ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್.ಸಂತೋಷ್ ಹೆಗ್ಡೆ ಕರೆ ಲೋಕಾಯುಕ್ತ ವರದಿಗೆ ಒತ್ತಾಯಿಸಿ

Last Updated 29 ಸೆಪ್ಟೆಂಬರ್ 2011, 19:45 IST
ಅಕ್ಷರ ಗಾತ್ರ

ಬೆಂಗಳೂರು: `ಅಕ್ರಮ ಗಣಿಗಾರಿಕೆ ಸಂಬಂಧ ಲೋಕಾಯುಕ್ತ ಸಲ್ಲಿಸಿರುವ ವರದಿಯನ್ನು ಅನುಷ್ಠಾನಕ್ಕೆ ತರಲು ಜನತೆ ಒತ್ತಾಯಿಸಬೇಕು~ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಕರೆ ನೀಡಿದರು.

ಸೇಂಟ್‌ಮಾರ್ಕ್ಸ್ ಕೆಥೆಡ್ರಲ್ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ಭ್ರಷ್ಟಾಚಾರದಲ್ಲಿ ಇತ್ತೀಚಿನ ಆವಿಷ್ಕಾರಗಳು~ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`2008ರಲ್ಲಿಯೇ ಅಕ್ರಮ ಗಣಿಗಾರಿಕೆ ಕುರಿತು ಒಂದು ವರದಿ ಸಲ್ಲಿಸಲಾಯಿತು. ಅದು ಕಾರ್ಯರೂಪಕ್ಕೆ ಬರಲಿಲ್ಲ. ಇತ್ತೀಚೆಗೆ ಸಲ್ಲಿಸಲಾದ ವರದಿ ಬಗ್ಗೆ ಅಟ್ವೊಕೇಟ್ ಜನರಲ್ ಅವರು ಇದು ಕೇವಲ ಶಿಫಾರಸು ಎಂದು ಹೇಳುತ್ತಿದ್ದಾರೆ.
 
ಸಿವಿಲ್ ಅಥವಾ ಕ್ರಿಮಿನಲ್ ಈ ಎರಡರಲ್ಲಿ ಯಾವುದೇ ನ್ಯಾಯಾಲಯ ವಿಚಾರಣೆ ಮಾಡಿದರೂ ಗಣಿ ಪ್ರಕರಣ ಶಕ್ತಿಶಾಲಿಯಾಗಿಯೇ ಉಳಿಯುತ್ತದೆ~ ಎಂದರು.

`ಅಕ್ರಮ ಗಣಿಗಾರಿಕೆಯ ಒಟ್ಟು ಮೊತ್ತ 16 ಸಾವಿರ ಕೋಟಿ. 2ಜಿ ಹಗರಣದಷ್ಟು ಇದು ದೊಡ್ಡದಲ್ಲದೇ ಇರಬಹುದು. ಆದರೆ ಇದು ಖನಿಜ ಸಂಪತ್ತನ್ನು ಶಾಶ್ವತವಾಗಿ ಬರಿದು ಮಾಡುತ್ತದೆ ಎಂಬುದು ಗಮನಿಸಬೇಕಾದ ಸಂಗತಿ~ ಎಂದು ಹೇಳಿದರು.

`ವ್ಯಕ್ತಿಯೊಬ್ಬರು `ಲೋಕ ದೋಖಾ~ ಎಂಬ ಕೃತಿ ಬರೆಯಲು ನಿರ್ಧರಿಸಿದ್ದಾರೆ. ಅಕ್ರಮ ಗಣಿಗಾರಿಕೆ ಕುರಿತು ಮಾತ್ರ ಲೋಕಾಯುಕ್ತ ವರದಿ ಸಲ್ಲಿಸಿರುವುದಕ್ಕೆ ಅವರಿಂದ ಈ ಪ್ರತಿಕ್ರಿಯೆ ಹೊರಟಿದೆ. ಎಲ್ಲಾ ಹಗರಣಗಳನ್ನು ಬಯಲಿಗೆಳೆದಿದ್ದರೆ  `ದೋಖಾ ಲೋಕ~ದ ಅನಾವರಣವಾಗುತ್ತಿತ್ತು” ಎಂದು ಮಾರ್ಮಿಕವಾಗಿ ಹೇಳಿದರು.

ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, `ಸಂವಿಧಾನಾತ್ಮಕವಾಗಿಯೇ ಅಣ್ಣಾ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದಾರೆ. ಶಾಂತಿಯುತ ಪ್ರತಿಭಟನೆಗೆ ಬ್ರಿಟಿಷರೇ ಅಡ್ಡಿಪಡಿಸಲಿಲ್ಲ. ಆದರೆ ಒಂದು ಕಲ್ಲನ್ನೂ ಹೊಡೆಯದೆ ನಡೆದ ಅಣ್ಣಾ ಹೋರಾಟವನ್ನು ಹತ್ತಿಕ್ಕುವ ಯತ್ನ ನಡೆಯಿತು~ ಎಂದು ವಿಷಾದ ವ್ಯಕ್ತಪಡಿಸಿದರು.

`ಕಠೋರ ಶಿಕ್ಷೆಯಿಂದ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಚೀನಾದಲ್ಲಿ ಭ್ರಷ್ಟಾಚಾರಕ್ಕೆ ಮರಣ ದಂಡನೆಯಂತಹ ಕಠಿಣ ಕಾನೂನುಗಳಿವೆ. ಆದರೂ ಭಾರತಕ್ಕಿಂತ ಚೀನಾದಲ್ಲಿ ಹೆಚ್ಚು ಭ್ರಷ್ಟಾಚಾರ ಇದೆ~ ಎಂದರು.

ಮಾಜಿ ಸಂಸದ ಎಚ್.ಟಿ. ಸಾಂಗ್ಲಿಯಾನಾ, ಟರ್ಬೋಕಂ ಅಂತರರಾಷ್ಟ್ರೀಯ ಸಂಸ್ಥೆಯ ಡೇನಿಯಲ್ ದೇವದತ್ತ, ಸುಬ್ರಹ್ಮಣ್ಯ ಇವಾಟುರಿ, ಅವಾಂತಿ ಬೆಲೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT