ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಸ್‌ಸಿ ತಂಡಕ್ಕೆ ಜಯ

Last Updated 2 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಎಎಸ್‌ಸಿ ತಂಡ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ (ಕೆಎಸ್‌ಎಚ್ಎ ) ಆಶ್ರಯದ ರಾಜ್ಯ ‘ಎ’ ಡಿವಿಷನ್ ಹಾಕಿ ಲೀಗ್ ಟೂರ್ನಿಯ ಪಂದ್ಯದಲ್ಲಿ ಜಯ ಸಂಪಾದಿಸಿದೆ.

ಕೆಎಸ್‌ಎಚ್‌ಎ ಹಾಕಿ ಕ್ರೀಡಾಂಗಣ ದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎಎಸ್‌ಸಿ ತಂಡ 4–2 ರಲ್ಲಿ ಸಿನರ್ಜಿ ಎಫ್‌ಸಿ ತಂಡವನ್ನು ಮಣಿಸಿತು. ವಿಜಯಿ ತಂಡದ ಪರ ಆನಂದ್ ನಾಗ್ (15 ನೇ  ನಿಮಿಷ), ಮಹೇಶ್ವರ್ ನಾಗ್ (24 ನಿ), ಸಂಜಯ್‌ ಟೊಪ್ಪೊ (53 ನಿ) ಹಾಗೂ ಗುರಿಯಾ ಭೇಂಗ್ರಾ (58 ನಿ) ತಲಾ ಒಂದು ಗೋಲು ಗಳಿಸಿ ತಂಡದ ಜಯಕ್ಕೆ ಕಾರಣರಾದರು. ಸಿನರ್ಜಿ ತಂಡದ ಪರ ಶ್ರೀಧರ್ ಮತ್ತು ಶಶಾಂಕ್ ಕ್ರಮವಾಗಿ 41 ಹಾಗೂ 46 ನೇ ನಿಮಿಷದಲ್ಲಿ ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT