ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳವಿಯಲ್ಲಿ ವೀರಶೈವ ಧರ್ಮಸ್ತಂಭ

Last Updated 10 ಫೆಬ್ರುವರಿ 2012, 5:30 IST
ಅಕ್ಷರ ಗಾತ್ರ

ಕಾರವಾರ: ಧಾರ್ಮಿಕ ಆಯಾಮಕ್ಕೆ ತಾತ್ವಿಕ ನೆಲೆಗಟ್ಟು ರೂಪಿಸಿದ ಚೆನ್ನ ಬಸವಣ್ಣನವರ `ಅಷ್ಟಾವರಣ~, `ಪಂಚಾಚಾರ~, ಹಾಗೂ `ಷಟಸ್ಥಲ~ ತತ್ವ ಆಧರಿಸಿದ, ರಾಜ್ಯದಲ್ಲಿಯೇ ಪ್ರಥಮವೆನ್ನಬಹುದಾದ ವೀರಶೈವ ಧರ್ಮಸ್ತಂಭವಿರುವುದು ಉಳವಿ ಯಲ್ಲಿದೆ.

ವೀರಶೈವ ಧರ್ಮಸ್ತಂಭದ ಬಗ್ಗೆ ಪುಸ್ತಕ, ವಚನ ಗಾಯನದಲ್ಲಿ ಕೇಳಿ ತಿಳಿದಿದ್ದೇವೆ. ಆದರೆ, 40 ಅಡಿ ಕಲ್ಲಿನ ಕಂಬ ಇರುವುದು ಇಲ್ಲಿ ಮಾತ್ರ ಎನ್ನು ತ್ತಾರೆ ಲೋಕೊಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್, ಕಳೆದ ಐದು ದಶಕದಿಂದ ಉಳವಿ ಕ್ಷೇತ್ರಕ್ಕೆ ಬರುತ್ತಿರುವ ಉಳವೆಪ್ಪ ಮಲ್ಲಪ್ಪ ಅನಗೊಳ ಹಾಗೂ ಉಳವಿ ದೇವ ಸ್ಥಾನದ ಸಮಿತಿಯ ಹಿರಿಯ ವ್ಯವಸ್ಥಾಪಕ ರುದ್ರಯ್ಯ ಹೊಸಮಠ.

1974ರಲ್ಲಿ ಧಾರವಾಡ ಮುರು ಘಾಮಠದ ಮಹಾಂತಪ್ಪ ಸ್ವಾಮೀಜಿ ಯವರ ಮಾರ್ಗದರ್ಶನ ದಲ್ಲಿ ಅಂದು ದೇವಸ್ಥಾನ ಸಮಿತಿ ಅಧ್ಯಕ್ಷರಾಗಿದ್ದ ಅಡಿವೆಪ್ಪ ಕಿತ್ತೂರ ಹಾಗೂ ಉಳವೆಪ್ಪ ಅನಿಗೊಳ ವೀರಶೈವ ತತ್ವಗಳನ್ನು ಧರ್ಮಸ್ತಂಭದಲ್ಲಿ ಅಳವಡಿಸುವ ಯೋಜನೆಯನ್ನು ಕೈಗೊಂಡಿದ್ದರು. ಅದೇ ಸಮಯದಲ್ಲಿ ದೇವಸ್ಥಾನದ ಜೀರ್ಣೊದ್ಧಾರ ಮತ್ತು ಬಂಗಾರದ ಕಳಸವಿಡುವ ಯೋಜನೆಯು ಅನುಷ್ಠಾನಗೊಂಡಿತ್ತು. 

 ಸಂಶೋಧಕ ಹಾಗೂ ಸಾಹಿತಿ  ಪ್ರೊ .ವೃಷಭೇಂದ್ರ ಸ್ವಾಮಿಯವರ ಸಲಹೆ ಮೆರೆಗೆ ವೀರಶೈವ ತತ್ವಾಧಾರಿತ ಧರ್ಮ ಸ್ತಂಭ ನಿರ್ಮಾಣ ಯೋಜನೆ ಹಾಗೂ ನೀಲನಕ್ಷೆ ಸಿದ್ಧಗೊಂಡಿತು. ಉಳವೆಪ್ಪ ಅನಿಗೊಳ, ರುದ್ರಯ್ಯ ಹೊಸಮಠ ಹಾಗೂ ಬಿ. ಎಚ್. ದೇಸಾಯಿ ಸ್ವಾಮಿ ಅವರ‌್ನೊಳಗೊಂಡ ತಂಡವು ದೊಡ್ಡ ಬಳ್ಳಾಪುರದ ಗುಡ್ಡದಲ್ಲಿರುವ 40 ಅಡಿ ಉದ್ದದ ಬಿಳಿ ಗ್ರಾನೈಟ್ ಕಲ್ಲನ್ನು ಗುರುತಿಸಿ ಮೂರ್ತಿಕಾರರಿಂದ ಕೆತ್ತನೆ ಮಾಡಿಸಲಾಯಿತು.

ಈ ಸ್ತಂಭವನ್ನು ವಾಹನದ ಮೂಲಕ ಉಳವಿಗೆ ತಂದು ಉಳವಿ ಜಾತ್ರೆಗೆ ಒಂದು ತಿಂಗಳ ಮುಂಚಿತವಾಗಿ ಮಧ್ಯರಾತ್ರಿ 12ಕ್ಕೆ ಸ್ಥಾಪಿಸಲಾಯಿತು ಎನ್ನುತ್ತಾರೆ ಅನಗೊಳ.

ಕುಖ್ಯಾತ ಕಳ್ಳನ ಬಂಧನ
ಇಚಲಕರಂಜಿ (ಚಿಕ್ಕೋಡಿ): ಅಂತರರಾಜ್ಯ ಮನೆಗಳ್ಳರ ತಂಡದ ಮುಖ್ಯಸ್ಥಸಾತಾರಾ ಜಿಲ್ಲೆಯ ಠೇಬೆವಾಡಿಯ ನಿವಾಸಿ ಅಮೋಲ ಲಾಲಾಸಾಹೇಬ ಶೇಳಕೆ (22) ಎಂಬುವನನ್ನು ಇಚಲಕರಂಜಿ ನಗರದ ಗಾವಭಾಗ ಠಾಣೆ ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT