ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈತನ ತೂಕ 368 ಕೆಜಿ!

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ/ಐಎಎನ್‌ಎಸ್): ವಿಶ್ವದ ಅತಿ ತೂಕ ಹೊಂದಿರುವ ಖ್ಯಾತಿ ಬ್ರಿಟನ್‌ನ ಕೇಥ್ ಮಾರ್ಟಿನ್ ಅವರದು. ಈಗ 42 ವರ್ಷದ ಅವರ ತೂಕ ಬರೋಬ್ಬರಿ 368 ಕೆಜಿ. ಯಾವಾಗಲೂ ಹಾಸಿಗೆ ಮೇಲೇ ಇರುವ ಕೇಥ್‌ಗೆ ಉಪಾಹಾರ  ಸೇರಿದಂತೆ ಇತರ ಕೆಲಸಗಳ ಸಹಾಯಕ್ಕಾಗಿ 18 ಜನರ ಅವಶ್ಯಕತೆ ಇದೆ.

ದಡೂತಿ ದೇಹದ ಕೇಥ್ ಅವರ ಸಹಾಯಕ್ಕಾಗಿ ಅಂಬ್ಯುಲೆನ್ಸ್ ಸಿಬ್ಬಂದಿ, ನರ್ಸ್‌ಗಳ ಸಹಾಯ ಬೇಕಿದ್ದು, ದೈತ್ಯ ಗಾತ್ರದ ಅವರ ಕೈಗಳನ್ನು ಮೇಲಕ್ಕೆತ್ತಲು 8 ಜನ ಅಂಬುಲೆನ್ಸ್ ಸಿಬ್ಬಂದಿ ಸಹಾಯ ಮಾಡುತ್ತಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಹಾಸಿಗೆ ಮೇಲೆ ಇರುವ ಅವರನ್ನು ಅವಶ್ಯವಿದ್ದಾಗ ಮಾತ್ರ ಆರೋಗ್ಯ ತಪಾಸಣೆಗೆ ಒಯ್ಯಲಾಗುತ್ತಿದೆ ಎಂದು `ಡೈಲಿ ಮೇಲ್~ ವರದಿ ಮಾಡಿದೆ. ಇದರ ಜೊತೆಗೆ ದಿಗ್ಭ್ರಮೆಗೊಳಿಸುತ್ತಿರುವ ಅವರ ತೂಕ, ಹೃದಯದ ಮೇಲಿನ ಒತ್ತಡ ಮತ್ತು ದೇಹದ ಇತರ ಆಂತರಿಕ ಅಂಗಾಂಗಳ ನೋಡಿಕೊಳ್ಳಲು ಮತ್ತು ವಾರದಲ್ಲಿ ಮೂರು ಬಾರಿ ಅವರಿಗೆ ಮೈ ತೊಳೆಯಲು ನಾಲ್ವರು ನರ್ಸ್‌ಗಳ ಅವಶ್ಯಕತೆ ಇದೆ.  ಕೇಥ್ ಪ್ರತಿ ದಿನ ಉಪಾಹಾರಕ್ಕಾಗಿ ಮಾಂಸ, ಮಧ್ಯಾಹ್ನ ಚಾಕೊಲೇಟ್, ರಾತ್ರಿ ಸಾಸೇಜ್ ಮತ್ತು ಚಿಪ್ಸ್‌ಗಳನ್ನು ಸೇವಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT