ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ತಪಾಸಣೆ ಶಿಬಿರ

Last Updated 24 ಜನವರಿ 2011, 19:30 IST
ಅಕ್ಷರ ಗಾತ್ರ

ಪತಂಜಲಿ ಯೋಗ
ಪತಂಜಲಿ ಯೋಗಾಶ್ರಮ ಟ್ರಸ್ಟ್  ಬುಧವಾರ ಪ್ರಕಾಶಯೋಗಿ ಇಂಟರ್‌ನ್ಯಾಷನಲ್ ಫೌಂಡೇಷನ್ ಸಹಯೋಗದಲ್ಲಿ ಪತಂಜಲಿ ಕ್ರಿಯೆ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರ ಏರ್ಪಡಿಸಿದೆ.

ಸ್ಥಳ: ನಂ,538, 4ನೇ ಅಡ್ಡ ರಸ್ತೆ, 8ನೇ ಮುಖ್ಯ ರಸ್ತೆ, ಹಂಪಿ ನಗರ. ಸಂಜೆ 5.55. ಮಾಹಿತಿಗೆ 98440 19712, 2320 4088.

ಆಯುರ್ವೇದ
ದೀಪಕ್ ಆಯುರ್ವೇದಿಕ್ ಚಿಕಿತ್ಸಾಲಯ ಬುಧವಾರ ಉಚಿತ ಆಯುರ್ವೇದ ಚಿಕಿತ್ಸೆ ಮತ್ತು ಸಲಹಾ ಶಿಬಿರ ಆಯೋಜಿಸಿದೆ.
ಸೊಂಟ ನೋವು ಸೇರಿದಂತೆ ಹಳೆಯ ನೋವುಗಳಿಗೆ ಶಿಬಿರದಲ್ಲಿ ಮಸಾಜು ಮಾಡಲಾಗುತ್ತದೆ. ಮೂಲವ್ಯಾಧಿ, ಕಾಮಾಲೆ ಹಾಗೂ ಸ್ತ್ರೀಯರ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ.

ಸ್ಥಳ: ನಂ, 8, ಬಿನ್ನಿಮಿಲ್ ರಸ್ತೆ, ನ್ಯೂ ಕಾರ್ಪೊರೇಷನ್ ಬಿಲ್ಡಿಂಗ್. ಬೆಳಿಗ್ಗೆ 11. ಮಾಹಿತಿಗೆ: 98443 84766.

‘ಸಿದ್ಧಗಂಗ..’
ಸತ್ಯನಾರಾಯಣ ನಗರದ ಸಿದ್ಧಗಂಗ ಎಜುಕೇಷನ್ ಸೊಸೈಟಿ ಬುಧವಾರ ಗಣರಾಜ್ಯೋತ್ಸವದ ಅಂಗವಾಗಿ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದೆ. ಇದೇ ಸಂದರ್ಭದಲ್ಲಿ ಮಕ್ಕಳಿಂದ ದೇಶ ಭಕ್ತಿಗೀತೆ ಕಾರ್ಯಕ್ರಮ ಮತ್ತು ವ್ಯಂಗ್ಯಚಿತ್ರ ಪ್ರದರ್ಶನವೂ ಇದೆ.

ಶಿಬಿರದಲ್ಲಿ ವೈದ್ಯಕೀಯ ತಪಾಸಣೆ, ಶಸ್ತ್ರ ಕ್ರಿಯೆ, ಸ್ತ್ರೀರೋಗ, ಶಿಶು ವೈದ್ಯ, ಮೂಳೆ ಮತ್ತು ಕೀಲು ರೋಗ, ಇಎನ್‌ಟಿ, ದಂತ, ಚರ್ಮ ಮತ್ತು ಕ್ಷಯ ತಪಾಸಣೆ, ಉಚಿತ ಔಷಧ ವಿತರಣೆ ಇರುತ್ತದೆ.

ಉದ್ಘಾಟನೆ: ಸಪ್ತಗಿರಿ ಆಸ್ಪತ್ರೆ ನಿರ್ದೇಶಕ ಡಾ. ಕಂಠೀರವ ಬಾಲಸರಸ್ವತಿ. ಅತಿಥಿ: ಪ್ರೊ. ಜಿ.ಎಂ. ಶಿರಹಟ್ಟಿ,  ದಯಾನಂದ್. ಡಾ.ಎಸ್. ರಾಜಣ್ಣ, ಈರಪ್ಪ, ಡಾ.ಡಿ.ಎಸ್. ವಾಸುದೇವ್. ಅಧ್ಯಕ್ಷತೆ: ಸಿದ್ಧಗಂಗಮ್ಮ.

ಸ್ಥಳ: ಸಿದ್ಧಗಂಗ ಪ್ರೌಢಶಾಲೆ, ಸತ್ಯನಾರಾಯಣನಗರ, ಟಿ. ದಾಸರಹಳ್ಳಿ, 8ನೇ ಮೈಲಿ. ಬೆಳಿಗ್ಗೆ 9. ಮಾಹಿತಿಗೆ: 2839 3403.

ಶಾಂತಿಗಿರಿ

ಕೇರಳದ ಪ್ರಸಿದ್ಧ ಆಯುರ್ವೇದ ವೈದ್ಯ ಡಾ. ಮೂಸಾ ಕುಂಜು ಅವರು ಆಡುಗೋಡಿಯಲ್ಲಿರುವ ಶಾಂತಿಗಿರಿ ಆಯುರ್ವೇದ ಮತ್ತು ಸಿದ್ಧ ಆಸ್ಪತ್ರೆಯಲ್ಲಿ ಮಂಗಳವಾರ ಲಭ್ಯರಿದ್ದು ಸಂಧಿವಾತ, ಸ್ಪಾಂಡಿಲಿಟೀಸ್, ಬೆನ್ನು ನೋವು, ಚರ್ಮ ರೋಗ, ನರರೋಗ ಮತ್ತು ಒತ್ತಡ ನಿರ್ವಹಣೆ ಕುರಿತು ಉಚಿತ ಸಲಹೆ ನೀಡುವರು.

ಸ್ಥಳ: ಶಾಂತಿಗಿರಿ ಆಯುರ್ವೇದ ಮತ್ತು ಸಿದ್ಧ ಆಸ್ಪತ್ರೆ, ನ್ಯೂ ಮೈಕೊ ರಸ್ತೆ, ಆಡುಗೋಡಿ. ಬೆಳಿಗ್ಗೆ 10ರಿಂದ ಸಂಜೆ 8. ಮಾಹಿತಿಗೆ 6572 1877, 92430 29151.

‘ಆಯುರ್ವೇದ’ ಕಾಲ್ನಡಿಗೆ ಜಾಥಾ
ಶಾಸ್ತ್ರೀಸ್ ಆಯುರ್ಧಾಮ ಆಯುರ್ವೇದ ಆಸ್ಪತ್ರೆ ಬುಧವಾರ ಆರೋಗ್ಯ ಭಾರತಿ ಹಾಗೂ ಯೆಲಚೇನಹಳ್ಳಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ‘ಆಯುರ್ವೇದ ಉಳಿಸಿ-ಬೆಳೆಸಿ’ ಆಂದೋಲನ ಹಮ್ಮಿಕೊಂಡಿದೆ.

ಇದರ ಅಂಗವಾಗಿ ಬೆಳಿಗ್ಗೆ 8.15ಕ್ಕೆ ಕನಕಪುರ ಮುಖ್ಯ ರಸ್ತೆಯ ಸಾರಕ್ಕಿ ಸಿಗ್ನಲ್ (ಫ್ಯಾಮಿಲಿ ಮಾರ್ಟ್) ನಿಂದ ಶಾಸ್ತ್ರೀಸ್ ಆಯುರ್ಧಾಮ ಆಸ್ಪತ್ರೆವರೆಗೆ ನಡೆಯುವ ಕಾಲ್ನಡಿಗೆ ಜಾಥಾದಲ್ಲಿ ನಟರಾದ ದೊಡ್ಡಣ್ಣ, ಪ್ರಿಯಾಂಕ ಉಪೇಂದ್ರ, ತಾರಾ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 9ಕ್ಕೆ ಆಯುರ್ವೇದ ಆರೋಗ್ಯ ತಪಾಸಣಾ ಹಾಗೂ ಮಾರ್ಗದರ್ಶನ ಶಿಬಿರ ಏರ್ಪಡಿಸಿದ್ದು, ಚಿಕಿತ್ಸೆ ಜೊತೆಗೆ ಉಚಿತ ಔಷಧಿ ವಿತರಣೆಯೂ ಇರುತ್ತದೆ.

ಸ್ಥಳ: ಆಯುರ್ಧಾಮ ಆಸ್ಪತ್ರೆ, ನಂ 8 ಮತ್ತು 9, ಕನಕನಗರ, ಯೆಲಚೇನಹಳ್ಳಿ (ಆರೋಗ್ಯ ಕೇಂದ್ರ ಸಮೀಪ) ಕನಕಪುರರಸ್ತೆ.        
                        
ಸಾಗರ್ ಆಸ್ಪತ್ರೆ
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸಾಗರ್ ಆಸ್ಪತ್ರೆ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಹಿರಿಯ ನಾಗರಿಕರಿಗೆ ಉಚಿತ ತಪಾಸಣಾ ಶಿಬಿರ ಏರ್ಪಡಿಸಿದೆ. ಸಾಮಾನ್ಯ ವೈದ್ಯರಲ್ಲದೆ ಮೂಳೆವೈದ್ಯರು, ಸ್ತ್ರೀರೋಗ ತಜ್ಞರು, ಮೂತ್ರಪಿಂಡ ತಜ್ಞರು ಲಭ್ಯವಿರುತ್ತಾರೆ. ಮೊದಲು ಹೆಸರು ನೋಂದಾಯಿಸಿಕೊಂಡ 100 ಜನರಿಗೆ ಈ ಸೌಲಭ್ಯ. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕ್ಯಾತನಹಳ್ಳಿ ಸುಬ್ಬ ಕೃಷ್ಣ ಅವರನ್ನು ಸನ್ಮಾನಿಸಲಾಗುವುದು.

ಜಯನಗರದ ಸಾಗರ್ ಆಸ್ಪತ್ರೆಯಲ್ಲಿ ಹೆಸರು ನೋಂದಾಯಿಸಲು 4288 8888/ 8522 ಮತ್ತು ಬನಶಂಕರಿ ಆಸ್ಪತ್ರೆಯಲ್ಲಿ ಹೆಸರು ನೋಂದಾಯಿಸಲು 4299 9999 / 7800/7700 .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT