ಬೆಂಗಳೂರು (ಐಎಎನ್‌ಎಸ್): ಭಾರತದ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ನ ಸಹಯೋಗದಲ್ಲಿ ಯುದ್ಧ ವಿಮಾನ ಹಾಗೂ ಹೆಲಿಕಾಫ್ಟರ್ ಗಳಲ್ಲಿ ಅಳವಡಿಸಿ ಬಳಸಬಹುದಾದ ಎಲೆಕ್ಟ್ರಾನಿಕ್ ಆಯುಧ ಗುಚ್ಛಗಳ ತಯಾರಿಕೆಗಾಗಿ ಜಂಟಿ ಯೋಜನೆಯೊಂದನ್ನು ರೂಪಿಸಲಾಗಿದೆ ಎಂದು ಸ್ವಿಡನ್ ನ ಯುದ್ಧ ಸಾಮಗ್ರಿ ತಯಾರಿಕೆ ಮತ್ತು ಮಾರಾಟ ಸಂಸ್ಥೆ ~ಸಾಬ’ ಬುಧವಾರ ಇಲ್ಲಿ ಪ್ರಕಟಿಸಿದೆ.
ಬುಧವಾರ ಇಲ್ಲಿ ವಿಷಯ ತಿಳಿಸಿದ ಭಾರತದಲ್ಲಿನ ~ಸಾಬ್~ ಶಾಖೆಯ ಮುಖ್ಯಸ್ಥ ಇಂದ್ರಜಿತ್ ಸಿಯಾಲ್ ಅವರು, ಪ್ರಸ್ತುತ ಜಂಟಿ ಯೋಜನೆಯಲ್ಲಿ ಪ್ರಾಥಮಿಕವಾಗಿ ಈ ಎಲೆಕ್ಟ್ರಾನಿಕ್ ಆಯುಧ ಗುಚ್ಛಗಳನ್ನು ಸೇನೆಯ ಹೆಲಿಕಾಪ್ಟರ್ ಗಳಲ್ಲಿ ಮತ್ತು ಫೈಟರ್ ಜೆಟ್ ಗಳಲ್ಲಿ ಬಳಸಬಹುದು ಎಂದಿದ್ದಾರೆ.
ಸದ್ಯಕ್ಕೆ ಈ ಎಲೆಕ್ಟ್ರಾನಿಕ್ ಆಯುಧ ಗುಚ್ಛಗಳನ್ನು ಮಲೇಶಿಯಾದವರು ತಮ್ಮ ಉತ್ಕೃಷ್ಟವಾದ ಯುದ್ಧ ವಿಮಾನ ~ಸೂ-3ಎಂಕೆಕೆ~ಗಳಲ್ಲಿ ಬಳಸುತ್ತಿದ್ದಾರೆ.
ಈ ಜಂಟಿ ಯೋಜನೆಗೆ ~ಸಾಬ್~ ಮತ್ತು ~ಎಚ್ಎಎಲ್~ ಆಡಳಿತ ಮಂಡಳಿಗಳು ತಾತ್ವಿಕವಾಗಿ ಒಪ್ಪಿಗೆ ನೀಡಿವೆ. ಈ ಜಂಟಿ ಯೋಜನೆ ಕಾರ್ಯರೂಪಕ್ಕೆ ಬರುವಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.
ಏಚ್ಎಎಲ್ ಗೆ ಪೂರಕವಾಗಿ ಸಾಬ್ ಸಂಸ್ಥೆಯು ಬೆಂಗಳೂರಿನಲ್ಲಿ ತನ್ನದೇ ಆದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವಲ್ಲಿ ಉತ್ಸಕವಾಗಿದೆ ಎಂದೂ ಅವರು ಹೇಳಿದ್ದಾರೆ.