ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಿಲನ್ನು ಹೋಲುತ್ತಿದ್ದ ಮಾನವನ ಪೂರ್ವಿಕರು!

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಚಿಕ್ಕ ಪ್ರಾಣಿಯಂತೆ ಇದ್ದ ಮಾನವನ ಪೂರ್ವಜರು ಬಹುತೇಕ ಅಳಿಲನ್ನು ಹೋಲುತ್ತಿದ್ದರು ಎಂದು ಹೊಸ ಸಂಶೋಧನೆಯೊಂದು ಹೇಳಿದೆ.

ತೀರಾ ಇತ್ತೀಚೆಗೆ ದೊರೆತ ಜಗತ್ತಿನ ಅತ್ಯಂತ ಪ್ರಾಚೀನ ಸಸ್ತನಿಗಳಾದ ಮಂಗಗಳ ಪಳೆಯುಳಿಕೆಗಳ ಅಧ್ಯಯನದಿಂದ ವಿಜ್ಞಾನಿಗಳು ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಚಿಕ್ಕ ಮೂಳೆ ಮತ್ತು ಹಲ್ಲು, ದವಡೆಗಳ ಅಧ್ಯಯನದಿಂದ ಮಂಗಗಳ ಪೂರ್ವಿಕರ ಗಾತ್ರ ಚಿಕ್ಕ ಅಳಿಲಿನಷ್ಟೇ ಇತ್ತು.

ಅವು ಮರದಿಂದ ಮರಗಳನ್ನು ಏರುತ್ತ ಹಣ್ಣುಗಳನ್ನು ತಿನ್ನುತ್ತಿದ್ದವು. ಅಂದಿನ ಈ ಚಿಕ್ಕ ಮಂಗಗಳ ಪಾದದ ಕೀಲು, ಸಂದು ಜೋಡಣೆ ಕೂಡಾ ಮರದಲ್ಲಿರುವ ಇಂದಿನ ಸಸ್ತನಿಗಳನ್ನೇ ಹೋಲುತ್ತವೆ ಎನ್ನುತ್ತಾರೆ ಯೇಲ್ ವಿಶ್ವವಿದ್ಯಾಲಯದ ಪಳೆಯುಳಿಕೆ ಶಾಸ್ತ್ರಜ್ಞ ಸ್ಟೀಫನ್ ಚೆಸ್ಟರ್.

ಈ ಪಳೆಯುಳಿಕೆಗಳು ಮಂಗಳಗಳ ಉಗಮದ ನಂತರ ಮೊದಲ ನೂರು ವರ್ಷದ ಅವಧಿಯಲ್ಲಿ ಆದ ಬದಲಾವಣೆ ಮತ್ತು  ಮಂಗನಿಂದ ಮಾನವ ಎಂಬ ವಿಕಾಸವಾದಕ್ಕೆ ಪುಷ್ಟಿ ನೀಡುತ್ತವೆ.  ಕೇವಲ 1.3 ಔನ್ಸ್ ತೂಗುತ್ತಿದ್ದ ಈ ಸಸ್ತನಿಗಳು(ಪುರ‌್ಗಾಟೋರಿಸ್) ಇಂದಿನ ಮಡಗಾಸ್ಕರ್ ದ್ವೀಪದಲ್ಲಿ ಕಾಣಸಿಗುವ ಮರಗಳಲ್ಲಿ ವಾಸಿಸುವ ಕಾಡುಪಾಪದಂತಹ ಲೀಮರ್ ಪ್ರಾಣಿಯನ್ನು ಹೋಲುತ್ತಿದ್ದವು. 600 ವರ್ಷಗಳ ನಂತರ ಇವು ಮರಗಳನ್ನು ತೊರೆದು ನೆಲಕ್ಕೆ ಕಾಲಿಟ್ಟಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT