ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಆರೋಗ್ಯ ಕಾಪಾಡಿಕೊಳ್ಳಲು ಶುದ್ಧ ನೀರು ಸೇವನೆ ಅಗತ್ಯ'

Last Updated 22 ಡಿಸೆಂಬರ್ 2012, 6:00 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕುಡಿಯುವ ನೀರಿನ ಮೇಲೆಯೇ ಆರೋಗ್ಯ ಅಡಗಿದೆ. ವ್ಯಕ್ತಿಯ ದೈಹಿಕ ಸಾಮರ್ಥ್ಯವನ್ನು ಶುದ್ಧ ನೀರು ಹೆಚ್ಚಿಸುತ್ತದೆ ಎಂದು ಲಯನ್ಸ್ ಕ್ಲಬ್ ರಾಜ್ಯಪಾಲ ಸದಾಶಿವ ಹೇಳಿದರು.

ಇಲ್ಲಿಗೆ ಸಮೀಪದ ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿಗೆ ಕಾಫಿ ಬೆಳೆಗಾರ ಹಾಗೂ ಲಯನ್ಸ್ ಕ್ಲಬ್ ಸದಸ್ಯ ಕಳ್ಳಿಚಂಡ ಪ್ರಕಾಶ್ ನೂತನವಾಗಿ ಒದಗಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕುಡಿಯುವ ನೀರು ಬಹಳ ಮಲಿನವಾಗಿದೆ. ಇದನ್ನು ತಪ್ಪಿಸಿ ಆರೋಗ್ಯವಂತ ಪ್ರಜೆಗಳನ್ನು ರೂಪಿಸಲು ಲಯನ್ಸ್ ಕ್ಲಬ್ ಶ್ರಮಿಸುತ್ತಿದೆ ಎಂದರು.

ದಾನಿ ಕಳ್ಳಿಚಂಡ ಪ್ರಕಾಶ್ ಮಾತನಾಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಸೂರಜ್ ಉತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಧನು ಉತ್ತಪ್ಪ, ಮಾಜಿ ಅಧ್ಯಕ್ಷರಾದ ಮಾಪಂಗಡ ಯಮುನಾ ಚಂಗಪ್ಪ, ಡಾ. ಎಂ.ಸಿ. ಸುಬ್ಬಯ್ಯ, ಅಪ್ಪಣ್ಣ, ಸದಸ್ಯರಾದ ಅಳೆಂಮೇಂಗಡ ದೆವಯ್ಯ, ಮಾಪಂಗಡ ರಾಮು, ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಪಿ.ಎನ್. ಪೆಮ್ಮಯ್ಯ, ಕಾರ್ಯದರ್ಶಿ ಕಳ್ಳಿಚಂಡ ಜಯ, ಕೋಶಾಧಿಕಾರಿ ಅಡ್ಡೇಂಗಡ ದೇವಯ್ಯ, ಸಹ ಕೋಶಾಧಿಕಾರಿ ಬಿ.ಎನ್. ಕೇಶವಮೂರ್ತಿವ, ಸದಸ್ಯ ಕಾಟಿಮಾಡ ಶರೀನ್ ಮುತ್ತಣ್ಣ, ಹರಿಣಿ ಸದಾಶಿವ, ಪ್ರಾಂಶುಪಾಲ ಕೆ.ವಿ. ಶ್ರೀಮೂರ್ತಿ ಹಾಜರಿದ್ದರು. ಉಪನ್ಯಾಸಕ ಕೆ.ಜಿ. ಅಶ್ವನಿಕುಮಾರ್ ಸ್ವಾಗತಿಸಿದರು. ಡಾ. ಜೆ.ಸೋಮಣ್ಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT