ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್‌ಖೈದಾ ನೂತನ ಮುಖ್ಯಸ್ಥನ ಮೇಲೆ ಕೆಂಗಣ್ಣು...

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ):  ಒಸಾಮ ಬಿನ್ ಲಾಡೆನ್ ಹತ್ಯೆಯ ರೀತಿಯಲ್ಲಿಯೇ ಅಲ್‌ಖೈದಾ ಸಂಘಟನೆಯ ನೂತನ ಮುಖ್ಯಸ್ಥ ಅಯ್‌ಮಾನ್ ಅಲ್ ಜವಾಹಿರಿಯನ್ನು ಬೇಟೆಯಾಡುವುದಾಗಿ ಅಮೆರಿಕ ಶಪಥ ಮಾಡಿದೆ.
ಜವಾಹಿರಿ ಮತ್ತು ಆತನ ಸಂಘಟನೆಯಿಂದ ಅಮೆರಿಕಕ್ಕೆ ಬೆದರಿಕೆ ಇದೆ.

ಹೀಗಾಗಿ ಲಾಡೆನ್‌ನನ್ನು ಕೊಂದಂತೆಯೇ ಆತನ ಸಹಚರರನ್ನು ಹಿಡಿಯುವುದು ಇಲ್ಲವೇ ಹತ್ಯೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಅಮೆರಿಕ ಸೇನಾ ಮುಖ್ಯಸ್ಥ ಅಡ್ಮಿರಲ್ ಮೈಕ್ ಮುಲ್ಲೆನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಜವಾಹಿರಿ ತಲೆಗೆ ಅಮೆರಿಕ ಸರ್ಕಾರ 25 ದಶಲಕ್ಷ ಡಾಲರ್ ಬಹುಮಾನ ಘೋಷಣೆ ಮಾಡಿದ್ದು, ಲಾಡೆನ್ ನಂತರ ಆತ ಅಲ್‌ಖೈದಾ ಸಂಘಟನೆಯ ಮುಖ್ಯಸ್ಥನಾಗಿ ನೇಮಕವಾಗಿರುವುದು ಅಚ್ಚರಿಯ ಸಂಗತಿ ಅಲ್ಲ ಎಂದರು.

ಅಲ್‌ಖೈದಾ ಸ್ಥಾಪನೆಯಾದಾಗಿನಿಂದ ಲಾಡೆನ್ ಅದರ ಮುಖ್ಯಸ್ಥನಾಗಿದ್ದ. ಆದರೆ ಈ ಸಂದರ್ಭದಲ್ಲಿ ಸಂಘಟನೆಯ ಮುಖ್ಯಸ್ಥರಾಗುವವರು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
ಲಾಡೆನ್ ಹೊಂದಿದ್ದ ಚಾಣಾಕ್ಷತನ ನೂತನ ಮುಖ್ಯಸ್ಥನಲ್ಲಿ ಇಲ್ಲ ಎಂದು ರಕ್ಷಣಾ ಕಾರ್ಯದರ್ಶಿ ಗೇಟ್ಸ್ ಹೇಳಿದರು.

ಲಾಡೆನ್ ಹೊಂದಿದ್ದ ಗುರಿಗಳನ್ನು ಅಲ್‌ಖೈದಾ ಸಂಘಟನೆ ಹಾಗೂ ಅದರ ಮಿತ್ರ ಸಂಘಟನೆಗಳ ಮುಖ್ಯಸ್ಥರು ಅನುಷ್ಠಾನಗೊಳಿಸುವುದು ಅಷ್ಟು ಸುಲಭವಲ್ಲ ಎಂದೂ ಅವರು ಅಭಿಪ್ರಾಯಪಟ್ಟರು.

`ಅಚ್ಚರಿ ಅಲ್ಲ~: ಈಜಿಪ್ಟ್ ಮೂಲದ ವೈದ್ಯ ಜವಾಹಿರಿಯನ್ನು ಭಯೋತ್ಪಾದಕ ಸಂಘಟನೆ ಅಲ್‌ಖೈದಾ ಮುಖ್ಯಸ್ಥನನ್ನಾಗಿ ನೇಮಕ ಮಾಡಿರುವ ಕುರಿತು ಅಚ್ಚರಿಯಾಗಿಲ್ಲ ಎಂದು ಶ್ವೇತ ಭವನ ಹೇಳಿದೆ.

ಅಲ್‌ಖೈದಾ ಸಂಘಟನೆ ಸಿದ್ಧಾಂತ ಈಗ ಅಡಗಿ ಹೋಗಿದೆ. ಹಾಗಾಗಿ ಆ ಸಂಘಟನೆಗೆ ಯಾರೇ ಮುಖ್ಯಸ್ಥರಾದರೂ ಅದು ದೊಡ್ಡ ವಿಷಯವೇ ಅಲ್ಲ ಎಂದು ಮಾಧ್ಯಮ ಕಾರ್ಯದರ್ಶಿ ಜೇ ಕಾರ್ನಿ ಹೇಳಿದ್ದಾರೆ.

ಅಣ್ವಸ್ತ್ರ ತಾಂತ್ರಿಕತೆ ಪರಿಣತಿಗೆ ಉಗ್ರರ ಯತ್ನ: ಆತಂಕ
ವಾಷಿಂಗ್ಟನ್ (ಪಿಟಿಐ):
ಪಾಕಿಸ್ತಾನದಲ್ಲಿರುವ ಭಯೋತ್ಪಾದನಾ ಸಂಘಟನೆಗಳು ಅಣ್ವಸ್ತ್ರ ತಾಂತ್ರಿಕತೆಯ ಬಗ್ಗೆ ಆಸಕ್ತಿ ಹೊಂದಿದ್ದು, ಆ ದೇಶದಲ್ಲಿರುವ ಅಣ್ವಸ್ತ್ರಗಳು ಉಗ್ರರ ಕೈವಶವಾಗುವ ಸಾಧ್ಯತೆ ಇದೆ ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿದೆ.

ಪಾಕಿಸ್ತಾನದ ಗಡಿಯಲ್ಲಿ ಸಾಕಷ್ಟು ಸಂಖ್ಯೆಯ ಭಯೋತ್ಪಾದಕರಿದ್ದಾರೆ. ಅಂತಹ ಭಯೋತ್ಪಾದಕರ ಕೈಗೆ ಅಣ್ವಸ್ತ್ರಗಳು ದೊರೆಯದಂತೆ ಮಾಡುವ ಅಗತ್ಯ ಇದೆ ಎಂದು ಅಮೆರಿಕ ಸೇನೆಯ ಮುಖ್ಯಸ್ಥ ಅಡ್ಮಿರಲ್ ಮೈಲ್  ಮುಲ್ಲೇನ್ ಮತ್ತು ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಪೆಂಟಗನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

ಅಣ್ವಸ್ತ್ರ ತಾಂತ್ರಿಕತೆ ಭಯೋತ್ಪಾದಕರಿಗೂ ಎಟುಕಿದರೆ ಮುಂದಿನ ಭವಿಷ್ಯದ ಬಗ್ಗೆ ಆತಂಕ ಪಡಬೇಕಾಗುತ್ತದೆ. ಏಕೆಂದರೆ ಪಾಕಿಸ್ತಾನದ ಗಡಿಯಲ್ಲಿ ಸಾಕಷ್ಟು ಸಂಖ್ಯೆಯ ಭಯೋತ್ಪಾದಕರಿದ್ದು,  ಅಮೆರಿಕ ಮತ್ತು ಜಗತ್ತಿನ ಇತರ ರಾಷ್ಟ್ರಗಳು ಆತಂಕದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಮುಲ್ಲೇನ್ ಹೇಳಿದರು.

ಭಯೋತ್ಪಾದನೆ ನಿಗ್ರಹದಲ್ಲಿ ಅಮೆರಿಕ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಈ ಪ್ರಯತ್ನಕ್ಕೆ ಪಾಕಿಸ್ತಾನ ಸಹ ಸಹಕರಿಸುತ್ತಿದೆ ಎಂದು ಗೇಟ್ಸ್ ಪ್ರಶಂಸಿಸಿದರು.ದಕ್ಷಿಣ ವಜಿರಿಸ್ತಾನ ಮತ್ತು ಸ್ವಾತ್ ಕಣಿವೆಯಲ್ಲಿ ಪಾಕ್‌ನ 1.40 ಲಕ್ಷ ಸೈನಿಕರು ನಿಯೋಜಿತರಾಗಿದ್ದಾರೆ.

ಈ ಭಾಗದಲ್ಲಿ ಭಯೋತ್ಪಾದಕರನ್ನು ನಿಗ್ರಹಿಸುವ ಕಾರ್ಯ ನಡೆಯುತ್ತಿದೆ. ಆದರೂ ಸಹ ಅನಿಶ್ಚಿತ ಪರಿಸ್ಥಿತಿ ಇದ್ದೇ ಇದೆ ಎಂದೂ ಅವರು ಹೇಳಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT