ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಟೆಕ್

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಯಾವುದೇ ವಾಹನದ ಚಲನೆಗೆ ಬೇಕಿರುವುದು ಇಂಧನ ಮಾತ್ರವಲ್ಲ! ಪೆಟ್ರೋಲ್, ಡೀಸೆಲ್ ಹಾಕಿಸಿ ಸುತ್ತಾಡುವುದು ನಮಗೆಲ್ಲಾ ಗೊತ್ತೇ ಇದೆ. ನಾವು ಜೀವಂತ ಇರಲು ಹೃದಯ, ಮಿದುಳುಗಳು ಬೇಕೇ ಬೇಕು. ಆದರೆ, ಈ ವಾಹನಗಳ ಹೃದಯ ಯಾವುದು, ಅದಿಲ್ಲದಿದ್ದರೆ ಬೈಕ್, ಸ್ಕೂಟರ್ ಓಡುತ್ತವೆಯಾ? ಖಂಡಿತಾ ಇಲ್ಲ. ಈ ಬಾರಿ ಹೇಳ ಹೊರಟಿರುವುದು ವಾಹನಗಳ ಹೃದಯದ ಕತೆಯನ್ನು.

ವಾಹನ ಲೋಕದಲ್ಲಿ 2 ಮುಖ್ಯ ವಿಭಜನೆಗಳಿವೆ. ಇಂಧನ ದಹನವಾಗಿ ಚಲನ ಶಕ್ತಿಯಾಗಿ ಪರಿವರ್ತಿತಗೊಳ್ಳುವ ಎಂಜಿನ್ ಉಳ್ಳ ವಾಹನ. ವಿದ್ಯುಚ್ಚಕ್ತಿಯ ಸಹಾಯದಿಂದ ಚಲಿಸುವ ಮೋಟಾರ್ ಉಳ್ಳ ವಾಹನ.

ಹಿಂದಿನ ಕಾಲದಲ್ಲಿ ರೈಲುಗಳಲ್ಲಿ ನೋಡುತ್ತಿದ್ದ `ಬಹಿರ್ದಹನ~ ಎಂಜಿನ್ ಸುಧಾರಿತವಾಗಿ `ಅಂತರ್ದಹನ~ ಎಂಜಿನ್ ಆಗಿ ರೂಪಾಂತರಗೊಂಡ ಮೇಲೂ, ಎಂಜಿನ್ ಒಳಗಿನ ಬೋರ್, ಪಿಸ್ಟನ್ ಹಾಗೂ ಕನೆಕ್ಟಿಂಗ್ ರಾಡ್ ಮೂಲಕ ವಾಹನ ಚಲಿಸಲು ಆರಂಭಿಸುತ್ತದೆ. ಆದರೆ ವಿದ್ಯುತ್ ಸಹಾಯದಿಂದ ಓಡುವ ವಾಹನದಲ್ಲಿ ಪಿಸ್ಟನ್, ಕನೆಕ್ಟಿಂಗ್ ರಾಡ್, ಬೋರ್‌ಗಳೇ ಇರುವುದಿಲ್ಲ. ಹಾಗಾದರೆ ಈ ಪಿಸ್ಟನ್, ಕನೆಕ್ಟಿಂಗ್ ರಾಡ್ ಎಂದರೇನು?

ಪಿಸ್ಟನ್
ವಾಹನದ ಚಲನೆಯ ಅತಿ ಮುಖ್ಯ ಅಂಗವಿದು. ನಮ್ಮ ಕಾಲುಗಳಿದ್ದಂತೆ. ಸಾಮಾನ್ಯವಾಗಿ ಎಲ್ಲರೂ ಚಕ್ರಗಳೇ ವಾಹನದ ಕಾಲು ಎಂದು ತಿಳಿಯುತ್ತಾರೆ. ಮೇಲ್ನೋಟಕ್ಕೆ ಅದು ನಿಜವೇ ಆದರೂ, ಆ ಚಕ್ರಕ್ಕೆ ಚಾಲನೆ ನೀಡುವ ಮೂಲಭೂತ ಅಂಗವೇ ಪಿಸ್ಟನ್.

ಗಡುಸಾದ ಅಲ್ಯೂಮಿನಿಯಂನಿಂದ ತಯಾರಾದ ಪಿಸ್ಟನ್ ವೃತ್ತಾಕಾರದ ಆಕೃತಿಕ ರಚನೆ. ಯಾವುದೇ `ಇಂಟರ್ನನಲ್ ಕಂಬಸ್ಚನ್~ ಎಂಜಿನ್ (ಅಂತರ್ದಹನ- ಇಂಧನ ಎಂಜಿನ್ ಒಳಗೆ ಉರಿಯುವುದು) ನಲ್ಲಿ `ಬೋರ್~ ಎಂಬ ಕೊಳವೆಯಾಕಾರದ ರಚನೆ ಇರುತ್ತದೆ.

ಇದರ ಮೇಲ್ತುದಿ, ಕೆಳತುದಿಗಳು ಸೀಲ್ ಆಗಿರುತ್ತವೆ. ಗಾಳಿಯೂ ಒಳಹೋಗದ ರಚನೆಯದು. ಇದರ ಒಳಗೆ ಇರುವುದೇ ಪಿಸ್ಟನ್. ಬೋರ್ ಒಳ ಪ್ರವೇಶಿಸುವ ಇಂಧನ ಸ್ಪಾರ್ಕ್ ಪ್ಲಗ್ ಮೂಲಕ ದಹಿಸಿದಾಗ ಬೋರ್ ಒಳಗಿನ ಪಿಸ್ಟನ್ ಒತ್ತಡದಲ್ಲಿ ಮೇಲೆ- ಕೆಳಗೆ ಚಲಿಸಲಾರಂಭಿಸುತ್ತದೆ.

ಸೆಕೆಂಡ್‌ಗೆ 2 ಬಾರಿ ಚಲಿಸಿದರೆ 2 ಸ್ಟ್ರೋಕ್ ಎಂಜಿನ್, 4 ಬಾರಿ ಚಲಿಸಿದರೆ 4 ಸ್ಟ್ರೋಕ್ ಎಂಜಿನ್. ಈ ಪಿಸ್ಟನ್‌ಗೆ ಜೊಡಿಸಲ್ಪಟ್ಟ ಸಾಧನ ಚೈನ್ ಅಥವಾ ಬೆಲ್ಟ್‌ನ ಮೂಲಕ ಚಕ್ರಕ್ಕೆ ಚಾಲನೆ ನೀಡುತ್ತದೆ. ಇದಿಷ್ಟೇ ಪಿಸ್ಟನ್ ಕೆಲಸ.

ಹಳೆಯದಾದಂತೆ ಘರ್ಷಣೆಯಿಂದ ಪಿಸ್ಟನ್ ಸವೆದು ಶಕ್ತಿ ನಷ್ಟವಾಗುತ್ತದೆ. ಆಗ ಹೊಸ ಪಿಸ್ಟನ್, ಬೋರ್ ಹಾಕಬೇಕು. ಬೋರ್ ಬದಲಿಸದೆ ರೀಬೋರಿಂಗ್ (ಬೋರ್‌ನ ಒಳಭಾಗವನ್ನು ಸರಿಪಡಿಸುವುದು) ಮಾಡುವ ಸ್ಥಳೀಯ ವಿಧಾನವೂ ಚಾಲ್ತಿಯಲ್ಲಿದೆ.

ಕನೆಕ್ಟಿಂಗ್ ರಾಡ್
ಪಿಸ್ಟನ್ ಮತ್ತು ಕನೆಕ್ಟಿಂಗ್ ರಾಡ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಗಡಸು ಅಲ್ಯೂಮಿನಿಯಂನಿಂದ ತಯಾರಾದ ಈ ಸಲಾಕೆ, ಪಿಸ್ಟನ್ ಮತ್ತು ಕ್ರಾಂಕ್‌ಶಾಫ್ಟ್‌ಗೆ ಜೋಡಿಸಲ್ಪಟ್ಟಿರುತ್ತದೆ.

ಪಿಸ್ಟನ್ ಒತ್ತಡಲ್ಲಿ ಚಲಿಸರಾಂಭಿಸಿದಾಗ ಅದರ ಜತೆಗೇ ಮೇಲೆ- ಕೆಳಗೆ ಚಲಿಸುವ ಕನೆಕ್ಟಿಂಗ್ ರಾಡ್, ಕ್ರಾಂಕ್‌ಶಾಫ್ಟ್‌ನನ್ನು ತಿರುಗಿಸಿ, ಚಕ್ರಕ್ಕೆ ಚಾಲನೆ ನೀಡುತ್ತದೆ. ಹಿಂದಿನ ಕಾಲದಲ್ಲಿ ಕಲ್ಲಿದ್ದಲಿನ ರೈಲು ಎಂಜಿನ್‌ಗಳಲ್ಲಿ ಬಳಕೆಯಾಗುತ್ತಿದ್ದ ಕನೆಕ್ಟಿಂಗ್ ರಾಡ್‌ಗಳು ಕಬ್ಬಿಣದಿಂದ ಮಾಡಲ್ಪಡುತ್ತಿದ್ದವು. ಹಡಗುಗಳಲ್ಲೂ ಇವುಗಳ ಬಳಕೆಯಿದೆ. ಕಾರು, ಬೈಕ್ ಹಾಗೂ ಸ್ಕೂಟರ್‌ಗಳಲ್ಲಿ ಬಳಕೆಯಾಗುವ ರಾಡ್‌ಗಳು ಅಲ್ಯೂಮಿನಿಯಂ ಅಥವಾ ಉಕ್ಕಿನಿಂದ ಮಾಡಲ್ಪಟ್ಟಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT