ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೋ- ಜರ್ಮನ್: ಹಲವು ದ್ವಿಪಕ್ಷಿಯ ಒಪ್ಪಂದಗಳಿಗೆ ಸಹಿ

Last Updated 12 ಏಪ್ರಿಲ್ 2013, 10:32 IST
ಅಕ್ಷರ ಗಾತ್ರ

ಬರ್ಲಿನ್ (ಪಿಟಿಐ): ಭಾರತ ಮತ್ತು ಜರ್ಮನಿ ಹಲವು ದ್ವಿಪಕ್ಷಿಯ ಒಪ್ಪಂದಗಳಿಗೆ ಶುಕ್ರವಾರ ಪರಸ್ಪರ ಸಹಿ ಹಾಕಿದವು.

ಯುರೋಪಿಯನ್ ಆರ್ಥಿಕ ಸಮಾವೇಶಕ್ಕೆ ಇಲ್ಲಿಗೆ ಆಗಮಿಸಿರುವ  ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಜರ್ಮನಿಯ ಚಾನ್ಸಲರ್ ಆಂಜೆಲಾ ಮಾರ್ಕೆಲ್ ಅವರುಗಳು ವಿವಿಧ ಅಭಿವೃದ್ಧಿ ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ವ್ಯಾಪರ, ರಫ್ತು, ಹೂಡಿಕೆ, ಇಂಧನ, ಇಂಧನ ಭದ್ರತೆ, ತರಬೇತಿ, ಉನ್ನತ ಶಿಕ್ಷಣ, ಪರಿಸರ, ಸಂಸ್ಕೃತಿ, ತಂತ್ರಜ್ಞಾನ, ಮಿಲಿಟರಿ ಸೇರಿದಂತೆ ಮುಂತಾದ ವಲಯಗಳಲ್ಲಿ ಪರಸ್ಪರ ಸಹಕಾರದೊಂದಿಗೆ ಜರ್ಮನಿಯು  ಭಾರೀ ಮೊತ್ತದ ಹೂಡಿಕೆಯನ್ನು ಭಾರತದಲ್ಲಿ ಮಾಡಲಿದೆ ಎಂದು ಮಾರ್ಕೆಲ್ ತಿಳಿಸಿದರು.

ಹಲವು ದ್ವಿಪಕ್ಷಿಯ ಒಪ್ಪಂದಗಳ ಮೂಲಕ ಎರಡು ದೇಶಗಳು ಅಭಿವೃದ್ಧಿ ಸಾಧಿಸಲಿವೆ ಎಂದು ಮಾರ್ಕೆಲ್ ಇದೇ ಸಂದರ್ಭದಲ್ಲಿ ತಿಳಿಸಿದರು.

ಈ ಒಪ್ಪಂದಗಳ ಅನುಷ್ಠಾನದಿಂದ ಇಂಡೋ- ಜರ್ಮನ್ ನಡುವಿನ ಬಾಂಧವ್ಯ ಮತ್ತಷ್ಟು ವೃದ್ಧಿಯಾಗಲಿದೆ ಎಂದು  ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT