ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶ ಜೀವನ ನಡೆಸಲು ಸಲಹೆ

Last Updated 24 ಅಕ್ಟೋಬರ್ 2011, 10:50 IST
ಅಕ್ಷರ ಗಾತ್ರ

ಬಳ್ಳಾರಿ: ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ.  ಈ ನಿಟ್ಟಿನಲ್ಲಿ ಯುವಕರು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ  ಚೆನ್ನಬಸವನಗೌಡ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಸ್ಥಳೀಯ ರಾಘವ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಸಕಾರಾತ್ಮಕವಾಗಿ, ಆದರ್ಶ ಜೀವನ ನಡೆಸಬೇಕು. ಸಮಸ್ಯೆ ನಿವಾರಣೆಗೆ,  ಅಭಿವೃದ್ಧಿಗೆ, ಭವ್ಯ ಭಾರತ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಅವರು ತಿಳಿಸಿದರು.

ಎಲ್ಲ ಕಾಲ, ದೇಶದಲ್ಲಿ ಯುವಕರು ಚೈತನ್ಯದ ಚಿಲುಮೆಯಂತೆ ಕಂಗೊಳಿಸಬೇಕು. ಅಲ್ಲದೆ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಪಣ ತೊಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಹೇಳಿದರು.

ಯುವಜನೋತ್ಸವದಲ್ಲಿ ಪಾಲ್ಗೊಂಡಿರುವ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ, ಜಿಲ್ಲೆಗೆ ಕೀರ್ತಿ ತರಬೇಕು. ಸಾಂಸ್ಕೃತಿಕ ಲೋಕದಲ್ಲಿ ಬಳ್ಳಾರಿಯ ಕೀರ್ತಿ ವೃದ್ಧಿಯಾಗಬೇಕಿದೆ ಎಂದು ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.

ದತ್ತಾತ್ರೇಯ ರೆಡ್ಡಿ, ಗಾದೆಪ್ಪ, ವಿಜಯಮಹಾಂತೇಶ್, ದೊಡ್ಡ ಬಸವಗವಾಯಿ,  ಎಲ್.ಎನ್. ಶಾಸ್ತ್ರಿ, ವಯಸ್ಕರ ಶಿಕ್ಷಣಾಧಿಕಾರಿ ಸಿ. ನಿಂಗಪ್ಪ, ಕಲಾವಿದ ಮಂಜುನಾಥ ಗೋವಿಂದವಾಡ ಮತ್ತಿತರರು ಉಪಸ್ಥಿತರಿದ್ದರು.

ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ಸ್ವಾಗತಿಸಿದರು. ಮಲಕಪ್ಪ ಕಾರ್ಯಕ್ರಮ ನಿರೂಪಿಸಿದರು. ಯಲ್ಲನಗೌಡ ಶಂಕರಬಂಡೆ ನಾಡಗೀತೆ ಪ್ರಸ್ತುತಪಡಿಸಿದರು.


ಯುವಜನೋತ್ಸವದ ಫಲಿತಾಂಶ ಈ ಕೆಳಕಂಡಂತಿದೆ.
ಜಾನಪದ ನೃತ್ಯ: ಬಳ್ಳಾರಿಯ ಸರಳಾದೇವಿ ಪ್ರಥಮದರ್ಜೆ ಕಾಲೇಜು ತಂಡ ಪ್ರಥಮ, ಹೂವಿನ ಹಡಗಲಿಯ ಮಲ್ಲಿಗೆ ತಂಡ ದ್ವಿತೀಯ.
ಜಾನಪದ ಗೀತೆ: ಹೊಸಪೇಟೆಯ ಅನೂರಾಧ ಮತ್ತು ತಂಡ ಪ್ರಥಮ, ಸಿರಿಗೇರಿಯ ಜೆ. ಮಾರೆಣ್ಣ ಮತ್ತು ತಂಡ ದ್ವಿತೀಯ, ಕಂಪ್ಲಿಯ ಸ್ವಾಮಿ ವಿವೇಕಾನಂದ ತೃತೀಯ; 
ಭರತ ನಾಟ್ಯ: ಬಳ್ಳಾರಿಯ ಅಕ್ಷತಾ ಯಾದವ್ ಪ್ರಥಮ;
ಕುಚಿಪುಡಿ ನೃತ್ಯ: ಸಂಡೂರಿನ ಪಿ. ವಿಜೇಂದ್ರ ಪ್ರಥಮ, ಬಳ್ಳಾರಿಯ ಬಿ. ಸುಷ್ಮಿತ ದ್ವಿತೀಯ, ಬಳ್ಳಾರಿಯ ಆಕ್ಷತಾ ಯಾದವ್ ತೃತೀಯ.
ಗಿಟಾರ್: ಬಳ್ಳಾರಿಯ ಅರವಿಂದ ಕುಮಾರ್ ಪ್ರಥಮ, ಇಮ್ಯೋನುವೆಲ್ ದ್ವಿತೀಯ.
ಆಶುಭಾಷಣ (ಇಂಗ್ಲಿಷ್): ಸ್ಫರ್ಧೆಯಲ್ಲಿ ಬಳ್ಳಾರಿ ನಳಂದ ಶಾಲೆಯ ಶ್ರೀನಾಥ್, ಮಾಜಿದ್ ಬಾಷಾ ಹಾಗೂ ಮಹಬೂಬ್ ಬಾಷಾ ಅವರು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ.
ಕೊಳಲು ವಾದನ (ಶಾಸ್ತ್ರೀಯ ವಾದ್ಯ): ಹೊಸಪೇಟೆಯ ಎಚ್. ಕೇಶವ್.
ಕಥಕ್: ಬಳ್ಳಾರಿಯ ಅಭಿಷೇಕ್ ಪ್ರಥಮ.
ಹಿಂದೂಸ್ತಾನಿ ಗಾಯನ: ಹೊಸಪೇಟೆಯ ಅನುರಾಧ ಪ್ರಥಮ, ಬಳ್ಳಾರಿಯ ವೈಷ್ಣವಿ ದ್ವಿತೀಯ.
ಏಕಾಂಕ ನಾಟಕ: ಬಳ್ಳಾರಿಯ ಜೆ. ದಿವಾಕರ್ ಮತ್ತು ತಂಡ ಪ್ರಥಮ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT