ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ ಬಾಕ್ಸ್

Last Updated 26 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಪ್ರಳಯವನ್ನು `ಕಾಮನಬಿಲ್ಲು' ಕಂಡ ಪರಿ ಚೆನ್ನಾಗಿತ್ತು. ಪ್ರಳಯದ ಭಯವನ್ನು ದೂರ ಮಾಡುವ ಹಾಗೆಯೇ ಪ್ರಳಯದಂಥ ಪ್ರಚಾರಗಳ ಮರ್ಮವನ್ನೂ ಬಯಲು ಮಾಡುವ ಅಭಿಪ್ರಾಯಗಳನ್ನೆಲ್ಲಾ ಒಂದೆಡೆಗೆ ತಂದು `ಪ್ರಳಯ'ವನ್ನು ಸಂಭ್ರಮವನ್ನಾಗಿ ಮಾಡಿದ್ದಕ್ಕೆ ಥ್ಯಾಂಕ್ಸ್.
- ಎಲ್.ಪ್ರಕಾಶ್, ಮೈಸೂರು

ಹೌದು... ಇನ್ನೂ ಪ್ರಳಯ ಆಗಿಯೇ ಇಲ್ಲ ಎಂದುಕೊಳ್ಳುವುದೇಕೆ. ಪ್ರಳಯ ಯಾವತ್ತೋ ಆಗಿಬಿಟ್ಟು ನಾವೆಲ್ಲಾ ಮತ್ಯಾವುದೋ ಲೋಕದಲ್ಲಿ ಇದ್ದುಕೊಂಡು ಅಲ್ಲಿಯೂ `ಕಾಮನಬಿಲ್ಲು' ಓದುತ್ತಿದ್ದೇವೆ ಎಂದೇಕೆ ಭಾವಿಸಬಾರದು. ಯೋಗರಾಜ ಭಟ್ಟರು ಹೇಳಿದ್ದೇ ಸರಿ. ಇಷ್ಟೆಲ್ಲಾ ಕನ್ನಡ ಸಿನಿಮಾ ರಿಲೀಸ್ ಆದ ಮೇಲೂ ಪ್ರಳಯ ಆಗಿಲ್ಲ ಎಂದು ನಂಬುವುದು ಹೇಗೆ.
- ಎಚ್.ಕೆ. ನಿರಂಜನ, ಮಂಡ್ಯ

`ಗ್ಯಾಜೆಟ್ ಲೋಕ'ದ ಪವನಜ ಟಿ.ವಿ.ಗಳ ಬಗ್ಗೆ ಬರೆಯುವ ಭರವಸೆ ಕೊಟ್ಟಿದ್ದಾರೆ. ಇದರಲ್ಲಿ ಟಿ.ವಿ. ಖರೀದಿಸುವ ನನ್ನಂಥವರಿಗೆ ಅನುಕೂಲವಾಗುವಂಥ ತಾಂತ್ರಿಕ ವಿವರಗಳಿರಲಿ. ಏಕೆಂದರೆ ಟಿ.ವಿ. ಅಂಗಡಿಯವರು ಕೊಡುವ ಬ್ರೋಷರ್‌ನಲ್ಲಿ ಇರುವುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಒಂದು ಎಲೆಕ್ಟ್ರಾನಿಕ್ಸ್ ಡಿಪ್ಲೊಮೊ ಬೇಕಾಗುತ್ತದೆ. ಟಿ.ವಿ. ಹೆಚ್ಚು ಹೆಚ್ಚು ಸೂಕ್ಷ್ಮ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ ಎಂಬುದೇನೋ ನಿಜ. ಆದರೆ ಅದನ್ನು ಕೇವಲ ತಜ್ಞರಿಗೆ ಮಾತ್ರ ಅರ್ಥವಾಗುವಂಥ ಪ್ರಚಾರ ಪತ್ರಗಳನ್ನೇಕೆ ಟಿ.ವಿ. ಕಂಪೆನಿಯವರು ಸಿದ್ಧಪಡಿಸುತ್ತಾರೆ ಎಂಬುದಂತೂ ಗೊತ್ತಾಗುತ್ತಿಲ್ಲ.
-ಜೆ. ರಾಧಾಕೃಷ್ಣ, ಬೆಂಗಳೂರು

ಟಿ.ವಿ.ಗಳ ಕುರಿತಂತೆ ಪವನಜ ಅವರು ಬರೆಯಲಾರಂಭಿಸುತ್ತಿರುವುದು ಸಂತೋಷದ ಸಂಗತಿ. ಎಲ್‌ಇಡಿ ಮತ್ತು ಎಲ್‌ಸಿಡಿ ಟಿ.ವಿ.ಗಳ ಕುರಿತಂತೆ ಹೆಚ್ಚಿನ ಮಾಹಿತಿಯ ಅಗತ್ಯವಿದೆ. ಈಗ ಟಿ.ವಿ. ಅಂಗಡಿಗಳಲ್ಲಿ ಸಿಆರ್‌ಟಿ ಟಿ.ವಿ.ಗಳೇ ಇಲ್ಲವಾಗಿವೆ. ದೊಡ್ಡ ದೊಡ್ಡ ಬ್ರಾಂಡ್‌ಗಳ ಟಿ.ವಿ.ಗಳಿಗಿಂತ ಕಡಿಮೆ ಬೆಲೆಯಲ್ಲಿ ದೊರೆಯುವ ಟಿ.ವಿ.ಗಳ ಬಗ್ಗೆ ಮಾಹಿತಿ ನೀಡಿದರೆ ಉತ್ತಮ.
- ಕೆ.ಜಿ. ಪಾರ್ವತಿ, ಹಾವೇರಿ

ಅಮಿತ್ ಎಂ.ಎಸ್. ಅವರ `ತಪ್ಪುದೇಹದೊಳಗಿಂದ ಹೊರಬಂದು' ಮನಮಿಡಿಯುವಂತಿತ್ತು. ಬೀದರ್ ಕೋಟೆಯ ರಕ್ಷಣೆಯ ಕುರಿತಂತೆ ಸರ್ಕಾರದ ಗಮನ ಸೆಳೆಯುವುದರ ಜೊತೆಗೆ ಮಂಗಳಮುಖಿಯರಿಗೆ ಮುಖ್ಯವಾಹಿನಿಯಲ್ಲಿ ಅವಕಾಶ ಕಲ್ಪಿಸುವ ಪ್ರಯತ್ನವಾಗಿ ವೆಂಕಟೇಶ್ ಅವರು ಮಾಡಿದ ಪ್ರಯತ್ನ ಬಹಳ ಶ್ಲಾಘನೀಯ. ಓಲ್ಗಾ ಅವರ ಸಾಧನೆ ಇತರರಿಗೂ ಸ್ಫೂರ್ತಿಯಾಗಲಿ. ಅದಕ್ಕಿಂತ ಹೆಚ್ಚಾಗಿ ನಾವು ಮನ ತೆರೆದು, ಪೂರ್ವಗ್ರಹಗಳನ್ನು ತ್ಯಜಿಸಿ ಮಂಗಳಮುಖಿಯರಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗಲು ಅವಕಾಶ ಕಲ್ಪಿಸುವ ಸಂಕಲ್ಪ ಮಾಡೋಣ.
- ಅಶೋಕ ಕುಮಾರ ಕಮತಗಿ, ಮದ್ಲೂರ, ಬೆಳಗಾವಿ

ಕೊನೆಯ ಪುಟದಲ್ಲಿ ಪ್ರಕಟಿಸುತ್ತಿರುವ ಸಾಧಕರ ವಿವರಗಳು ತುಂಬಾ ಆಸಕ್ತಿ ಹುಟ್ಟಿಸುವಂತಿರುತ್ತವೆ. ಬಹಳ ಚುಟುಕಾಗಿ ಇರುವ ಈ ವಿವರಗಳ ಜೊತೆಗೆ ಹೆಚ್ಚಿನ ಮಾಹಿತಿಗಳನ್ನು ಎಲ್ಲಿಂದ ಪಡೆಯಬಹುದು ಎಂಬ ಅಂಶವನ್ನೂ ಪ್ರಕಟಿಸಿದರೆ ಉತ್ತಮ. ಕನಿಷ್ಠ ಮಾಹಿತಿ ಇರುವ ವೆಬ್‌ಸೈಟ್‌ಗಳ ವಿವರಗಳನ್ನಾದರೂ ಕೊಡಬಹುದು.
- ಕೃಷ್ಣಪ್ಪ ಎಂ.ಜಿ. ಪುತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT