ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ ದಿ ರೋಡ್ ರಾಲಿ

Last Updated 15 ಅಕ್ಟೋಬರ್ 2012, 7:15 IST
ಅಕ್ಷರ ಗಾತ್ರ

ಗೋಕಾಕ: ಗೋಕಾಕ ಚಾಲೆಂಜ್ 2012 ರಾಷ್ಟ್ರ ಮಟ್ಟದ ಆಫ್ ರೋಡ್ ರಾಲಿ ಸ್ಪರ್ಧೆಗೆ ಶನಿವಾರ  ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಎರಡು ದಿನಗಳ ಕಾಲ ನಡೆಯುವ ರಾಷ್ಟ್ರ ಮಟ್ಟದ `ಆಫ್ ದಿ ರೋಡ್ ರಾಲಿ~ಯಲ್ಲಿ ಕರ್ನಾಟಕ ಸೇರಿದಂತೆ ಹೈದರಾಬಾದ, ಗೋವಾ, ಸತಾರಾ, ಪುಣೆ, ಕರಾಡ್ ಮೊದಲಾದ ನಗರಗಳಿಂದ 75 ವಾಹನಗಳು ಭಾಗವಹಿಸಿವೆ.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ  150 ಜನ ಸ್ಪರ್ಧಾಳುಗಳು ತಮ್ಮ  ರೇಸ್ ವಾಹನಗಳಲ್ಲಿ ಜೀವದ ಹಂಗು ತೊರೆದು ಸಹಾಸಮಯ ಹಾಗೂ ರೋಮಾಂಚನಕಾರಿ ಪ್ರದರ್ಶನ ನಡೆಸಿದರು. ಈ ರಾಲಿಲಿ, ಸಹಸ್ರಾರು ಕ್ರೀಡಾಭಿಮಾನಿಗಳ ಮೈನವಿರೇಳಿಸಿತು.

ತಾಲ್ಲೂಕಿನ ಧೂಪದಾಳ-ಕೊಣ್ಣೂರ ಗ್ರಾಮಗಳ ಮಧ್ಯದ ಕಲ್ಲಿನ ಕಣಿವೆಯಲ್ಲಿ ಆಫ್ ದಿ ರೋಡ್ ರಾಲಿಲಿಯ ಸ್ಪರ್ಧೆಯಲ್ಲಿ ಭಾಗವಹಿಸಿದ 75 ವಾಹನಗಳು ಸಂಜೆಯವರೆಗೆ ನಡೆಸಿದ ಸಾಹಸಮಯ ಪ್ರದರ್ಶನ ಮತ್ತು ತಾಂತ್ರಿಕವಾಗಿ ವಾಹನಗಳನ್ನು ಬಂಡೆ ಕಲ್ಲುಗಳ ಮೇಲೆ ಚಲಾಯಿಸಿ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದರು.

ಆಫ್ ದಿ ರೋಡ್ ರಾಲಿಲಿ ಜನಪ್ರಿಯತೆ ಪಡೆದಿದೆ. ಈ ಸ್ಪರ್ಧೆಯಿಂದ ಯುವ ಕ್ರೀಡಾಪಟುಗಳಿಗೆ ಪ್ರೇರಣೆ ದೊರೆಯಲಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಪಾಲ್ಗೊಳ್ಳಲು ಸಾಧ್ಯವಾಗಿದೆ ಎಂದು ಸಂಘಟಕ ಅಯೂಬ್ ಖಾನ್ ಮಾಧ್ಯಮದವರಿಗೆ ತಿಳಿಸಿದರು.  ಸಮೀಪದ ಯೋಗಿಕೊಳ್ಳ ಗುಡ್ಡಗಾಡುಗಳ ಮಧ್ಯ ಹರೆಯುವ ಮಾರ್ಕಂಡೇಯ ನದಿ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಭಾನುವಾರ ಸಹ ಆಫ್ ದಿ ರೋಡ್ ರಾಲಿಲಿ ನಡೆಯಲಿದೆ ಎಂದು ಸಂಘಟಕರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT