ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸವದ ಅಂಗವಾಗಿ ಚಲನಚಿತ್ರೋತ್ಸವ

ಹರಿಶ್ಚಂದ್ರಾಚಿ ಫ್ಯಾಕ್ಟರಿ, ಸಾಹಿಬ್‌ ಬೀಬಿ ಔರ್‌ ಗುಲಾಂ ಪ್ರದರ್ಶನ
Last Updated 13 ಡಿಸೆಂಬರ್ 2013, 5:41 IST
ಅಕ್ಷರ ಗಾತ್ರ

ಧಾರವಾಡ: ಜಿಲ್ಲಾ ಉತ್ಸವದ ಅಂಗವಾಗಿ ಹುಬ್ಬಳ್ಳಿ-–ಧಾರವಾಡ ಅವಳಿ ನಗರಗಳಲ್ಲಿ ಖ್ಯಾತ ನಿರ್ದೇಶಕರ ವಿವಿಧ ಭಾಷಿಕ ಪ್ರಶಸ್ತಿ ವಿಜೇತ ಚಲನಚಿತ್ರಗಳ ಉಚಿತ ಪ್ರದರ್ಶನಕ್ಕೆ ಜಿಲ್ಲಾ ಉತ್ಸವ ಸಮಿತಿ ವ್ಯವಸ್ಥೆ ಮಾಡಿದೆ. ಹುಬ್ಬಳ್ಳಿಯ ಸ್ಟೇಶನ್ ರಸ್ತೆಯಲ್ಲಿರುವ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಲ್ಲಿ ಇದೇ 13ರಿಂದ ಮೂರು ದಿನಗಳ ಕಾಲ ನಿತ್ಯ ಮಧ್ಯಾಹ್ನ 12, 3 ಹಾಗೂ 6ಕ್ಕೆ ಒಂದರಂತೆ ಒಟ್ಟು 9 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಧಾರವಾಡದಲ್ಲಿ ಡಿ 14 ಹಾಗೂ 15ರಂದು ಸೃಜನಾ ರಂಗಮಂದಿರದಲ್ಲಿ ಮೂರು ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಹುಬ್ಬಳ್ಳಿಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಲ್ಲಿ ಮಧ್ಯಾಹ್ನ 12ಕ್ಕೆ ಗುರುದತ್ ನಿರ್ದೇಶನದ ಹಿಂದಿ ಚಿತ್ರ ‘ಚೌದವೀಕಾ ಚಾಂದ್’, 3ಕ್ಕೆ ಗಿರೀಶ ಕಾಸರವಳ್ಳಿ ನಿರ್ದೆೇಶನದ ಕನ್ನಡ ಚಿತ್ರ ‘ಗುಲಾಬಿ ಟಾಕೀಸ್’ ಹಾಗೂ ಸಂಜೆ 6ಕ್ಕೆ ಪರೇಶ ಮೊಕಾಶಿ ನಿರ್ದೇಶನದ ಮರಾಠಿ ಚಿತ್ರ ‘ಹರಿಶ್ಚಂದ್ರಾಚಿ ಫ್ಯಾಕ್ಟರಿ’ ಪ್ರದರ್ಶನಗೊಳ್ಳಲಿವೆ.

ಡಿ 14ರಂದು ಧಾರವಾಡದ ಸೃಜನಾ ರಂಗ ಮಂದಿರದಲ್ಲಿ 12ಕ್ಕೆ ಗಿರೀಶ ಕಾರ್ನಾಡ ನಿರ್ದೇಶನದ ‘ಕಾಡು’ ಹಾಗೂ 3ಕ್ಕೆ ಅಬ್ರಾರ್‌ ಅಲ್ಟಿ ನಿರ್ದೇಶನದ ‘ಸಾಹಿಬ್‌, ಬೀಬಿ ಔರ್ ಗುಲಾಮ’ ಹಿಂದೀ ಚಿತ್ರ ಪ್ರದರ್ಶನಗೊಳ್ಳಲಿವವೆ. ಅಂದು ಹುಬ್ಬಳ್ಳಿಯಲ್ಲಿ ಮಧ್ಯಾಹ್ನ 12ಕ್ಕೆ ಕೆ.ವಿಶ್ವನಾಥ ನಿರ್ದೇಶನದ ತೆಲಗು ಚಿತ್ರ ‘ಶಂಕರಾಭರಣಂ’, 3ಕ್ಕೆ ಸುರೇಶ ಹೆಬ್ಬೀಕರ್ ನಿರ್ದೆೇಶನದ ‘ಕಾಡಿನ ಬೆಂಕಿ’ ಹಾಗೂ ಸಂಜೆ 6ಕ್ಕೆ ಶ್ಯಾಂ ಬೆನೆಗಲ್ ನಿರ್ದೆೇಶನದ ‘ಭೂಮಿಕಾ’ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಡಿ 15ರಂದು ಧಾರವಾಡದಲ್ಲಿ ಮದ್ಯಾಹ್ನ 3ಕ್ಕೆ ಮಣಿರತ್ನಂ ನಿರ್ದೆೇಶನದ ತಮಿಳು ಚಿತ್ರ ‘ನಾಯಗನ್’, ಹುಬ್ಬಳ್ಳಿಯಲ್ಲಿ 12ಕ್ಕೆ ಬಿ.ವಿ.ಕಾರಂತ ನಿರ್ದೇಶನದ ‘ಚೋಮನ ದುಡಿ’, 3ಕ್ಕೆ ಸತ್ಯಜಿತ್‌ ರೇ ನಿರ್ದೇಶನದ ಹಿಂದಿ ಚಿತ್ರ ‘ಶತರಂಜ್‌ ಕೆ ಖಿಲಾಡಿ’, 6ಕ್ಕೆ ಮಣಿತ್ನಂ ನಿರ್ದೇಶನದ ತಮಿಳು ಚಿತ್ರ ‘ಕಣ್ಣತ್ತಿಲ್ ಮುಠಾಮಿತ್ತಲ್’ ಚಲನ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT