ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಕ್ಕೊಂದು ತರಬೇತಿ

ಅಕ್ಷರ ಗಾತ್ರ

ಪದವಿ ಪಡೆದವರಿಗೆ ನೌಕರಿ ಹುಡುಕುವ ಚಿಂತೆ. ಆದರೆ ಸಾಲು ಸಾಲು ಆರ್ಥಿಕ ಹಿಂಜರಿಕೆಯ ಕಹಿ ಅನುಭವದಿಂದ ಬಹುರಾಷ್ಟ್ರೀಯ ಕಂಪೆನಿಗಳು `ಅನುಭವ ಇಲ್ಲದೆ ಉದ್ಯೋಗ ಇಲ್ಲ~ ಎಂಬ ನಿಲುವಿಗೆ ಅಂಟುಕೊಂಡಿವೆ. `ನೌಕರಿ ನೀಡದೆ ಅನುಭವ ಹೇಗೆ ದೊರಕೀತು?~ ಎಂದು ಪೋಷಕರು ಗೊಣಗುತ್ತಾರೆ.

ಆದರೆ ಈ ಮೂವರ ಸಮಸ್ಯೆಗೆ ಬೆಂಗಳೂರಿನ ಅಪೆಕ್ಸ್ ಗ್ಲೋಬಲ್ ಒಂದು ಪರಿಹಾರ ಹುಡುಕಿದೆ. ಅದೇ `ಪ್ರೊಫೆಷನಲ್ ಅಂಡ್ ಎಂಟ್ರಪ್ರೆನ್ಯೂರಲ್ ಎಕ್ಸಲೆನ್ಸ್~ ಎಂಬ ತರಬೇತಿ ಸಂಸ್ಥೆ ಸ್ಥಾಪನೆ.

ದೇಶದಲ್ಲಿ ಪ್ರತಿ ವರ್ಷ ಸುಮಾರು ಮೂವತ್ತು ಲಕ್ಷ ವಿದ್ಯಾರ್ಥಿಗಳು ಪದವಿ ಪಡೆಯುತ್ತಾರೆ. ಆದರೆ ಇವರಲ್ಲಿ ಶೇ 85ರಷ್ಟು ನಿರುದ್ಯೋಗಿಗಳಾಗುತ್ತಾರೆ ಎಂದು ಅಪೆಕ್ಸ್ ಗ್ಲೋಬಲ್‌ನ ಮಾತೃ ಸಂಸ್ಥೆ ಯೆನಪೊಯ ಶಿಕ್ಷಣ ಸಂಸ್ಥೆಯ ಲೆಕ್ಕಾಚಾರ.
 
ಈ ನಿಟ್ಟಿನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ಬಯಸುವ ಅಭ್ಯರ್ಥಿಗಳನ್ನು ಸಿದ್ಧಪಡಿಸುವ ಕೆಲಸಕ್ಕೆ ಸಂಸ್ಥೆ ತನ್ನನ್ನು ತೊಡಗಿಸಿಕೊಂಡಿದೆ. ಇದಕ್ಕಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾರಾಟ ವಿಭಾಗ, ಮಾನವ ಸಂಪನ್ಮೂಲ, ಉಗ್ರಾಣ ನಿರ್ವಹಣೆ, ಬ್ಯಾಂಕಿಂಗ್, ಕಾಲ್ ಸೆಂಟರ್ ಹಾಗೂ ಬಿಪಿಒ, ಆಸ್ಪತ್ರೆ ನಿರ್ವಹಣೆ ಇತ್ಯಾದಿ ಬಹುರಾಷ್ಟ್ರೀಯ ಕಂಪೆನಿಗಳ ಅಪೇಕ್ಷೆಗೆ ತಕ್ಕಂತೆ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಅರ್ಹ ಅಭ್ಯರ್ಥಿಗಳನ್ನಾಗಿ ಪರಿವರ್ತಿಸುವ ಯೋಜನೆಯನ್ನು ಇದಾಗಿದೆ.

ಕಾರ್ಪೊರೇಟ್ ಜಗತ್ತಿನಲ್ಲಿ ಪ್ರತಿಯೊಂದು ಕಂಪೆನಿಯೂ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡ ಮರುಕ್ಷಣದಿಂದಲೇ ಅವರಿಂದ ಫಲಿತಾಂಶ ನಿರೀಕ್ಷಿಸುವಷ್ಟು ವೇಗದಲ್ಲಿವೆ. ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವ ಅಭ್ಯರ್ಥಿಗಳನ್ನು ಪ್ರತಿಯೊಂದು ಕಂಪೆನಿಯೂ ನಿರೀಕ್ಷಿಸುತ್ತದೆ.

ಈ ಹಂತದಲ್ಲಿ ಅನುಭವದ ಕೊರತೆಯನ್ನು ಅಭ್ಯರ್ಥಿಯು ಎದುರಿಸದೇ ಇರಲಿ ಎಂಬುದು ಅಪೆಕ್ಸ್ ಗ್ಲೋಬಲ್‌ನ ಕಾಳಜಿ. ಜತೆಗೆ ಪ್ರತಿ ವರ್ಷವೂ ಹೊಸ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಲೇ ಇವೆ.

ಹಲವಾರು ಕ್ಷೇತ್ರಗಳು ಇನ್ನೂ ಅರ್ಹ ಅಭ್ಯರ್ಥಿಗಳ ಕೊರತೆಯನ್ನು ಎದುರಿಸುತ್ತಿವೆ. ಈ ನಿಟ್ಟಿನಲ್ಲಿ ಅಭ್ಯರ್ಥಿಗಳಿಗೆ ಹಾಗೂ ಅವರನ್ನು ಹುಡುಕುತ್ತಿರುವ ಕಂಪೆನಿಗಳ ನಡುವಿನ ಸೇತುವಾಗಿ ಅಪೆಕ್ಸ್ ಗ್ಲೋಬಲ್ ಕಾರ್ಯ ನಿರ್ವಹಿಸಲಿದೆ.

ಹೀಗಾಗಿ ಅಪೆಕ್ಸ್ ಗ್ಲೋಬಲ್ ಒಂದು ಕಾರ್ಪೊರೇಟ್ ಕಂಪೆನಿಯಲ್ಲಿ ಇರಬಹುದಾದ ಎಲ್ಲಾ ಬಗೆಯ ತಾಂತ್ರಿಕ ಸೌಲಭ್ಯಗಳನ್ನೂ ಹೊಂದಿದೆ. ಆರು ತಿಂಗಳ ಪ್ರೊಫೆಷನಲ್ ಅಂಡ್ ಎಂಟ್ರಪ್ರೆನ್ಯೂರಲ್ ಎಕ್ಸಲೆನ್ಸ್ ತರಬೇತಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಲವು ಬಹುರಾಷ್ಟ್ರೀಯ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಅಭ್ಯರ್ಥಿಗೆ ತಾನು ಕೆಲಸ ನಿರ್ವಹಿಸುವ ಕೆಲಸದ ಕಚೇರಿ ಇರಬಹುದಾದಂತೆಯೇ ತರಬೇತಿ ಕೊಠಡಿಯ ಒಳಾಂಗಣ ವಿನ್ಯಾಸ ಮಾಡಲಾಗಿದೆ.

`ಪದವಿ ಪಡೆದ ಬಹುತೇಕ ಅಭ್ಯರ್ಥಿಗಳು ತಮ್ಮ `ಇಷ್ಟದ~ ಕೆಲಸಕ್ಕೆ ಬದಲು ತಮಗೆ `ಒಲಿದ~ ಮೊದಲ ವೃತ್ತಿಯನ್ನೇ ಮುಂದುವರಿಸಿಕೊಂಡು ಹೋಗುತ್ತಾರೆ. ಇದರಿಂದ ಅಭ್ಯರ್ಥಿಯು ತನ್ನದಲ್ಲದ ಕ್ಷೇತ್ರಕ್ಕೆ ಹೊಂದಿಕೊಳ್ಳುವುದು ಅನಿವಾರ್ಯ. ಹೀಗಾಗಿ ಅಭ್ಯರ್ಥಿಯು ವೃತ್ತಿಯಲ್ಲಿ ಹೆಚ್ಚು ಎತ್ತರಕ್ಕೆ ಹೋಗಲಾರ.
 
ಇಂಥ ಸಂದರ್ಭದಲ್ಲಿ ಪದವಿ ಮುಗಿದೊಡನೆ ಕೆಲಸ ನಿರ್ವಹಿಸುವ ಬದಲು ತಾವು ಪಡೆದ ಪದವಿ ಹಾಗೂ ತಾನು ಸಮರ್ಥವಾಗಿ ನಿಭಾಯಿಸಬಲ್ಲ ಇಷ್ಟದ ಕ್ಷೇತ್ರವನ್ನು ಆರಿಸಿಕೊಂಡಾಗ ಪ್ರಗತಿ ಸಾಧಿಸಬಹುದು.

ಇದಕ್ಕಾಗಿ ಅಪೆಕ್ಸ್ ಗ್ಲೋಬಲ್‌ಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಯ ಕೌನ್ಸೆಲಿಂಗ್ ನಡೆಸಿ ಅವರಿಗೆ ಸರಿಹೊಂದುವ ಕ್ಷೇತ್ರದ ಕುರಿತು ತರಬೇತಿ ನೀಡಲಾಗುತ್ತದೆ~ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸುತ್ತಾರೆ.

ಕಾಲೇಜಿನಿಂದ ನೇರವಾಗಿ ವೃತ್ತಿ ಜೀವನಕ್ಕೆ ಕಾಲಿಡುವಾಗ ಇರಬೇಕಾದ ಸ್ವಯಂ ನಿರ್ವಹಣೆ, ವೈಯಕ್ತಿಕ ಅಭಿವೃದ್ಧಿಯ ಜತೆಗೆ ಆತ್ಮ ವಿಶ್ವಾಸ, ಕೆಲಸದ ಸ್ಥಳದಲ್ಲಿ ಇರಬೇಕಾದ ನಡವಳಿಕೆ, ಸಮಸ್ಯೆ ನಿರ್ವಹಿಸುವ ಕೌಶಲ್ಯ, ಸಮಯ ನಿರ್ವಹಣೆ ಹಾಗೂ ಎಲ್ಲಕ್ಕಿಂಥ ಮುಖ್ಯವಾಗಿ ಪರಿಣಾಮಕಾರಿ ಸಂವಹನ ಕೌಶಲ್ಯವನ್ನು ಇಲ್ಲಿ ಹೇಳಿಕೊಡಲಾಗುತ್ತಿದೆ.

ಇವೆಲ್ಲವನ್ನು ಕಲಿಸಲು ಪಿಇಎನ್ ಇಂಟರ್‌ನ್ಯಾಷನಲ್ ಜತೆಗೂಡಿ ಅಭ್ಯರ್ಥಿಗೆ ತಾವು ಕೆಲಸ ಮಾಡಲು ಇಚ್ಛೆಪಡುವ ಕಚೇರಿಯ ವಾತಾವರಣವನ್ನೇ ಸೃಷ್ಟಿಸಲಾಗುತ್ತಿದೆ. ಅಲ್ಲಿಯ ಕೆಲಸದ ಯಥಾವತ್ ಅನುಕರಣೆಯ ಮೂಲಕ ವೃತ್ತಿ ಕೌಶಲ್ಯ ಇಲ್ಲಿ ಕಲಿಸಲಾಗುತ್ತಿದೆ.

ಪಿಇಎನ್ ಸಂಸ್ಥೆ ಈಗಾಗಲೇ ಜಗತ್ತಿನಾದ್ಯಂತೆ 7500 ಪ್ರಾಕ್ಟೀಸ್ ಎಂಟರ್‌ಪ್ರೈಸಸ್ ಹೊಂದಿದೆ. ವ್ಯವಹಾರ ಚತುರತೆ ಕಲಿಸಲು ಐಐಎಂನ ನುರಿತ ತಜ್ಞರು ಇಲ್ಲಿಗೆ ಆಗಮಿಸುತ್ತಾರೆ.

ವರ್ಷಕ್ಕೆ ಎರಡು ತಂಡಗಳಿಗೆ ಅಪೆಕ್ಸ್ ಗ್ಲೋಬಲ್ ತರಬೇತಿ ನೀಡುತ್ತದೆ. ಕೋರ್ಸ್ ಅವಧಿ 6 ತಿಂಗಳು. ಮಾಹಿತಿಗೆ ಸಂಪರ್ಕಿಸಿ: http://apexglobal.org/
 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT