ನು ಅಮೆರಿಕದ ಸಂಶೋಧಕರು ಪತ್ತೆ ಹಚ್ಚಿದ್ದಾರೆ.

‘ಬಹುಕಾಲದಿಂದ ಅರೆತಲೆ­ನೋವಿ­ನಿಂದ ಬಳಲುತ್ತಿರುವ ವರನ್ನು ಮತ್ತು ಸ್ಥೂಲಕಾಯ ಹೊಂದಿರುವವರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಸ್ಥೂಲ­ಕಾಯದವರಿಗೆ ಅರೆತಲೆನೋವಿನ ಸಮಸ್ಯೆ ಹೆಚ್ಚು. ದೇಹದ ತೂಕದಲ್ಲಿನ ಏರುಪೇರು ಸಹ ಅರೆತಲೆನೋವಿಗೆ ಒಂದು ಕಾರಣ. ಇದನ್ನು ಜನರಿಗೆ ಮತ್ತು ವೈದ್ಯರಿಗೆ ತಿಳಿಸುವುದೇ ನಮ್ಮ ಗುರಿ’ ಎನ್ನುತ್ತಾರೆ ಅಮೆರಿಕದ ಜಾನ್‌ ಹಾಪ್‌ಕಿನ್ಸ್‌ ಔಷಧ ವಿಶ್ವವಿದ್ಯಾ­ನಿಲಯದ ಸಂಶೋಧಕ ಬಿ ಲೀ ಪೀಟರ್‌ಲಿನ್‌.

47 ವಯಸ್ಸಿನ 3,862 ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅದರಲ್ಲಿ ಅವರ ತೂಕ ಮತ್ತು ಎತ್ತರ ಮತ್ತು ಅರೆತಲೆನೋವಿನ ಬಗ್ಗೆ ಮಾಹಿತಿ ಪಡೆಯಲಾಗಿತ್ತು. ಇವರಲ್ಲಿ 1,044 ಜನರು ಸ್ಥೂಲಕಾಯಿಗಳು ಮತ್ತು 188 ಜನರು ಪ್ರಾಸಂಗಿಕವಾಗಿ ಅರೆತಲೆ­ನೋವಿನ ಸಮಸ್ಯೆಯಿಂದ ಬಳಲು­ತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ.

‘ಈ ಅಧ್ಯಯನದಿಂದ ಬಂದ ಮಾಹಿತಿಯ ಪ್ರಕಾರ ಅರೆತಲೆನೋವಿಗೆ ಸ್ಥೂಲಕಾಯವೂ ಒಂದು ಕಾರಣ. ಆದ್ದರಿಂದ ನಿಯಮಿತ ಆಹಾರ ಮತ್ತು ವ್ಯಾಯಾಮ ಮಾಡುವುದನ್ನು ಅಳ­ವಡಿಸಿಕೊಂಡರೆ ಅರೆತಲೆನೋವಿನಿಂದ ಮುಕ್ತಿ ಪಡೆಯಬಹುದು’ ಎನ್ನುವುದು ಪೀಟರ್‌ಲಿನ್‌ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT