ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನ್ಲ್ಲಲೂ ದಸರಾ ವೀಕ್ಷಣೆ: ಜಂಬೂಸವಾರಿ ವೀಕ್ಷಕರ ಸಂಖ್ಯೆ 20 ಲಕ್ಷ!

Last Updated 8 ಅಕ್ಟೋಬರ್ 2011, 9:10 IST
ಅಕ್ಷರ ಗಾತ್ರ

ಮೈಸೂರು: ದೇಶದ ನಾನಾ ಭಾಗಗಳ ಪ್ರವಾಸಿಗರು ದಸರಾ ಜಂಬೂಸವಾರಿ ವೀಕ್ಷಿಸಲು ಮೈಸೂರಿನತ್ತ ಮುಖ ಮಾಡಿದ್ದರೆ, ಅತ್ತ ಲಕ್ಷಾಂತರ ಜನರು ತಮ್ಮ ಮನೆಯಲ್ಲಿಯೇ ಕುಳಿತು ಜಂಬೂಸವಾರಿ ವೀಕ್ಷಿಸಿ ಸಂಭ್ರಮಿಸಿದರು.

ನಾಡಹಬ್ಬ ದಸರಾ ಮಹೋತ್ಸವವನ್ನು ವಿಶ್ವದಾದ್ಯಂತ ತಲುಪಿಸಲು ಜಿಲ್ಲಾಡಳಿತ ಆರಂಭಿಸಿದ್ದ ವೆಬ್‌ಸೈಟ್ ಡಿಡಿಡಿ.ಞಟ್ಟಛಿಚ್ಟ.ಜಟ.ಜ್ಞಿ ಮತ್ತು ಡಿಡಿಡಿ.ಞಟ್ಟಛಿಚ್ಝಚ್ಚಛಿ.ಠಿ ಎರಡೂ ವೆಬ್‌ಸೈಟ್‌ಗಳನ್ನು ತಲಾ 10 ಲಕ್ಷ ಮಂದಿ ವೀಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಭಾರತ ಸೇರಿದಂತೆ ಅಮೆರಿಕಾ, ಇಂಗ್ಲೆಂಡ್, ಮೆಕ್ಸಿಕೊ, ಕೆನಡಾ, ಫ್ರಾನ್ಸ್ ಹಾಗೂ ಜರ್ಮನಿ ದೇಶದ ಜನರು ವೆಬ್‌ಸೈಟ್ ಮೂಲಕವೇ ಜಂಬೂಸವಾರಿ  ಹಾಗೂ ದಸರಾ ಕಾರ್ಯಕ್ರಮಗಳನ್ನು ವೀಕ್ಷಿಸಿದ್ದಾರೆ. ದಸರಾ ಉತ್ಸವದ ಅಧಿಕೃತ ಪ್ರಾಯೋಜಕತ್ವ ಪಡೆದಿದ್ದ ಟಾಟಾ ಡೊಕೊಮೊ ಮೊಬೈಲ್ ಕಂಪೆನಿಯು ಖಾಸಗಿ ಕನ್ನಡ ವಾಹಿನಿಯೊಂದಿಗೆ ಒಪ್ಪಂದ ಮಾಡಿಕೊಂಡು ಜಂಬೂಸವಾರಿಯ ನೇರಪ್ರಸಾರ ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಮಾಡಿತ್ತು.

ದಸರಾ ವೆಬ್‌ಸೈಟ್‌ನ್ನು ಮೈಸೂರಿನ ಅರೆನಾ ಮಲ್ಟಿ ಮೀಡಿಯಾ ಸಂಸ್ಥೆ ಸಿದ್ಧಪಡಿಸಿದ್ದು, ದಸರಾ ಆರಂಭಕ್ಕೂ 3 ವಾರ ಮೊದಲು, ಅಂದರೆ ಸೆ.7ರಂದು ವೆಬ್‌ಸೈಟ್ ಲಭ್ಯವಾ ಗುವಂತೆ ಮಾಡಿತ್ತು. ದಿನಕ್ಕೆ ಸರಾಸರಿ 2 ಸಾವಿರ ಜನ ದಸರಾ ಉತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮಗ ಳನ್ನು ವೀಕ್ಷಿಸಿದ್ದಾರೆ. ವಿವಿಧ ದೇಶಗಳಲ್ಲಿ ನೆಲೆಸಿರುವ ಭಾರತೀಯರೂ ಆನ್‌ಲೈನ್‌ನಲ್ಲೇ ಜಂಬೂಸವಾರಿಯನ್ನು ಕಣ್ತುಂಬಿಕೊಂಡಿದ್ದಾರೆ.  ಭಾರತ ವನ್ನು ಹೊರತುಪಡಿಸಿದರೆ, ಇಂಗ್ಲೆಂಡ್, ಹಂಟ್ಸ್‌ವಿಲ್ಲೆ, ಬಾಲ್ಟಿ ಮೋರ್, ಹರ್ಶ್‌ಬರ್ಗ್, ತಾಲ್ಸಾ, ಓಕ್ಲಾ, ರಾಕ್ ಐಲ್ಯಾಂಡ್, ಟ್ರಾಯ್, ಕಾರ‌್ಪಸ್ ಕ್ರಿಸ್ಟಿ, ಟೆಕ್ಸಾಸ್ ಮತ್ತು ಲಾಸ್ ವೆಗಾಸ್ ದೇಶದ ಜನರು ಎರಡೂ ವೆಬ್‌ಸೈಟ್‌ಗಳನ್ನು ಹೆಚ್ಚಾಗಿ ವೀಕ್ಷಿಸಿದ್ದಾರೆ. ಫೇಸ್‌ಬುಕ್‌ನಲ್ಲೂ ಸಾವಿರಾರು ಮಂದಿ ದಸರಾ ವೈಭವವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಹುತೇಕ ವೆಬ್‌ಸೈಟ್ ನೋಡುಗರಿಗೆ ಮಹಾರಾಜರ ಕಾಲದ ದಸರಾ ವೈಭವದ ಕಪ್ಪು ಬಿಳುಪು ಛಾಯಾಚಿತ್ರಗಳು, ಜಂಬೂಸವಾರಿ ವಿಡಿಯೋ ಇಷ್ಟವಾಗಿವೆ. ಮೈಸೂರಿನ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಅವಧಿಯ ಜಂಬೂಸವಾರಿ ವಿದೇಶಿಯರಿಗೆ ಅಪ್ಯಾಯಮಾನ ವಾಗಿದೆ. ಛಿ ಞಜಿ ಟ್ಟಛಿ..ಡಿಛಿ ಞಜಿ  ್ಝಟಠಿ..ಈಚ್ಟ ್ಝಟಛಿ..ಎಂದು ಪ್ರತಿಕ್ರಿಯಿಸುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

2012ರ ದಸರಾ ಉತ್ಸವದ ಪ್ರಚಾರಕ್ಕೂ ಇದೇ ವೆಬ್‌ಸೈಟ್ ಅನ್ನು ಬಳಸಬೇಕು ಎಂಬ ಚಿಂತನೆ ನಡೆದಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT