ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರು ಶೈಕ್ಷಣಿಕವಾಗಿ ಮುಂದೆ ಬರಬೇಕು

Last Updated 12 ಜನವರಿ 2012, 9:05 IST
ಅಕ್ಷರ ಗಾತ್ರ

ಲಿಂಗಸುಗೂರ: ಪ್ರತಿಯೊಂದು ರಂಗದ ಶ್ರಮಿಕ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವವರ ಪೈಕಿ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ ಜನತೆ ಹೆಚ್ಚಾಗಿ ಕಾಣಸಿಗುತ್ತಾರೆ. ಅವರಲ್ಲಿನ ಶೈಕ್ಷಣಿಕ ಕೊರತೆ ಇಂತಹ ದುಡಿಮೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿರಬಹುದು. ಕಾರಣ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಮುಂದೆ ಬರುವಂತೆ ಶಾಸಕ ಮಾನಪ್ಪ ವಜ್ಜಲ ಮನವಿ ಮಾಡಿದರು.

ಬುಧವಾರ ಕಸಬಾಲಿಂಗಸುಗೂರಿನಲ್ಲಿ ನಿರ್ಮಾಣಗೊಂಡ ಉರ್ದು ಪ್ರಾಥಮಿಕ ಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಮುದಾಯದ ಬೇಡಿಕೆ ಆಧರಿಸಿ ಶಾಲೆಗಳ ಸ್ಥಾಪನೆ ಮತ್ತು ವಸತಿ ನಿಲಯಗಳ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಅನೇಕ ಸಮಸ್ಯೆಗಳಿದ್ದು ಹಂತ ಹಂತವಾಗಿ ಪರಿಹರಿಸಲಾಗುವುದು. ಮಕ್ಕಳನ್ನು ಶಾಲೆಗೆ ತಪ್ಪದೆ ಕಳುಹಿಸುವ ಮೂಲಕ ಶಿಕ್ಷಕ ಸಮುದಯದೊಂದಿಗೆ ಸಹಕರಿಸುವಂತೆ ಸಲಹೆ ಮಾಡಿದರು.

ಶಾಲಾ ಸುಧಾರಣ ಸಮಿತಿ ಅಧ್ಯಕ್ಷ ಸೈಯದಸಾಹೇಬ ಖಾದ್ರಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ದುರುಗಮ್ಮ ರಾಮಸ್ವಾಮಿ, ಸದಸ್ಯರಾದ ಶಂಭುಲಿಂಗಪ್ಪ ಫೂಲಭಾವಿ, ಕುಪ್ಪಣ್ಣ ಮುಂಡರಗಿ, ತಿಮ್ಮಣ್ಣ ನಾಯಕ. ಮುಖಂಡರಾದ ಮಹಾಂತಯ್ಯ ಪಂಚಾಕ್ಷರಿಮಠ, ಲಾಲಅಹ್ಮದಸಾಬ, ಎಕ್ಬಾಲ ಹವಾಲ್ದಾರ, ಸಿದ್ಧನಗೌಡ ಪೊಲೀಸ್ ಪಾಟೀಲ, ಶಿವನಗೌಡ, ಪಿಡ್ಡನಗೌಡ, ಮಹಾದೇವಪ್ಪ ಶೆಟ್ಟಿ, ಹನುಮಂತಪ್ಪ ಹಿರೇಮನಿ, ಆಜಂಪಾಷ, ರಾಮಣ್ಣ ಗುತ್ತೆದಾರ.
ಶಿಕ್ಷಣ ಇಲಾಖೆ ಸಿಬ್ಬಂದಿಗಳಾದ ಸುಲೋಚನಾ ರೆಬಿನಾಳ, ಶಿವಾನಂದ, ಸಿರಾಜುದ್ದೀನ್, ಗಣಪತಿ ಪೂಜಾರಿ, ಜಟ್ಟೆಪ್ಪ, ಶೇಷಾವಲಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT