ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಬೇಕಿರುವುದು...

Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

*ಶಿಕ್ಷಣ ಕ್ಷೇತ್ರದಲ್ಲಿ ಕ್ರೀಡಾ ನೀತಿಯ ಪರಿಣಾಮಕಾರಿ ಅನುಷ್ಠಾನ.

*ಕ್ರೀಡಾ ಇಲಾಖೆ ಮತ್ತು ಶಿಕ್ಷಣ ಇಲಾಖೆ ನಡುವೆ   ಸಮನ್ವಯ.

*ಕ್ರೀಡಾ ಸಂಸ್ಥೆಗಳಿಗೆ ಸರ್ಕಾರ ನೀಡುವ ಧನಸಹಾಯದ ಸದ್ಬಳಕೆಗೆ ಕಣ್ಗಾವಲು.

*ನಿರ್ದಿಷ್ಟ  ಕ್ರೀಡೆಯ ರಾಜ್ಯ ಸಂಸ್ಥೆಗಳು, ಅವುಗಳಿಂದ ಮಾನ್ಯತೆ ಪಡೆದ ಜಿಲ್ಲಾ ಸಂಸ್ಥೆಗಳು, ಕ್ಲಬ್‌ಗಳು ಹಾಗೂ ತರಬೇತಿ ಶಿಬಿರಗಳ ಚಟುವಟಿಕೆಗಳಲ್ಲಿನ    ಹೊಂದಾಣಿಕೆಗೆ ನಿಗಾ ವ್ಯವಸ್ಥೆ.

*ವಿವಿಧ  ಕ್ರೀಡೆಗಳ ರಾಜ್ಯ ತಂಡಕ್ಕೆ ನಡೆಯುವ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕು.

*ಆಟಗಾರರು ರಾಷ್ಟ್ರೀಯ ಮಟ್ಟದಲ್ಲಿ ತೋರುವ ಸಾಮರ್ಥ್ಯದ ಬಗ್ಗೆ  ದಾಖಲೆಗಳ ಕೋಶ.

*ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದ ರಾಜ್ಯ ಸಂಸ್ಥೆಗಳ ಚಟುವಟಿಕೆ, ಸಾಧನೆ ಇತ್ಯಾದಿಗಳ ಬಗ್ಗೆ ಸರ್ಕಾರದಿಂದ ನಿರಂತರ ಪರಿಶೀಲನೆ.

*ಸಾಧಕರಿಗೆ ಅರ್ಹ ಪ್ರಶಸ್ತಿಗಳು ಸಿಗುವಂತೆ ನೋಡಿಕೊಳ್ಳಬೇಕು.

*ಅರ್ಹ ಕ್ರೀಡಾಪಟುಗಳಿಗೆ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಸಿಗುವಂತೆ ನೋಡಿಕೊಳ್ಳಬೇಕು.

*ಸಾಧಕರಿಗೆ ಉದ್ಯೋಗವಕಾಶ ಕಲ್ಪಿಸಲು ನೀತಿ ರೂಪಿಸಬೇಕು.

*ಬೆಂಗಳೂರಿನ  ಪ್ರತೀ ಬಡಾವಣೆಯಲ್ಲಿರುವ ಸರ್ಕಾರಕ್ಕೆ ಸೇರಿದ ಖಾಲಿ ಜಾಗಗಳ ದುರ್ಬಳಕೆ ತಡೆದು, ಅವುಗಳನ್ನು  ಆಟದ ಮೈದಾನಗಳನ್ನಾಗಿ ಪರಿವರ್ತಿಸಬೇಕು.

*ಬಿಡಿಎ ಮತ್ತು ಬಿಬಿಎಂಪಿ ಅಧೀನದ  ಆಟದ ಮೈದಾನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಕಲ್ಪಿಸಬೇಕು.

*ರಾಷ್ಟ್ರಮಟ್ಟದ ಕ್ರೀಡಾ ಸೌಲಭ್ಯಗಳು ಗ್ರಾಮೀಣರಿಗೂ ಎಟುಕಬೇಕು.

*ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರದ ಖಾಲಿ ಜಾಗಗಳನ್ನು ಕ್ರೀಡಾ ಉದ್ದೇಶಕ್ಕೆ ಎಂದು ಪರಿಗಣಿಸಿ, ಅವುಗಳ ಸುತ್ತಲೂ ಬೇಲಿ ಹಾಕಬೇಕು.
*ಕ್ರೀಡಾಪಟುಗಳ ವಯಸ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ಆರಂಭದಿಂದಲೇ ಸಂಗ್ರಹಿಸಿಡ ಬೇಕು. ಗುರುತಿನ ಚೀಟಿ ನೀಡಬೇಕು.

*ಗುರುತಿನ ಚೀಟಿ ಮೂಲಕ  ‘ವಯೋಮಿತಿಗೆ ಸಂಬಂಧಿಸಿದ ವಂಚನೆ ಪ್ರಕರಣ’ ತಡೆಯಲು ಸಾಧ್ಯ.

*ರಾಜ್ಯ ಸಂಸ್ಥೆಗಳು ತಮ್ಮ ಕ್ರೀಡಾ ಚಟುವಟಿಕೆಗಳನ್ನು ಜಿಲ್ಲೆ, ತಾಲ್ಲೂಕು, ಗ್ರಾಮ ಮಟ್ಟಕ್ಕೂ  ವಿಸ್ತರಿಸಬೇಕು.

*ಯಾವುದೇ ಕ್ರೀಡೆಯ ರಾಜ್ಯ ಸಂಸ್ಥೆಯು ತನ್ನ ಚಟುವಟಿಕೆಯನ್ನು ಬೆಂಗಳೂರಿಗಷ್ಟೇ  ಕೇಂದ್ರೀಕರಿಸದಂತೆ ಎಚ್ಚರ ವಹಿಸಬೇಕು.

*ವೃತ್ತಿಪರ ಕಾಲೇಜುಗಳಲ್ಲಿ ಕ್ರೀಡಾ ಮೀಸಲು ಮೂಲಕ ಸೀಟು ಪಡೆಯುವವರು ಅಲ್ಲಿ ಕ್ರೀಡಾ ಚಟುವಟಿಕೆಯನ್ನು ಮುಂದುವರಿಸುವಂತೆ ನೋಡಿಕೊಳ್ಳಬೇಕು.

*ಕೋಚ್‌ಗಳ  ಸಾಧನೆ ಮತ್ತು ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಂಡು ಅವರಿಗೆ ಗ್ರೇಡ್‌ ಹಾಗೂ ಸೂಕ್ತ ವೇತನ ನೀಡಬೇಕು.
*ಕೋಚ್‌ಗಳಿಗೆ ಅತ್ಯಾಧುನಿಕ ತಂತ್ರಗಳ ಬಗ್ಗೆ ನಿರಂತರ ತರಬೇತಿ ನೀಡಬೇಕು.

*ಕ್ರೀಡೆಗೆ ಸಂಬಂಧಿಸಿದ  ಹಲವು ಯೋಜನೆಗಳು ಜಡ್ಡುಗಟ್ಟಿವೆ. ಪುನರ್‌ಜೀವ ನೀಡಬೇಕು.

*ಬೆಂಗಳೂರಿನ ‘ನಮ್ಮ ಮೆಟ್ರೊ’ ಹಾದಿಯ ಹಲವು ಕಡೆ ವಿಶಾಲ ಜಾಗ ಲಭ್ಯ ಇದೆ. ಅಲ್ಲಿ  ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುವಂತಹ ಕಿರು ಮೈದಾನಗಳನ್ನು ಅಭಿವೃದ್ಧಿ ಪಡಿಸಬಹುದು.

*ಬೆಂಗಳೂರಿನಲ್ಲಿರುವ ವಿದ್ಯಾನಗರ ಕ್ರೀಡಾಶಾಲೆ ಯನ್ನು ಅಂತರರಾಷ್ಟ್ರೀಯ ಕ್ರೀಡಾ ಕೇಂದ್ರದ ಮಟ್ಟಕ್ಕೆ ಏರಿಸಬೇಕು. ಅಲ್ಲಿ ಖಾಲಿ ಇರುವ ಜಾಗದ ಸದ್ಬಳಕೆ ಮಾಡಿಕೊಳ್ಳಬೇಕು.

--ಡಾ.ಎಂ.ಪಿ.ಗಣೇಶ್‌
(ಭಾರತ ಹಾಕಿ ತಂಡದ ಮಾಜಿ ನಾಯಕ, ಭಾರತ ಕ್ರೀಡಾ ಪ್ರಾಧಿಕಾರದ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕರು)

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT