ಜಕಾರ್ತ (ಎಎಫ್‌ಪಿ): ಐವತ್ತು ಜನರನ್ನು ಹೊತ್ತೊಯ್ದ ರಷ್ಯದ ಸುಖೋಯ್ ಸೂಪರ್ ಜೆಟ್ 100 ಪ್ರಾತ್ಯಕ್ಷಿಕೆ ವಿಮಾನವೊಂದು ಜಕಾರ್ತದ ದಕ್ಷಿಣಕ್ಕಿರುವ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಬುಧವಾರ ಕಣ್ಮರೆಯಾಗಿದೆ.
`ಬೊಗೊರ್ ಪ್ರದೇಶದಿಂದ ವಿಮಾನವು ರೇಡಾರ್ ಸಂಪರ್ಕದಿಂದ ತಪ್ಪಿಸಿಕೊಂಡಿತು. ವಿಮಾನವು ಅಪಘಾತಕ್ಕೀಡಾಗಿದೆಯೇ ಇಲ್ಲವೇ ಎಂಬ ಬಗ್ಗೆ ಅನಿಶ್ಚಿತತೆ ಇದೆ~ ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ವಕ್ತಾರರು ಹೇಳಿದ್ದಾರೆ.
ವಿಮಾನವು ಸ್ಥಳೀಯ ಕಾಲಮಾನ ಮಧ್ಯಾಹ್ನ ಎರಡು ಗಂಟೆಗೆ ಜಕಾರ್ತದ ಪೂರ್ವಕ್ಕಿರುವ ಹಲೀಂ ಪೆರ್ಡಾನಕುಸುಮ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭಿಸಿತ್ತು. `ಬುಧವಾರ ಮಧ್ಯಾಹ್ನ 2.50ರ ಸುಮಾರಿಗೆ ವಿಮಾನವು 10,000 ಅಡಿಗಳಿಂದ 6,000 ಅಡಿಗಳಿಗೆ ಕುಸಿಯಿತು~ ಎಂದು ಸಂಸ್ಥೆ ಹೇಳಿದೆ.