ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು: ಕರ್ನಾಟಕದ ಲಿಖಿತ್‌ಗೆ ಕಂಚು

Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಎಸ್.ಪಿ. ಲಿಖಿತ್ ಇಸ್ರೇಲ್‌ನಲ್ಲಿ ಏಪ್ರಿಲ್ 7ರಿಂದ 12ರ ವರೆಗೆ ನಡೆದ ಐಎಸ್‌ಎಫ್ ವಿಶ್ವ ಈಜು ಚಾಂಪಿಯನ್‌ಷಿಪ್‌ನ 100ಮೀಟರ್ ಬ್ರೆಸ್ಟ್ ಸ್ಟ್ರೋಕ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

14ರಿಂದ 17 ವರ್ಷದೊಳಗಿನವರ ವಿಭಾಗದ ಸ್ಪರ್ಧೆಯಲ್ಲಿ ಲಿಖಿತ್ ಒಂದು ನಿಮಿಷ 8:40ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಪಡೆದರು. ಚೀನಾದ ಲುಯಿ ಯೊನ್ಸಂಗ್ (ಕಾಲ: 1:07.40ಸೆ.) ಚಿನ್ನ ಗೆದ್ದರೆ, ಜರ್ಮನಿಯ ಡೊಮಿನಿಕೊ ಆರ್ಥನ್ (ಕಾಲ: 1:07.94ಸೆ.) ಚಿನ್ನ ಗೆದ್ದುಕೊಂಡರು.

4*50 ಮೆಡ್ಲೆ ರಿಲೇಯಲ್ಲಿ ಲಿಖಿತ್, ರೋಹಿತ್, ರಕ್ಷಿತ್ ಶೆಟ್ಟಿ ಮತ್ತು ನೈಲ್ ಕಾಂಟ್ರ್ಯಾಕ್ಟರ್ ಅವರನ್ನೊಳಗೊಂಡ ಭಾರತ ತಂಡ ಕಂಚು ಜಯಿಸಿತು. ಈ ತಂಡ ನಿಗದಿತ ಗುರಿಯನ್ನು ಒಂದು ನಿಮಿಷ 50.40 ಸೆಕೆಂಡ್‌ಗಳಲ್ಲಿ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT