ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳ್ನಾವರ ಕಾಲೇಜಿನಲ್ಲಿ ವಿಚಾರಸಂಕಿರಣ 19 ರಂದು

Last Updated 8 ಅಕ್ಟೋಬರ್ 2011, 6:25 IST
ಅಕ್ಷರ ಗಾತ್ರ

ಧಾರವಾಡ: “ತಾಲ್ಲೂಕಿನ ಅಳ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅ. 19 ಹಾಗೂ 20 ರಂದು ಪ್ರಭುತ್ವ ಹಾಗೂ ಸಾಹಿತ್ಯದ ಅಂತರ್ ಸಂಬಂಧ ಎಂಬ ವಿಷಯ ಕುರಿತು ರಾಷ್ಟ್ರೀಯ ವಿಚಾರಸಂಕಿರಣ ಹಮ್ಮಿಕೊಂಡಿದೆ” ಎಂದು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ.ಡಿ.ವಕ್ಕುಂದ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ಪ್ರಾಯೋಜಕತ್ವದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಆಧ್ಯಯನ ಪೀಠದ ಸಹಯೋಗದಲ್ಲಿ ನಡೆಯಲಿದೆ ಎಂದರು.

ವಿಚಾರಸಂಕಿರಣದಲ್ಲಿ ನಾಲ್ಕು ಗೋಷ್ಠಿಗಳು ನಡೆಯಲಿವೆ. ಡಾ. ನಟರಾಜ ಬೂದಾಳು, ಜೆ.ಪಿ.ಶೆಟ್ಟಿ, ಡಾ. ಬಸವರಾಜ ಕೊಡಗುಂಟಿ, ಡಾ. ಕುಂ.ಸಿ.ಉಮೇಶ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ಡಾ. ಸಿದ್ಧನಗೌಡ ಪಾಟೀಲ, ಡಾ. ರಾಜು ಹೆಗಡೆ, ಡಾ. ಎಸ್.ಸಿರಾಜ್ ಅಹಮ್ಮದ್, ಡಾ. ನಿಜಲಿಂಗಪ್ಪ ಮಟ್ಟಿಹಾಳ, ಡಾ. ವಿ.ಬಿ.ತಾರಕೇಶ್ವರ, ಡಾ. ಸಿದ್ಧಗಂಗಮ್ಮ, ಡಾ. ವಿಕ್ರಮ ವಿಸಾಜಿ, ಡಾ. ಶಾಂತಾ ಇಮ್ರಾಪುರ, ಡಾ. ಅರುಣ ಜೋಳದಕೂಡ್ಲಿಗಿ, ಡಾ. ಗಣನಾಥ ಎಕ್ಕಾರು, ಡಾ. ಮಲ್ಲಿಕಾರ್ಜುನ ಮೇಟಿ, ಆರ್.ತಾರಿಣಿ ಶುಭದಾಯಿನಿ, ಡಾ. ಶಶಿಕಲಾ ಮೊರಬದ ಗೋಷ್ಠಿಗಳಲ್ಲಿ ಭಾಗವಹಿಸುವರು ಎಂದು ವಿವರಿಸಿದರು.

19 ರಂದು ಬೆಳಿಗ್ಗೆ 10ಕ್ಕೆ ಕುಲಪತಿ ಪ್ರೊ. ಎಚ್.ಬಿ.ವಾಲೀಕಾರ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಡಾ. ಕೆ.ಆರ್.ದುರ್ಗಾದಾಸ್ ಆಗಮಿಸಲಿದ್ದು, ಡಾ. ರಹಮತ್ ತರೀಕರೆ ಆಶಯ ಭಾಷಣ ಮಾಡುವರು. ಪ್ರಾಚಾರ್ಯ ಬಿ.ಎ.ಪಾಟೀಲ ಅಧ್ಯಕ್ಷತೆ ವಹಿಸುವರು.

20 ರಂದು ಮಧ್ಯಾಹ್ನ 3ಕ್ಕೆ ಸಮಾರೋಪ ನಡೆಯಲಿದ್ದು, ಹಿರಿಯ ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರರಾವ್ ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಡಾ. ಎಚ್. ಎಂ.ಮಹೇಶ್ವರಯ್ಯ, ಡಾ. ಮಧು ವೆಂಕಾರೆಡ್ಡಿ ಆಗಮಿಸಲಿದ್ದು, ಶಾಸಕ ಸಂತೋಷ ಲಾಡ್ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ವಿಚಾರಸಂಕಿರಣದಲ್ಲಿ ರಾಜ್ಯದ ವಿವಿಧ ಕಾಲೇಜುಗಳಿಂದ ಪ್ರಾಧ್ಯಾಪಕರು ಭಾಗವಹಿಸುತ್ತಿದ್ದು, ಎಲ್ಲರಿಗೂ ಒಒಡಿ ಸೌಲಭ್ಯ ಇದೆ ಎಂದು ತಿಳಿಸಿದರು.

`ಅ. 21 ಹಾಗೂ 22 ರಂದು ಕರ್ನಾಟಕ ಇತಿಹಾಸದಲ್ಲಿನ ಇತ್ತೀಚಿನ ಸಂಶೋಧನೆಗಳ ಪ್ರವೃತ್ತಿ ಎಂಬ ವಿಷಯ ಕುರಿತು ವಿಚಾರಸಂಕಿರಣ ಆಯೋಜಿಸಲಾಗಿದೆ.

 ಪ್ರಾಚ್ಯಶಾಸ್ತ್ರ, ಆಡಳಿತ ಪದ್ಧತಿ, ಸಾಮಾಜಿಕ ಇತಿಹಾಸ, ಆರ್ಥಿಕ ಇತಿಹಾಸ, ಕೆಲ ಮತ್ತು ವಾಸ್ತುಶಿಲ್ಪಗಳಲ್ಲದೇ ಆಧುನಿಕ ಕರ್ನಾಟಕ ಇತಿಹಾಸದ ವಿವಿಧ ಅಂಶಗಳ ಮೇಲೆ ಸಂಶೋಧನಾ ಪ್ರಬಂಧಗಳನ್ನು ರಾಜ್ಯದ ಖ್ಯಾತ ಇತಿಹಾಸ ತಜ್ಞರು ಮಂಡಿಸಲಿದ್ದಾರೆ~ ಎಂದು ಡಾ. ಬಸವರಾಜ ಅಕ್ಕಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT