ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಕನಿಷ್ಠ ದರ ರೂ 25ಕ್ಕೆ ಹೆಚ್ಚಳ

Last Updated 17 ಡಿಸೆಂಬರ್ 2013, 19:31 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಡಿ.20ರಿಂದ ಆಟೊ ದರ ಹೆಚ್ಚಳವಾಗಲಿದೆ. ಮೊದಲ 1.8 ಕಿ.ಮೀಗೆ (ಕನಿಷ್ಠ) ರೂ25 ಹಾಗೂ ನಂತರದ ಪ್ರತಿ ಕಿ.ಮೀಗೆ ರೂ13 ದರ ಏರಿಕೆಯಾಗಲಿದೆ.

ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ಜಿಲ್ಲಾಧಿಕಾರಿ ಜಿ.ಸಿ.ಪ್ರಕಾಶ್‌ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂ ಡಿದ್ದ ಆಟೊ ಚಾಲಕರ ಒಕ್ಕೂಟದ ಸದಸ್ಯರು ಪರಿಷ್ಕೃತ ದರಕ್ಕೆ ಸಮ್ಮತಿ ಸೂಚಿಸಿದರು. ‘ಈವರೆಗೆ ಪ್ರತಿ 1.8 ಕಿ.ಮೀಗೆ (ಕನಿಷ್ಠ) ರೂ20 ಹಾಗೂ ನಂತರದ ಪ್ರತಿ ಕಿ.ಮೀಗೆ ರೂ11 ದರ ಇತ್ತು. ದರ ಏರಿಕೆ ಮಾಡುವಂತೆ ಆಟೊ ಚಾಲಕರು ಬೇಡಿಕೆ ಇಟ್ಟಿದ್ದರು.

4 ತಿಂಗಳ ಹಿಂದೆ ಜಯನಗರ ಪ್ರಾದೇಶಿಕ ಸಾರಿಗೆ ಅಧಿಕಾರಿ, ಪಶ್ಚಿಮ ಸಂಚಾರ ವಿಭಾ ಗದ ಡಿಸಿಪಿ ಅವರನ್ನು ಒಳಗೊಂಡ ದರ ಪರಿಷ್ಕರಣಾ ಸಮಿತಿ ಯನ್ನು ನೇಮಿಸಲಾಗಿತ್ತು. ಈ ಸಮಿತಿ ನೀಡಿರುವ ವರದಿಯಂತೆ ದರ ಹೆಚ್ಚ ಳಕ್ಕೆ ತೀರ್ಮಾನ ತೆಗೆದುಕೊಳ್ಳಲಾಗಿ ದೆ’ ಎಂದು ಜಿ.ಸಿ.ಪ್ರಕಾಶ್‌ ತಿಳಿಸಿದರು.

20ರಿಂದ ಆಟೊ ದರ ಹೆಚ್ಚಳ
‘ಕನಿಷ್ಠ ರೂ30 ಹಾಗೂ ನಂತರದ ಪ್ರತಿ ಕಿ.ಮೀಗೆ ರೂ15 ದರ ಹೆಚ್ಚಳ ಮಾಡಬೇಕು ಎಂಬುದು ಆಟೊ ಚಾಲಕರ ಬೇಡಿಕೆ­ಯಾಗಿತ್ತು. ಆದರೆ, ಈ ಪ್ರಮಾಣದ ದರ ಹೆಚ್ಚಳದಿಂದ ಸಾರ್ವಜನಿಕರಿಗೆ ಹೊರೆ­ಯಾಗುತ್ತದೆ ಎಂಬ ಕಾರಣಕ್ಕೆ ಈ ಬೇಡಿಕೆಯನ್ನು ಕೈ ಬಿಡಲಾಯಿತು’ ಎಂದು ಅವರು ಹೇಳಿದರು.

‘ಎರಡು ವರ್ಷಗಳಿಂದ ಆಟೊ ದರ ಪರಿಷ್ಕರಣೆ­ಯಾಗಿರಲಿಲ್ಲ. ಈಗಿನ ಪರಿಷ್ಕೃತ ದರಕ್ಕೆ ಸಭೆಯಲ್ಲಿ ಒಪ್ಪಿಗೆ ಸೂಚಿಸ­ಲಾಯಿತು. ಪರಿಷ್ಕೃತ ದರದಿಂದ ಆಟೊ ಚಾಲಕರಿಗೆ ಸ್ವಲ್ಪಮಟ್ಟಿಗೆ  ಸಂತಸವಾಗಿದೆ’ ಎಂದು ಆಟೊ ಚಾಲಕರ ಒಕ್ಕೂಟದ ಕಾರ್ಯದರ್ಶಿ ನಾಗರಾಜು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT