ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟರಲ್ಲೇ ಬೆಂಗಳೂರಿನಲ್ಲಿ ಇಸ್ರೇಲ್ ರಾಯಭಾರ ಕಚೇರಿ ಆರಂಭ

Last Updated 10 ಜನವರಿ 2012, 4:30 IST
ಅಕ್ಷರ ಗಾತ್ರ

ಜೆರುಸಲೇಂ (ಪಿಟಿಐ): ಭಾರತ ಮತ್ತು ಇಸ್ರೇಲ್ ದೇಶಗಳ ನಡುವಣ ಸಹಕಾರದಲ್ಲಿನ ಉನ್ನತ ತಂತ್ರಜ್ಞಾನ ಕ್ಷೇತ್ರದ ಪ್ರಗತಿಗೆ ಉತ್ತೇಜನ ಕೊಡುವ ಆಶಯದಿಂದ ಕೇಂದ್ರ ಸರ್ಕಾರವು, ಇಸ್ರೇಲ್ ಸರ್ಕಾರಕ್ಕೆ ಬೆಂಗಳೂರಿನಲ್ಲೊಂದು ರಾಯಭಾರ ಕಚೇರಿ ತೆರೆಯಲು ಅನುಮತಿ ನೀಡಿದೆ.

ಭಾರತದ ಈ ಕ್ರಮವನ್ನು ಸ್ವಾಗತಿಸಿರುವ ಇಸ್ರೇಲ್ ದೇಶದ ವಿದೇಶಾಂಗ ಸಚಿವ ಅವಿಗ್ಡೋರ್ ಲೇಬರ್ ಮನ್ ಅವರು, ಇಲ್ಲಿಗೆ ಎರಡು ದಿನಗಳ ಭೇಟಿಗೆ ಸೋಮವಾರ ಇಲ್ಲಿಗೆ ಬಂದಿರುವ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರಿಗೆ ಧನ್ಯವಾದ ಹೇಳಿದ್ದಾರೆ.

~ಭಾರತದ ಈ ನಿರ್ಧಾರದಿಂದ ಎರಡೂ ದೇಶಗಳ ನಡುವಣ ವಾಣಿಜ್ಯ ವ್ಯವಹಾರಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ~ ಎಂದಿರುವ ಅವರು, ~ಎರಡೂ ದೇಶಗಳು ಈ ಆಚರಿಸುತ್ತಿರುವ ತಮ್ಮ ಎರಡು ದಶಕಗಳ ರಾಯಭಾರ ವ್ಯವಹಾರ ಸಂಬಂಧದ ಸಂಭ್ರಮದ ಸಂದರ್ಭದಲ್ಲಿನ ಈ ಸುದ್ದಿ  ಅದ್ಭುತ ಸುದ್ದಿ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಬೆಂಗಳೂರಿನಲ್ಲಿ ತಮ್ಮ ಕಚೇರಿಗಳನ್ನು ಹೊಂದಿರುವ ಇಸ್ರೇಲಿನ ವಿವಿಧ ಕಂಪೆನಿಗಳ ಪದಾಧಿಕಾರಿಗಳು, ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ~ಇದರಿಂದ ಆಡಳಿತಾತ್ಮಕ ವ್ಯವಹಾರಗಳಿಗಾಗಿ ಒಂದು ಕಡೆಯಿಂದ ಇನ್ನೊಂದು ಕಡೆ ಅಲೆಯುವ ಪ್ರಯಾಸ ತಪ್ಪುತ್ತದೆ ಹಾಗೂ ಸಮಯದ ಉಳಿತಾಯವಾಗಲಿದೆ~ ಎಂದು ಪದಾಧಿಕಾರಿಗಳು ಹೇಳಿದ್ದಾರೆ.

ಇಸ್ರೇಲ್ ದೇಶವು ಈಗಾಗಲೇ ಮುಂಬೈ ಮತ್ತು ದೆಹಲಿಗಳಲ್ಲಿ ತನ್ನ ರಾಯಭಾರ ಕಚೇರಿಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT