ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಬಿಎ ಕೌನ್ಸೆಲಿಂಗ್ ತಡ: ವಿದ್ಯಾರ್ಥಿಗಳ ಪರದಾಟ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಾಂತ್ರಿಕ ಕಾರಣಗಳಿಂದಾಗಿ ಎಂಬಿಎ ಕೌನ್ಸೆಲಿಂಗ್ ಮಂಗಳವಾರ ನಾಲ್ಕು ಗಂಟೆ ತಡವಾಗಿ ಆರಂಭವಾದ್ದರಿಂದ ಪೋಷಕರು, ವಿದ್ಯಾರ್ಥಿಗಳು ಪರದಾಡಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ್ದ ವೇಳಾಪಟ್ಟಿ ಪ್ರಕಾರ ಬೆಳಿಗ್ಗೆ 8ಕ್ಕೆ ಕೌನ್ಸೆಲಿಂಗ್ ಆರಂಭವಾಗಬೇಕಿತ್ತು. ಆದರೆ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಮಧ್ಯಾಹ್ನ 12 ಗಂಟೆಗೆ ಕೌನ್ಸೆಲಿಂಗ್ ಆರಂಭವಾಯಿತು. ಇದರಿಂದಾಗಿ ಸುಮಾರು ಮೂರು ಸಾವಿರ ವಿದ್ಯಾರ್ಥಿಗಳು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಕಾಯುವಂತಾಯಿತು.

ತಡವಾಗಿ ಆರಂಭವಾದರೂ ನಿಗದಿಯಂತೆ ಮಂಗಳವಾರವೇ ಕೌನ್ಸೆಲಿಂಗ್ ಪೂರ್ಣಗೊಂಡಿದೆ. ರಾತ್ರಿ 9 ಗಂಟೆ ಸುಮಾರಿಗೆ ಕೌನ್ಸೆಲಿಂಗ್ ಪ್ರಕ್ರಿಯೆ ಮುಗಿಯಿತು. ಮೊದಲ ದಿನವಾದ್ದರಿಂದ ಸ್ವಲ್ಪ ಸಮಸ್ಯೆ ಆಯಿತು. ಬುಧವಾರ ನಿಗದಿಯಂತೆ ಬೆಳಿಗ್ಗೆ 8ಕ್ಕೆ ಎಂಸಿಎ ಕೌನ್ಸೆಲಿಂಗ್ ಆರಂಭವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಎಸ್.ಪಿ.ಕುಲಕರ್ಣಿ ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಗುರುವಾರ ಎಂ.ಇ/ಎಂ.ಟೆಕ್ ಕೋರ್ಸ್ ಪ್ರವೇಶಕ್ಕಾಗಿ ಕೌನ್ಸೆಲಿಂಗ್ ನಡೆಯಲಿದೆ. ಪ್ರಮುಖ ಕಾಲೇಜುಗಳಲ್ಲಿ ಎಂಬಿಎ ಸೀಟುಗಳು ಮಂಗಳವಾರವೇ ಖಾಲಿಯಾಗಿವೆ. ಹೊಸ ಹಾಗೂ ಅಷ್ಟೇನೂ ಪ್ರಮುಖವಲ್ಲದ ಕಾಲೇಜುಗಳಲ್ಲಿ ಮಾತ್ರ ಕೆಲವು ಸೀಟುಗಳು ಉಳಿದುಕೊಂಡಿವೆ ಎಂದು ಕುಲಕರ್ಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT