ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಬೀದಿನಾಟಕೋತ್ಸವ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯು ಸಾಮಾಜಿಕ ಸಮಸ್ಯೆಗಳ ವಸ್ತುವಿಷಯವನ್ನು ಕೇಂದ್ರವಾಗಿಟ್ಟುಕೊಂಡು, ಜನಸಾಮಾನ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ನಾಟಕೋತ್ಸವ ಆಯೋಜಿಸುತ್ತಿದೆ.  ಈ ವರ್ಷ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಜೊತೆಯಲ್ಲಿ ಶುಕ್ರವಾರ (ಜ.20- 22) ದಿಂದ  ಭಾನುವಾರದವರೆಗೆ ಬೀದಿ ನಾಟಕೋತ್ಸವ ಹಮ್ಮಿಕೊಂಡಿದೆ.

ಈ ವರ್ಷ  ಕನ್ನಡ ನವೋದಯ ಕಾಲಘಟ್ಟಕ್ಕೆ ಈಗ ಶತಮಾನ ಸಂಭ್ರಮ. ಈ ಸಂದರ್ಭದಲ್ಲಿ ಆವಿಷ್ಕಾರ 16ನೇ ಬೀದಿನಾಟಕೋತ್ಸವ ಏರ್ಪಡಿಸಿದೆ. ಬೀದಿ ನಾಟಕಗಳು, ರಂಗನಾಟಕಗಳು, ಕಲಾಶಿಬಿರಗಳು ಹಾಗೂ ಕವಿಗೋಷ್ಠಿ, ಸಂಗೀತ ಶಿಬಿರ, ಜಾಥಾ, ಸಿನಿಮಾ ಪ್ರದರ್ಶನ ಸೇರಿದಂತೆ ಅನೇಕ ವೈವಿಧ್ಯಮಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯದ ನಾನಾ ಜಿಲ್ಲೆಗಳ ತಂಡಗಳು ನಾಟಕಗಳನ್ನು ಪ್ರದರ್ಶಿಸಲಿವೆ. ಜೊತೆಗೆ ಜಾನಪದ ನೃತ್ಯ, ರಂಗಗೀತೆಗಳ ಗಾಯನ ಕಾರ್ಯಕ್ರಮ ಉದ್ಯಾನ ನಗರಿ ಮಂದಿಗೆ ಮುದ ನೀಡಲಿವೆ.

ರೈತರ ಆತ್ಮಹತ್ಯೆ, ನಿರುದ್ಯೋಗ ಸಮಸ್ಯೆ, ಕೋಮುವಾದ, ಸಾಮ್ರಾಜ್ಯವಾದ, ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ, ಶಿಕ್ಷಣದ ವ್ಯಾಪಾರೀಕರಣ ಹೀಗೆ ಹಲವಾರು ವಿಷಯಗಳನ್ನು ಆಧರಿಸಿದ ನಾಟಕಗಳಿಗೆ ಪ್ರಧಾನ್ಯತೆ ನೀಡಲಾಗುತ್ತದೆ.
ಈ ನಾಟಕೋತ್ಸವದಲ್ಲಿ ಎಂಟು ನಾಟಕಗಳು ಪ್ರದರ್ಶನಗೊಳ್ಳಲಿವೆ.

ಶುಕ್ರವಾರ ಸಂಜೆ 6ಕ್ಕೆ ಸ್ವಾಮಿ ಗಾಮನಹಳ್ಳಿ ಅವರಿಂದ ಪ್ರಗತಿಪರ ಗೀತೆಗಳ ಗಾಯನ. ಚಿತ್ರ ತಂಡದಿಂದ ನಾಟಕ. ನಂತರ ಅಂಕುರ ತಂಡದಿಂದ `ವಿಮುಕ್ತಿ ಪಯಣ~ (ನಿರ್ದೇಶನ: ಲಕ್ಷ್ಮೀ ನಾಡಗೌಡ) ನಾಟಕ ಪ್ರದರ್ಶನ.

ಶನಿವಾರ ಸಂಜೆ 6ಕ್ಕೆ ನಾರಾಯಣರಾವ್ ಮಾನೆ ಅವರಿಂದ ಪ್ರಗತಿಪರ ಗೀತೆಗಳ ಗಾಯನ. ನಂತರ ಯುವಜನ ಸಾಂಸ್ಕೃತಿಕ ವೇದಿಕೆಯಿಂದ `ಭರತ ಖಂಡ ದರ್ಶನ~ (ರಚನೆ: ವಿಜಯ ಕುಮಾರ್, ನಿರ್ದೇಶನ: ನಾಗರಜ್) ನಾಟಕ ಪ್ರದರ್ಶನ. ಮಕ್ಕಳ ಮಂಟಪ ತಂಡದಿಂದ `ಕೈಲಾಸಮ್ಮೂ ಪೋಲಿಕಿಟ್ಟಿನೂ~ (ನಿರ್ದೇಶನ: ಭಾನುಪ್ರಕಾಶ್ ಕಡಗತ್ತೂರ್), ಚಿತ್ರದುರ್ಗದ ಯುವಜನ ಸಾಂಸ್ಕೃತಿಕ ವೇದಿಕೆ ತಂಡದಿಂದ `ಮಣ್ಣಾದ ಮಣ್ಣಿನ ಮಕ್ಕಳು~ (ನಿರ್ದೇಶನ: ನಾಗರಾಜ) ನಾಟಕಗಳ ಪ್ರದರ್ಶನ.

ಭಾನುವಾರ ಡಾ.ಮುದ್ದು ಮೋಹನ್ ಅವರಿಂದ ಪ್ರಗತಿಪರ ಗೀತೆಗಳ ಗಾಯನ. ಆವಿಷ್ಕಾರ ತಂಡದಿಂದ `ಕೋರ್ಟಿನಲ್ಲಿ ಗೆದ್ದ ಕುದುರೆ~ (ನಿರ್ದೇಶನ: ಡಾ.ಸುನೀತ್ ಕುಮಾರ್ ಶೆಟ್ಟಿ) ನಾಟಕ ಪ್ರದರ್ಶನ.

ಕರ್ನಾಟಕ ಕಲಾದರ್ಶಿನಿ ತಂಡದಿಂದ `ಮತ್ತೆ ಮತ್ತೆ ಶಾಕುಂತಲಾ~ ಯಕ್ಷಗಾನ ಪ್ರದರ್ಶನ. (ರಚನೆ:ಡಾ.ಬಿ.ಆರ್. ಮಂಜುನಾಥ, ನಿರ್ದೇಶನ: ಶ್ರೀನಿವಾಸ ಸಾಸ್ತಾನ).
ಉದ್ಘಾಟನೆ: ಜಿ.ವೆಂಕಟಸುಬ್ಬಯ್ಯ. ಆಶಯ ಭಾಷಣ: ಡಾ.ಸುನೀತ್ ಕುಮಾರ್ ಶೆಟ್ಟಿ.

ಅಧ್ಯಕ್ಷತೆ: ಡಾ.ಜಿ.ಎಸ್.ಕುಮಾರ್.

ಸ್ಥಳ: ಮಲ್ಲೇಶ್ವರಂ ಆಟದ ಮೈದಾನ. ಸಂಜೆ 5.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT